ರಾಜನಾಥ್‌ಗೆ ಕೇಜ್ರಿವಾಲ್ ಪತ್ರ ಮೋದಿ ವಿರುದ್ಧ ಹೊಸ ದಾಳಿ

ಹೊಸದಿಲ್ಲಿ,ಜೂ.7: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಹೊಸದಾಗಿ ದಾಳಿಯನ್ನು ನಡೆಸಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು, ಮೋದಿ ಸರಕಾರವು 2014ರಿಂದ ನೇಮಿಸಿಕೊಂಡಿರುವ ಸಲಹಾಗಾರರ ವಿವರಗಳನ್ನು ನೀಡುವಂತೆ ಗೃಹಸಚಿವ ರಾಜನಾಥ್ ಸಿಂಗ್ ಅವರಿಗೆ ಬರೆದಿರುವ ಪತ್ರದಲ್ಲಿ ಆಗ್ರಹಿಸಿದ್ದಾರೆ. ದಿಲ್ಲಿ ಸರಕಾರದ ಅಧಿಕಾರಿಗಳು ಮತ್ತು ಸಲಹೆಗಾರರ ಬಗ್ಗೆ ಮಾಹಿತಿಗಳನ್ನು ಗೃಹ ಸಚಿವಾಲಯವು ಕೇಳಿದ್ದು,ಇದಕ್ಕೆ ತೀಕ್ಷವಾಗಿ ಪ್ರತಿಕ್ರಿಯಿಸಿರುವ ಕೇಜ್ರಿವಾಲ್,ಇತರ ರಾಜ್ಯಗಳಿಂದಲೂ ಇಂತಹ ಮಾಹಿತಿಗಳನ್ನು ಕೇಳಲಾಗುತ್ತಿದೆ ಎಂದು ತಾನು ಆಶಿಸಿರುವುದಾಗಿ ತಿಳಿಸಿದ್ದಾರೆ.
ಕಾನೂನು ತಜ್ಞರ ಅಭಿಪ್ರಾಯದಂತೆ ತನ್ನಿಂದ ಈ ಮಾಹಿತಿಗಳನ್ನು ಪಡೆಯಲು ಕೇಂದ್ರ ಸರಕಾರಕ್ಕೆ ಯಾವುದೇ ಅಧಿಕಾರವಿಲ್ಲ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಪ್ರಧಾನಿ ಮೋದಿಯವರು ದಿಲ್ಲಿ ಸರಕಾರದ ವ್ಯವಹಾರಗಳ ಬಗ್ಗೆ ಇಷ್ಟೊಂದು ಆಸಕ್ತಿ ವಹಿಸಿರುವುದು ತನಗೆ ಸಂತಸವನ್ನುಂಟು ಮಾಡಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.
Next Story





