ನೆಮ್ಮದಿಯುತ ರೈತನಿಂದ ಸದೃಢ ಸಮಾಜ ನಿರ್ಮಾಣ ಸಾಧ್ಯ: ಶಾಸಕ ರಾಘವೇಂದ್ರ

ಶಿಕಾರಿಪುರ, ಜೂ.7: ರೈತ ದೇಶದ ಬೆನ್ನೆಲುಬು. ರೈತನ ನೆಮ್ಮದಿಯಿಂದ ಮಾತ್ರ ದೇಶ, ಸಮಾಜ ಸದೃಢ ಗೊಳ್ಳಲು ಸಾಧ್ಯ. ಕೇಂದ್ರ ಸರಕಾರ ಕಡಿಮೆ ಪಾವತಿಸುವ ವಿಮಾಸೌಲಭ್ಯ ಜಾರಿಗೊಳಿಸಿದ್ದು, ವಾರ್ಷಿಕ ಕೇವಲ 365 ರೂ. ಪಾವತಿಸಿದಲ್ಲಿ ಭವಿಷ್ಯದಲ್ಲಿನ ಅವಘಡ, ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎಂದು ಶಾಸಕ ರಾಘವೇಂದ್ರ ತಿಳಿಸಿದರು.
ತಾಲೂಕಿನ ಮಾರವಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಶುದ್ದ ಕುಡಿಯುವ ನೀರಿನ ಘಟಕಕ್ಕೆ ಸೋಮವಾರ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ದೃಢ ನಿರ್ಧಾರದಿಂದ ಮಾತ್ರ ಕೆಲಸ ಸುಲಭವಾಗಲಿದ್ದು, ಪ್ರಶಂಸೆಯಿಂದ ಅಹಂಕಾರ ಹೆಚ್ಚುವುದು. ಈ ದಿಸೆಯಲ್ಲಿ ಕೇಂದ್ರದ ವಿಮಾ ಸೌಲಭ್ಯವನ್ನು ಸದುಪ ಯೋಗಪಡಿಸಿಕೊಳ್ಳಬೇಕು ಎಂದರು.
ನಿರಂತರ ಜ್ಯೋತಿ ಯೋಜನೆಯನ್ವಯ ತಾಲೂಕಿನಲ್ಲಿ 24 ಗಂಟೆ ವಿದ್ಯುತ್ ಸಂಪರ್ಕಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಶೀಘ್ರದಲಿ್ಲ ನಿರಂತರ ಜ್ಯೋತಿ ಯೋಜನೆ ಕಾರ್ಯಾರಂಭಿಸಲಾಗುವುದು ಎಂದು ಶಾಸಕರು ತಿಳಿಸಿದರು.
ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾದ ಅವಧಿಯಲ್ಲಿ ಹೈನುಗಾರಿಕೆಗೆ ಉತ್ತೇಜನ ನೀಡಲು ಹಾಲಿಗೆ 2 ರೂ. ಪ್ರೋತ್ಸಾಹ ಧನ ನೀಡುವ ಯೋಜನೆ ಆರಂಭಿಸಿ ಹೈನುಗಾರಿಕೆಗೆ ಹೆಚ್ಚಿನ ಆದ್ಯತೆ ನೀಡಿದ ಪರಿಣಾಮ ಹೈನುಗಾರಿಕೆಯ ಮೂಲಕ ರೈತ ಆರ್ಥಿಕವಾಗಿ ಸದೃಢವಾಗಲು ಸಾಧ್ಯವಾಗಿದೆ ಎಂದರು.
ಕಾರ್ಯಕ್ರಮವನ್ನು ಭದ್ರಾ ಕಾಡಾ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಮಹಾದೇವಪ್ಪ ಉದ್ಘಾಟಿಸಿದರು. ಶಿಮುಲ್ ಅಧ್ಯಕ್ಷ ಶಿವಶಂಕರ್ ನೂತನ ಶೀತಲೀಕರಣ ಘಟಕಕ್ಕೆ ಚಾಲನೆ ನೀಡಿದರು. ಅಧಕ್ಷತೆಯನ್ನು ಮಾರವಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಚ್.ದೇವೇಗೌಡರು ವಹಿಸಿದ್ದರು.
ಇದೇ ವೇಳೆ ಸಂಘಕ್ಕೆ ಅತೀ ಹೆಚ್ಚು ಹಾಲು ನೀಡುತ್ತಿರುವ ರೈತರನ್ನು ಅಭಿನಂದಿಸಲಾಯಿತು. ವೇದಿಕೆಯಲ್ಲಿ ಜಿಪಂ ಸದಸ್ಯೆ ಮಮತಾ ಸಾಲಿ, ತಾಪಂ ಸದಸ್ಯೆ ಪ್ರೇಮಾ, ಗ್ರಾಪಂ ಅಧ್ಯಕ್ಷೆ ಸಿ.ಎಂ. ವಿದ್ಯಾ, ಶಿವಮೊಗ್ಗ ಸಹಕಾರಿ ಹಾಲು ಒಕ್ಕೂಟದ ಉಪವ್ಯವಸ್ಥಾಪಕ ಡಾ. ಗುರುಶೇಖರ್, ಅಭಿಯಂತರ ಬಿ.ಟಿ ಕಿಶೋರ, ವಿಸ್ತರಣಾಧಿಕಾರಿ ವಸಂತ ಕುಮಾರ್, ಪಶು ವೈದ್ಯಾಧಿಕಾರಿ ಡಾ. ಬಸವರಾಜ, ಗ್ರಾಮದ ಮುಖಂಡ ಚಂದ್ರೇಗೌಡ, ಚನ್ನಪ್ಪ, ಉಜ್ಜಪ್ಪ, ಹನುಮಂತಪ್ಪ, ಗ್ರಾಪಂ ಸದಸ್ಯ ಚನ್ನೇಶಗೌಡ, ಉಮೇಶ. ಹನುಮಂತನಾಯ್ಕ, ವಿನೋದಮ್ಮ, ಸಂಘದ ನಿರ್ದೇಶಕ ನಾಗರಾಜಪ್ಪ, ಚನ್ನಪ್ಪ ಎಲವಾಳ, ದ್ಯಾಮಪ್ಪ ಮತ್ತಿತರರು ಉಪಸ್ಥಿತರಿದ್ದರು. ನಿರ್ದೇಶಕ ಪ್ರಭು ಪ್ರಾಸ್ತಾವಿಕವಾಗಿ ಮಾತನಾಡಿದರು. ರುದ್ರಗೌಡ ಸ್ವಾಗತಿಸಿ, ಮಹೇಶಪ್ಪ ಬಂಡಿಬೈರನಹಳ್ಳಿ ನಿರೂಪಿಸಿ, ಪ್ರದೀಪ ವಂದಿಸಿದರು.







