Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಪುತ್ತೂರು: ಮೂಲಸೌಕರ್ಯಗಳಿಂದ...

ಪುತ್ತೂರು: ಮೂಲಸೌಕರ್ಯಗಳಿಂದ ವಂಚಿತವಾಗಿದೆ ಮಾಯಿಲ ಕಾಲನಿ

ನಗರಸಭೆಯ ಅಧಿಕಾರಿಗಳ ಭೇಟಿ: ಅಭಿವೃದ್ಧಿಯ ಭರವಸೆ

ವಾರ್ತಾಭಾರತಿವಾರ್ತಾಭಾರತಿ7 Jun 2016 9:03 PM IST
share
ಪುತ್ತೂರು: ಮೂಲಸೌಕರ್ಯಗಳಿಂದ ವಂಚಿತವಾಗಿದೆ ಮಾಯಿಲ ಕಾಲನಿ

ಪುತ್ತೂರು, ಜೂ.7: ಸರಕಾರ ಬಡವರ ಉದ್ಧಾರದ ಹೆಸರಿನಲ್ಲಿ ಅದೆಷ್ಟೋ ಯೋಜನೆಗಳನ್ನು ಜಾರಿಗೆ ತಂದರೂ ಯೋಜನೆಗಳು ಇನ್ನೂ ಕಟ್ಟಕಡೆಗೆ ಬಡಜನತೆಯ ಬಳಿಗೆ ತಲುಪಿಲ್ಲ. ಜನಸಾಮಾನ್ಯರ ಪಾಲಿಗೆ ಇನ್ನೂ ಸರಕಾರದ ಯೋಜನೆಗಳು ಗಗನ ಕುಸುಮವಾಗಿಯೇ ಉಳಿದಿದೆ ಎನ್ನುವುದಕ್ಕೆ ಪುತ್ತೂರು ನಗರಸಭೆಯ ವ್ಯಾಪ್ತಿಯಲ್ಲಿರುವ ಪರಿಶಿಷ್ಟ ಜಾತಿಯಲ್ಲಿ ಒಂದು ಪ್ರತ್ಯೇಕ ವಿಭಾಗವಾಗಿದ್ದು, ಅಳಿವಿನಂಚಿನಲ್ಲಿರುವ ಆದಿವಾಸಿ ಮಾಯಿಲ ಜನಾಂಗದ ಕಾಲನಿಯೊಂದು ಪ್ರತ್ಯಕ್ಷ ಸಾಕ್ಷಿಯಾಗಿದೆ.

ಪುತ್ತೂರು ನಗರದಿಂದ 4 ಕಿ.ಮೀ ದೂರದಲ್ಲಿರುವ ಅರ್ತಿಪದವು ಎಂಬಲ್ಲಿನ ಕಾಲನಿಯಲ್ಲಿ ಸುಮಾರು 50 ಮಂದಿ ಇರುವ ಮಾಯಿಲ ಜನಾಂಗದ 8 ಕುಟುಂಬ ವಾಸ್ತವ್ಯವಿದೆ. ಇಲ್ಲಿ ಬದುಕುವ ಈ ಮಂದಿಯ ಸ್ಥಿತಿ ನಿಜಕ್ಕೂ ಕರುಣಾಜನಕವಾಗಿದೆ. ರಸ್ತೆ,ವಿದ್ಯುತ್, ಶೌಚಾಲಯ,ಕುಡಿಯುವ ನೀರು ಹೀಗೆ ಎಲ್ಲಾ ಸೌಲಭ್ಯಗಳಿಂದಲೂ ವಂಚಿತರಾಗಿರುವ ಈ ಕುಟುಂಬಗಳು ಇಂದಿಗೂ ಅಭಿವೃದ್ಧಿ ಕಂಡಿಲ್ಲ ಎನ್ನುವುದು ದುರಂತವೇ ಸರಿ.

ಈ ಜನಾಂಗ ತನ್ನದೇ ಆದ ಭಾಷೆಯನ್ನು ಹೊಂದಿದೆ. ತುಳು, ಮಲೆಯಾಳಂ, ಕನ್ನಡ ಹಾಗೂ ಕೊಡವ ಭಾಷೆಗಳ ಮಿಶ್ರಣವಾಗಿರುವ ಈ ಮಾಯಿಲ ಜನಾಂಗದ ಭಾಷೆ ಬಹುಷ ಪುತ್ತೂರಿನ ಈ ಕಾಲನಿ ಬಿಟ್ಟರೆ ಬೇರಾವ ಕಡೆಗಳಲ್ಲಿ ಕೇಳಲು ಸಿಗದು. ತಾಲೂಕಿನಲ್ಲಿಯೇ ಏಕೈಕ ಮಾಯಿಲ ಜನಾಂಗ ಇರುವ ಪ್ರದೇಶ ಇದಾಗಿದೆ. ಇದನ್ನು ಹೊರತು ಪಡಿಸಿದರೆ ಕೊಡಗು ಹಾಗೂ ಸುಳ್ಯ ಭಾಗಗಳಲ್ಲಿ ಇವರ ಜನಾಂಗ ಇದೆ ಎನ್ನುವುದು ಇಲ್ಲಿನ ನಿವಾಸಿ ಅಚ್ಚುತ ಎಂಬವರ ಅಭಿಪ್ರಾಯ.

ಪುತ್ತೂರು ಪುರಸಭೆಯು ನಗರಸಭೆಯಾಗಿ ಪರಿವರ್ತನೆಗೊಂಡಿದ್ದರೂ ಈ ಕುಟುಂಬಗಳ ಪಾಲಿಗೇನೂ ಈ ತನಕ ಪ್ರಯೋಜನಕ್ಕೆ ಬಂದಿಲ್ಲ. ನಾಲ್ಕು ಮನೆಗಳಿಗೆ ಒಂದು ಕುಡಿಯುವ ನೀರಿನ ನಳ್ಳಿ ಮಾತ್ರ ಇವರಿಗೆ ಸಿಕ್ಕಿರುವ ಏಕೈಕ ಸರಕಾರಿ ಸೌಲಭ್ಯ. ಇದೇ ಮನೆಗಳ ಪಕ್ಕದಲ್ಲಿರುವ ಇತರ ನಾಲ್ಕು ಮನೆಗಳಿಗೂ ಈ ಸೌಲಭ್ಯವೂ ಇಲ್ಲ. ಮನೆ ನಮ್ಮದು ಎನ್ನುವುದಕ್ಕೆ ದಾಖಲೆಯೂ ಇಲ್ಲ.

ಪುತ್ತೂರು ನಗರ ಸಭೆಯ ಅಧ್ಯಕ್ಷರೇ ಈ ವಾರ್ಡಿನ ಸದಸ್ಯರಾಗಿದ್ದರೂ ಮೂಲ ಸೌಕರ್ಯಗಳಿಂದ ವಂಚಿತಗೊಂಡಿರುವ ಈ ಕುಟುಂಬಗಳ ಬದುಕಿನ ಮೇಲೆ ಬೆಳಕು ಚೆಲ್ಲುವವರು ಯಾರು ಎಂಬ ಪ್ರಶ್ನೆ ಎದುರಾಗಿದೆ. ಬಲ್ನಾಡು ಗ್ರಾಮಪಂಚಾಯತ್‌ನಿಂದ ಬೇರ್ಪಟ್ಟು ನಗರಸಭೆಗೆ ಸೇರ್ಪಡೆಗೊಂಡ ಈ ಭಾಗದಲ್ಲಿ ಮೂಲಸೌಕರ್ಯಗಳಾದ ರಸ್ತೆ, ಶೌಚಾಲಯ, ವಿದ್ಯುತ್, ಕುಡಿಯುವ ನೀರು ಇನ್ನೂ ಕನಸಿನ ಗಂಟಾಗಿಯೇ ಉಳಿದಿದೆ. ನಗರ ಭಾಗದ ಹತ್ತಿರದಲ್ಲಿರುವ ಈ ಕಾಲನಿಯ ಜನತೆ ಹಲವಾರು ವರ್ಷಗಳಿಂದ ತಮ್ಮ ಮೂಲಭೂತ ಸೌಕರ್ಯಗಳಿಗಾಗಿ ಬೇಡಿಕೆ ಇಡುತ್ತಲೇ ಬಂದಿದ್ದಾರೆ. ಬೇಡಿಕೆ ಈಡೇರಿಸಿಕೊಳ್ಳಲು ಅರ್ಜಿಯ ಮೇಲೆ ಅರ್ಜಿಗಳನ್ನು ಸಂಬಂಧಪಟ್ಟವರಿಗೆ ಸಲ್ಲಿಸುತ್ತಲೇ ಬಂದಿದ್ದಾರೆ. ಆದರೆ ಪರಿಣಾಮ ಪಾತ್ರ ಶೂನ್ಯ.

ಜನಸಾಮಾನ್ಯರ ಬದುಕನ್ನು ಅಭಿವೃದ್ಧಿ ಪಡಿಸಲು ಇರುವ ಸ್ಥಳೀಯಾಡಳಿತ ವ್ಯವಸ್ಥೆಯಾಗಿರುವ ನಗರಸಭೆ ಈ ನಿಟ್ಟಿನಲ್ಲಿ ಫಲಪ್ರದವಾಗಿ ಕರ್ತವ್ಯ ನಿರ್ವಹಣೆ ಮಾಡಲೇ ಇಲ್ಲ ಎನ್ನುವುದು ಆರೋಪ. ಇಲ್ಲಿನ ಕೆಲವು ಮನೆಗಳಲ್ಲಿ ಪಡಿತರ ಚೀಟಿ ಇದೆ. ಆದರೆ ಮನೆಗೆ ಹಕ್ಕುಪತ್ರ ಇಲ್ಲ. ವಿಚಿತ್ರವೆಂದರೆ ಒಂದು ಮನೆಗೆ ಹಕ್ಕುಪತ್ರವಿದ್ದರೂ ಅದರಲ್ಲಿ ಆ ಮನೆಯ ನಿವಾಸಿಯ ಹೆಸರೇ ಇಲ್ಲ. ಇರುವ ಮನೆಗಳು ಬೀಳುವ ಸ್ಥಿತಿಯಲ್ಲಿವೆ. ಇದರಲ್ಲಿಯೇ ಬದುಕುತ್ತಿರುವ ಮಂದಿಯ ಆರು ಮಕ್ಕಳು ಭವಿಷ್ಯದ ಕನಸುಗಳನ್ನು ಹೊತ್ತುಕೊಂಡು ಆತಂಕ ಪಡುತ್ತಿದ್ದಾರೆ. ಸರಿಯಾದ ಶೌಚಾಲಯವಿಲ್ಲದೆ, ಕುಡಿಯಲು ಶುದ್ಧ ನೀರಿಲ್ಲದೆ, ಮಳೆ ಬಂದರೆ ನಿಲ್ಲಲೂ ಜಾಗವಿಲ್ಲದೆ ಅತಂತ್ರ ಸ್ಥಿತಿಯಲ್ಲಿ ಬದುಕುತ್ತಿರುವ ಈ ಮಾಯಿಲ ಜನಾಂಗದ ಮಂದಿಯ ಬದುಕು ನಿಜಕ್ಕೂ ಶೋಚನೀಯವಾಗಿದೆ.

ಇದೇ ವಾರ್ಡಿನ ಸದಸ್ಯೆಯಾಗಿರುವ ಜಯಂತಿ ನಾಯ್ಕೆ ಬಲ್ನಾಡು ಇದೀಗ ನಗರಸಭೆಯ ಅಧ್ಯಕ್ಷೆಯಾಗಿ ಅಧಿಕಾರದಲ್ಲಿದ್ದು, ಈ ಕುಟುಂಬಗಳ ಕಾಲನಿಗೆ ನಗರಸಭೆಯ ಆಯುಕ್ತೆ ರೇಖಾ ಜೆ.ಶೆಟ್ಟಿ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ಭೇಟಿ ನೀಡಿ ಸಮಸ್ಯೆಗಳ ಕುರಿತು ಪರಿಶೀಲನೆ ನಡೆಸಿದ್ದಾರೆ. ಮೂಲಭೂತ ಸೌಕರ್ಯಗಳನ್ನು ಒದಗಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದಾರೆ. ಈ ಹಿಂದೆಲ್ಲಾ ಸಿಕ್ಕ ಭರವಸೆಗಳನ್ನು ನಂಬಿ ರೋಸಿ ಹೋಗಿರುವ ಈ ಕುಟುಂಬ ಮತ್ತೆ ಭರವಸೆಯನ್ನು ನಂಬಿ ಬದುಕು ಕಟ್ಟಿಕೊಂಡಿದೆ.

ಸರಕಾರದಿಂದ ನಮಗೆ ಮನೆಗಳು ಸಿಗುತ್ತಿಲ್ಲ. ಇರುವ ಮನೆಯಲ್ಲಿ ಮಳೆಗಾಲದಲ್ಲಿ ಆತಂಕದಲ್ಲೇ ಉಳಿದುಕೊಳ್ಳಬೇಕಾದ ಪರಿಸ್ಥಿತಿ ಇದೆ. ಕುಡಿಯುವ ನೀರಿನ ಸಮಸ್ಯೆ ಮತ್ತೊಂದು ಸಮಸ್ಯೆಯಾಗಿ ಕಾಡುತ್ತಿದೆ. ಮನೆಗೆ ಬೇಕಾದ ರಸ್ತೆಯೂ ಇಲ್ಲ. ಪೇಟೆಯ ಬದಿಯಲ್ಲಿದ್ದರೂ ನಾಗರಿಕತೆಯಿಂದ ನಾವು ದೂರವೇ ಉಳಿದಿದ್ದೇವೆ. ಈ ಎಲ್ಲಾ ಸಮಸ್ಯೆಗಳ ಸುಳಿಯಲ್ಲಿ ನಾವಿದ್ದರೂ ನಮ್ಮ ಸಮಸ್ಯೆ ಯಾರಿಗೂ ಅರ್ಥವಾಗುತ್ತಿಲ್ಲ. ಚುನಾವಣೆ ಬಂದಾಗ ಮಾತ್ರ ರಾಜಕಾರಣಿಗಳಿಗೆ ನಮ್ಮ ಊರಿನ ನೆನಪಾಗುತ್ತದೆ. ಚುನಾವಣೆ ಮುಗಿದ ಬಳಿಕ ಮರೆತು ಬಿಡುತ್ತಾರೆ.

-ರವಿ ಮಾಯಿಲ, ಸ್ಥಳೀಯ ನಿವಾಸಿ.

ನಮ್ಮ ಕಾಲನಿ ನಿವಾಸಿಗಳಿಗೆ ಮನೆಯ ಹಕ್ಕುಪತ್ರ ಇಲ್ಲ. ಇದು ನಮ್ಮ ಜಾಗ ಎಂದು ಹೇಳಿಕೊಳ್ಳಲು ಬೇಕಾದ ಯಾವುದೇ ಆಧಾರ ಇಲ್ಲ. ಇದರಿಂದಾಗಿ ಸರಕಾರದ ಸೌಲಭ್ಯ ದೊರೆಯುತ್ತಿಲ್ಲ. ಈ ಬಗ್ಗೆ ಪುತ್ತೂರು ಉಪವಿಭಾಗಾಧಿಕಾರಿಗೆ ಮನವಿ ನೀಡಲಾಗಿದೆ. ನಮ್ಮ ತಂದೆಯ ಕಾಲದಿಂದ ಮನೆತೆರಿಗೆ ಪಾವತಿಸುತ್ತಿದ್ದೇವೆ . ಆದರೂ ಎಲ್ಲಾ ಸೌಕರ್ಯಗಳಿಂದ ವಂಚಿತಗೊಂಡಿದ್ದೇವೆ.

 ಕೃಷ್ಣ ಮಾಯಿಲ, ಸ್ಥಳೀಯ ನಿವಾಸಿ.

ಮಾಯಿಲರು ವಾಸ ಮಾಡುತ್ತಿರುವುದು ಅಧ್ಯಕ್ಷರ ಕ್ಷೇತ್ರವಾಗಿದ್ದು, ಅಲ್ಲಿನ ಎಲ್ಲಾ ಕುಟುಂಬಗಳಿಗೆ ಮೂಲಸೌಕರ್ಯ ಒದಗಿಸಲು ನಗರಸಭೆ ಸಿದ್ಧವಾಗಿದೆ. ಈಗಾಗಲೇ ಇಲ್ಲಿನ ಎಲ್ಲಾ ಮಾಯಿಲ ಕುಟುಂಬಗಳಿಗೆ ಹಕ್ಕು ಪತ್ರ ನೀಡುವ ಬಗ್ಗೆ ಉಪವಿಭಾಗಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದೇವೆ. ಕುಡಿಯುವ ನೀರಿನ ವ್ಯವಸ್ಥೆಗೆ ಯೋಜನೆ ರೂಪಿಸಲಾಗಿದೆ. ಅವರು ಯೋಜನೆಯನ್ನು ಪಡೆದುಕೊಳ್ಳಲು ಮುಂದೆ ಬರಬೇಕು. ಪೂರಕ ಸ್ಪಂದನೆ ನೀಡಬೇಕು.

-ಎಚ್.ಮುಹಮ್ಮದ್ ಅಲಿ, ನಗರಸಭಾ ಹಿರಿಯ ಸದಸ್ಯರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X