ಮಹಾರಾಣಾ ಪ್ರತಾಪ್ ಹೆಸರಿನಲ್ಲಿ ನೂತನ ಇಂಡಿಯನ್ ರಿಸರ್ವ್ ಬಟಾಲಿಯನ್: ರಾಜನಾಥ್
ಉದಯಪುರ,ಜೂ.7: ಮಹಾ ರಾಣಾ ಪ್ರತಾಪ್ ಹೆಸರಿನಲ್ಲಿ ನೂತನ ಭಾರತೀಯ ರಿಸರ್ವ್ಬಟಾಲಿಯನ್ವೊಂದನ್ನು ಸ್ಥಾಪಿಸ ಲಾಗುವುದು ಎಂದು ಗೃಹಸಚಿವ ರಾಜನಾಥ್ಸಿಂಗ್ ಅವರು ಮಂಗಳವಾರ ಇಲ್ಲಿ ಪ್ರಕಟಿಸಿದರು.
ಬಹಿರಂಗ ಸಭೆಯನ್ನು ದ್ದೇಶಿಸಿ ಮಾತನಾಡುತ್ತಿದ್ದ ಅವರು ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದರು.
ಜಮ್ಮು-ಕಾಶ್ಮೀರ ಮತ್ತು ನಕ್ಸಲ್ ಪೀಡಿತ ರಾಜ್ಯಗಳಿಗಾಗಿ 17 ಭಾರತೀಯ ರಿಸರ್ವ್ ಬಟಾಲಿಯನ್ಗಳನ್ನು ಸ್ಥಾಪಿಸುವ ಪ್ರಸ್ತಾವನೆಗೆ ಸಂಪುಟವು ಕಳೆದ ಜನವರಿಯಲ್ಲಿ ಒಪ್ಪಿಗೆ ನೀಡಿತ್ತು.
ಸರಕಾರವು ಭಾರತೀಯ ರಿಸರ್ವ್ ಬಟಾಲಿಯನ್ಗಳ ಯೋಜನೆಗೆ 1971ರಲ್ಲಿ ಚಾಲನೆ ನೀಡಿದ್ದು,ಈವರೆಗೆ ವಿವಿಧ ರಾಜ್ಯಗಳಿಗೆ 153 ಬಟಾಲಿಯನ್ಗಳನ್ನು ಮಂಜೂರು ಮಾಡಲಾಗಿದೆ.
Next Story