ನೈಜೀರಿಯನ್ನರಿಗೆ ಕೇಂದ್ರ ನಿಷೇಧ ಹೇರಲಿ: ರವಿ ನಾಯ್ಕ
ಪಣಜಿ, ಜೂ.7: ಕೇಂದ್ರ ಸರಕಾರ ಭಾರತಕ್ಕೆ ನೈಜೀರಿಯನ್ನರ ಪ್ರವೇಶವನ್ನು ‘ನಿಷೇಧಿಸಬೇಕೆಂದು’ ಗೋವಾದ ಮಾಜಿ ಮುಖ್ಯಮಂತ್ರಿ ರವಿ ನಾಯ್ಕಿ ಆಗ್ರಹಿಸಿದ್ದಾರೆ. ರಾಜ್ಯಕ್ಕೆ ನೈಜೀರಿಯನ್ ಪ್ರವಾಸಿಗಳ ಅಗತ್ಯವಿಲ್ಲವೆಂದು ಅವರು ಹೇಳಿದ್ದಾರೆ.
ನೈಜೀರಿಯನ್ನರನ್ನು ಹದಗೆಟ್ಟ ‘ನೀಗ್ರೋಗಳು‘ ಎಂದು ಬಣಿಸಿದ ಹಿರಿಯ ಕಾಂಗ್ರೆಸ್ ನಾಯಕ, ನೈಜೀರಿಯನ್ನರು ಗೋವಾ ಹಾಗೂ ಇತರ ಮಹಾನಗರಗಳಲ್ಲೂ ‘ಸಮಸ್ಯೆ’ಯನ್ನುಂಟು ಮಾಡುತ್ತಿದ್ದಾರೆ. ಕೇಂದ್ರ ಸರಕಾರವು ನೈಜೀರಿಯನ್ನರಿಗೆ ನಿಷೇಧ ವಿಧಿಸಬೇಕೆಂದು ಪತ್ರಕರ್ತರಲ್ಲಿ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಆಮ್ ಆದ್ಮಿ ಪಕ್ಷದವರಿಗೂ ನೈಜೀರಿಯನ್ನರೊಂದಿಗೆ ಜಗಳ ನಡೆದಿದೆ. ಅವರು ಹೋದಲೆಲ್ಲ ಸಮಸ್ಯೆ ಸೃಷ್ಟಿಸುತ್ತಾರೆ. ತಮಗೆ ನೈಜೀರಿಯನ್ ಪ್ರವಾಸಿಗಳು ಅಗತ್ಯವಿಲ್ಲ ಎಂದ ನಾಯ್ಕಾ, ಗೋವಾದಲ್ಲಿ ವಿದ್ಯಾರ್ಥಿಗಳ ವೇಷದಲ್ಲಿರುವ ನೈಜೀರಿಯನ್ನರ ಚಟುವಟಿಕೆಗಳ ಕುರಿತು ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
Next Story





