ಪರಮೇಶ್ವರ್‌ನಾಯ್ಕ್ ರಿಂದ ವಿವರಣೆ ಕೋರಿದ ಸಿಎಂ
ಡಿವೈಎಸ್ಪಿ ಶೆಣೈ ರಾಜೀನಾಮೆ ವಿಚಾರ
ಬೆಂಗಳೂರು, ಜೂ.7: ಕೂಡ್ಲಿಗಿ ಡಿವೈಎಸ್ಪಿ ಅನುಪಮಾ ಶೆಣೈ ರಾಜೀನಾಮೆಯಿಂದ ಸೃಷ್ಟಿಯಾಗಿರುವ ಗೊಂದಲಗಳಿಗೆ ಸಂಬಂಧಿಸಿದಂತೆ ವಿವರಣೆ ನೀಡುವಂತೆ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ.ಪರಮೇಶ್ವರ್‌ನಾಯಕ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಅನುಪಮಾ ಶೆಣೈ ಸರಕಾರಕ್ಕೆ ಮುಜುಗರ ಉಂಟಾಗುವಂತಹ ಮಾಹಿತಿಗಳನ್ನು ಹಾಕುತ್ತಿರುವುದು. ಅಲ್ಲದೆ, ಅವರ ರಾಜೀನಾಮೆಗೆ ನೇರವಾಗಿ ನೀವೇ ಕಾರಣಕರ್ತರು ಎಂಬ ರೀತಿಯಲ್ಲಿ ಬಿಂಬಿಸಲ್ಪಡುತ್ತಿರು ವುದರಿಂದ ಈ ಪ್ರಕರಣದ ಕುರಿತು ವಿವರಣೆ ನೀಡುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.
ಸಚಿವ ಸ್ಥಾನದ ಆಕಾಂಕ್ಷಿಗಳಾಗಿರುವ ಕೆಲವು ಶಾಸಕರು ಅನುಪಮಾ ಶೆಣೈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮ ಗಳಲ್ಲಿ ಬಂದಿರುವ ವರದಿಗಳು, ಸಾಮಾಜಿಕ ಜಾಲತಾಣಗಳಲ್ಲಿ ನಡೆದಿರುವ ಚರ್ಚೆಗಳ ವಿವರಗಳನ್ನು ಹೈಕಮಾಂಡ್ ಗಮನ ಕ್ಕೂ ತಂದಿದ್ದಾರೆ ಎಂದು ಹೇಳಲಾಗುತ್ತಿದೆ. ಆದುದರಿಂದ, ಪರಮೇಶ್ವರ್‌ನಾಯಕ್‌ರಿಂದ ಮುಖ್ಯಮಂತ್ರಿ ಸ್ಪಷ್ಟನೆ ಕೋರಿದ್ದಾರೆ ಎಂದು ತಿಳಿದು ಬಂದಿದೆ.





