ಕತರ್ ನಲ್ಲಿ ಖೈದಿಗಳ ಬಿಡುಗಡೆಗೂ , ಪ್ರಧಾನಿ ಮೋದಿ ಭೇಟಿಗೂ ಎತ್ತಣಿಂದೆತ್ತಣ ಸಂಬಂಧ ?

ಹೊಸದಿಲ್ಲಿ, ಜೂ 7 : ಪ್ರಧಾನಿ ಮೋದಿ ಅವರ ಕತರ್ ಭೇಟಿಯ ಬೆನ್ನಲ್ಲೇ ಆ ದೇಶ 23 ಭಾರತೀಯ ಖೈದಿಗಳನ್ನು ಬಿಡುಗಡೆ ಮಾಡಿದೆ. ಕತರ್ ಅಮೀರ್ ಶೇಕ್ ತಮೀಮ್ ಬಿನ್ ಹಮದ್ ಅಲ್ ತನಿ ಅವರನ್ನು ಪ್ರಧಾನಿ ಮೋದಿ ಭೇಟಿ ಮಾಡಿದ ಬೆನ್ನಲ್ಲೇ ಖೈದಿಗಳ ಬಿಡುಗಡೆಯಾಗಿದೆ. ಈ ಬಗ್ಗೆ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮೋದಿಯವರ ಮನವಿ ಮೇರೆಗೆ 23 ಖೈದಿಗಳನ್ನು ಬಿಡುಗಡೆ ಮಾಡಿರುವುದಕ್ಕೆ ಧನ್ಯವಾದ ಎಂದು ಸೋಮವಾರ ಟ್ವೀಟ್ ಮಾಡಿದ್ದರು.
ಆದರೆ ವಾಸ್ತವ ಏನೆಂದರೆ, ರಮಝಾನ್ ಸಂದರ್ಭದಲ್ಲಿ ಪ್ರತಿವರ್ಷ ಕತರ್ ಸರ್ಕಾರ ಸಂಪ್ರದಾಯದಂತೆ ಕ್ಷಮೆ ನೀಡಿ ಖೈದಿಗಳನ್ನು ಬಿಡುಗಡೆ ಮಾಡುತ್ತದೆ. ಈ ಬಾರಿಯೂ ಅದೇ ಸಂಪ್ರದಾಯದಂತೆ ಖೈದಿಗಳನ್ನು ಬಿಡುಗಡೆ ಮಾಡಿದೆ. ಆದರೆ ಮೋದಿಯವರ ಭೇಟಿಗೂ, ಈ ಖೈದಿಗಳ ಬಿಡುಗಡೆಗೂ ಯಾವುದೇ ಸಂಬಂಧವಿಲ್ಲ ! ಇದು ಕಾಕತಾಳೀಯ ಅಷ್ಟೇ.
ಈ ಬಗ್ಗೆ ಸುಷ್ಮಾ ಸ್ವರಾಜ್ ಅವರ ಟ್ವೀಟ್ ಮತ್ತು ಖೈದಿಗಳ ಬಿಡುಗಡೆಯ ಹಿನ್ನೆಲೆಯಲ್ಲಿ 'ದ ಹಿಂದೂ' ಪತ್ರಿಕೆಯ ಅಂತಾರಾಷ್ಟ್ರೀಯ ವ್ಯವಹಾರಗಳ ಸಂಪಾದಕ ಫೇಸ್ಬುಕ್ ನಲ್ಲೊಂದು ಪೋಸ್ಟ್ ಹಾಕಿದ್ದಾರೆ.
Thank you Qatar - Thanks for releasing 23 Indian prisoners on the request of Prime Minister @narendramodi .
— Sushma Swaraj (@SushmaSwaraj) June 7, 2016







