ಮಥುರಾ ಹಿಂಸಾಚಾರ: ಸಿಬಿಐ ತನಿಖೆಗೆ ಆದೇಶಿಸಲು ಸುಪ್ರೀಂಕೋರ್ಟ್ ನಕಾರ

ಹೊಸದಿಲ್ಲಿ, ಜೂ.7: ಮಥುರಾದಲ್ಲಿ ಇಬ್ಬರು ಪೊಲೀಸದದ ಅಧಿಕಾರಿಗಳ ಸಹಿತ 24 ಮಂದಿಯ ಹತ್ಯೆಗೆ ಕಾರಣವಾದ ಹಿಂಸಾಚಾರದ ಕುರಿತು ಸಿಬಿಐ ತನಿಖೆಗೆ ಆದೇಶಿಸಲು ಸುಪ್ರೀಂಕೋರ್ಟ್ ಇಂದು ನಿರಾಕರಿಸಿದೆ.
ನ್ಯಾಯಮೂರ್ತಿಗಳಾದ ಪಿ.ಸಿ.ಘೋಷ್ ಹಾಗೂ ಅಮಿತಾಭ್ ರಾಯ್ಯವರಿದ್ದ ರಜಾ ಕಾಲದ ಪೀಠವೊಂದು ತಾನು ಯಾವುದೇ ಆದೇಶ ನೀಡುವ ಇಚ್ಛೆಯಲ್ಲಿಲ್ಲ ಎಂದು ಹೇಳಿದು, ಪರಿಹಾರಕ್ಕಾಗಿ ಅಲಹಾಬಾದ್ ಹೈಕೋರ್ಟ್ಗೆ ಹೋಗುವಂತೆ ಅರ್ಜಿದಾರರಿಗೆ ಸಲಹೆ ನೀಡಿದೆ.
ಅರ್ಜಿದಾರ, ವಕೀಲ ಹಾಗೂ ದಿಲ್ಲಿಯ ಬಿಜೆಪಿ ವಕಾತಿರ ಅಶ್ವಿನಿ ಉಪಾಧ್ಯಾಯರ ಪರ ವಕೀಲೆ ಗೀತಾ ಲೂಥ್ರಾ,ನಗರದಲ್ಲಿ ಭಾರೀ ಪ್ರಮಾಣದ ಹಿಂಸಾಚಾರ ವರದಿಯಾಗಿದೆ. ಸಾಕ್ಷಗಳನ್ನು ನಾಶಪಡಿಸಲಾಗುತಿತಿದೆಯೆಂದು ವಿಚಾರಣೆಯ ವೇಳೆ ವಾದಿಸಿದರು.
ಉತತಿರ ಪ್ರದೇಶದ ಎಸ್ಪಿ ನೇತೃತ್ವದ ಸರಕಾರವು ಸಿಬಿಐ ತನಿಖೆಗೆ ಶಿಫಾರಸು ಮಾಡುತಿತಿಲ್ಲ ಹಾಗೂ ರಾಜ್ಯದ ತನಿಖೆ ಸಂಸ್ಥೆಗಳು ಱಱತಮ್ಮ ಕೆಲಸವನ್ನು ಸರಿಯಾಗಿ ನಿರ್ವಹಿಸುತಿತಿಲ್ಲೞೞಎಂದು ಅವರು ಹೇಳಿದರು.
ಇದಕ್ಕುತರಿಸಿದ ಪೀಠ, ರಾಜ್ಯದ ತನಿಖೆ ಸಂಸ್ಥೆಗಳಿಂದ ಲೋಪವಾಗಿದೆಯೆಂದು ಸೂಚಿಸುವ ಸಾಕ್ಷಗಳು ಅರ್ಜಿಯಲಿಲ್ಲ. ಯಾವುದೇ ಸಾಕ್ಷವಿಲ್ಲದೆ ನ್ಯಾಯಾಲಯ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದಿತು.