ಹೊಟೇಲ್‌ಗಳ ಮೇಲೆ ದಾಳಿಗೆ ಪೊಲೀಸ್ ಮಾರ್ಗಸೂಚಿ ಸಿದ್ಧ
ಮುಂಬೈ,ಜೂ.7: ಹೊಟೇಲ್‌ಗಳ ಮೇಲೆ ದಾಳಿಗಳನ್ನು ನಡೆಸಿದ ಸಂದರ್ಭದಲ್ಲಿ ವ್ಯಕ್ತಿಗಳ ಖಾಸಗಿತನದ ಹಕ್ಕಿನ ಉಲ್ಲಂಘನೆಯಾಗದಂತಿರಲು ಪೊಲೀಸರು ಅನುಸರಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಮುಂಬೈ ಪೊಲೀಸ್ ಮುಖ್ಯಸ್ಥರು ರೂಪಿಸಿದ್ದಾರೆ ಎಂದು ಸಾರ್ವಜನಿಕ ಅಭಿಯೋಜಕ ಜೆ.ಪಿ.ಯಾಗ್ನಿಕ್ ಅವರು ಮಂಗಳವಾರ ಬಾಂಬೆ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.
ವಲಯ ಡಿಸಿಪಿಗಳ ಒಪ್ಪಿಗೆಯೊಂದಿಗೆ ಮಾತ್ರವೇ ಪೊಲೀಸರು ದಾಳಿಗಳನ್ನು ನಡೆಸಬಹುದಾಗಿದೆ ಎಂದೂ ಅವರು ಹೇಳಿದ್ದಾರೆ. ಕಳೆದ ವರ್ಷ ನೈತಿಕ ಪೊಲೀಸ್‌ಗಿರಿಯ ಆರೋಪಗಳಿಗೆ ಕಾರಣವಾಗಿದ್ದ ಉಪನಗರ ಮಾಲ್ವಾನಿಯ ಹೋಟೆಲ್‌ಗಳ ಮೇಲೆ ನಡೆದಿದ್ದ ವಿವಾದಾತ್ಮಕ ಪೊಲೀಸ್ ದಾಳಿಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿಯ ವಿಚಾರಣೆಯನ್ನು ನ್ಯಾಯಾಲಯವು ನಡೆಸುತ್ತಿದೆ.
ಹೊಟೇಲ್‌ಗಳ ಮೇಲೆ ದಾಳಿಗಳನ್ನು ನಡೆಸಲು ಮಾರ್ಗಸೂಚಿಗಳನ್ನು ರೂಪಿಸುವಂತೆ ಉಚ್ಚ ನ್ಯಾಯಾಲಯವು ಈ ವರ್ಷದ ಮಾ.10 ರಂದು ಅಧಿಕಾರಿಗಳಿಗೆ ನಿರ್ದೇಶ ನೀಡಿತ್ತು.
Next Story





