ಅಬ್ಬಿಪಾಲ್ಸ್ ಅಭಿವೃದ್ಧಿಗೆ ಕ್ರಮ: ಸಚಿವ ದಿನೇಶ್ ಗುಂಡೂರಾವ್
2.4 ಕೋ. ರೂ. ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ

ಮಡಿಕೇರಿ, ಜೂ.7 : ಇಲ್ಲಿನ ಅಬ್ಬಿಪಾಲ್ಸ್ ರಸ್ತೆ ಸೇರಿದಂತೆ ಸುಮಾರು 2.4 ಕೋ. ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಂಗಳವಾರ ನೆರೆವೇರಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ನಗರದ ಅಬ್ಬಿಪಾಲ್ಸ್ ರಸ್ತೆಯಲ್ಲಿ ವೈದ್ಯಕೀಯ ಕಾಲೇಜು, ಪ್ರಾದೇಶಿಕ ಸಾರಿಗೆ ಕಚೇರಿ ಮತ್ತಿತರ ಸರಕಾರಿ ಕಚೇರಿಗಳು ಕಾರ್ಯಾಚರಿಸುತ್ತಿವೆ. ಹಾಗೆಯೇ ಅಬ್ಬಿಪಾಲ್ಸ್‌ಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಆದ್ದರಿಂದ ಅಬ್ಬಿಪಾಲ್ಸ್ ರಸ್ತೆ ಅಗಲೀಕರಣ ಮಾಡುವುದು ಅಗತ್ಯ. ಆ ನಿಟ್ಟಿನಲ್ಲಿ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿಯವರಿಗೆ ತಿಳಿಸಲಾಗಿದೆ ಎಂದು ಹೇಳಿದರು. ಮಡಿಕೇರಿ ನಗರ ಪ್ರದೇಶದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಮಾಡಲಾಗಿದೆ. ಅಬ್ಬಿಪಾಲ್ಸ್‌ನಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ 86 ಲಕ್ಷ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದರು. ವಿಕಲಚೇತನರಿಗೆ ಅಂಗಡಿ ಇಡಲು ಅಗತ್ಯ ವ್ಯವಸ್ಥೆ ಮಾಡಲಾಗುವುದು. ಜಿಲ್ಲೆಯಲ್ಲಿರುವ ವಿಕಲಚೇತನರನ್ನು ಗುರುತಿಸಿ ಸರಕಾರಿ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸಲಾಗುವುದು ಎಂದು ಸಚಿವರು ಹೇಳಿದರು.
<
<ಡಿವೈಎಸ್ಪಿ ಅನುಪಮಾ ಶೆಣೈ ರಾಜೀನಾಮೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಸಾರ್ವಜನಿಕ ಕ್ಷೇತ್ರದಲ್ಲಿ ಒತ್ತಡ ಇರುತ್ತದೆ. ಅದನ್ನು ನ್ಯಾಯಯುತವಾಗಿ ಪರಿಹರಿಸಿಕೊಳ್ಳಬೇಕಿದೆ. ಸರಕಾರದ ಕಾರ್ಯದರ್ಶಿ ಹಾಗೂ ಪೊಲೀಸ್ ಇಲಾಖೆ ಮಟ್ಟದಲ್ಲಿ ಡಿಜಿ ಇರುತ್ತಾರೆ. ಅವರ ಗಮನಕ್ಕೆ ತಾರದೆ ರಾಜೀನಾಮೆ ನೀಡುವುದು ಸರಿಯಾದ ಕ್ರಮವಲ್ಲ ಎಂದರು. ಮಂಗೇರಿರ ಮುತ್ತಣ್ಣ ವೃತ್ತದಿಂದ ಆಂಜನೇಯ ದೇವಸ್ಥಾನ, ಓಂಕಾರೇಶ್ವರ ದೇವಸ್ಥಾನ, ಸಿವಿಎಸ್ ವರೆಗೆ 1 ಕೋ. ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಕಾಂಕ್ರಿಟ್ ರಸ್ತೆಗೆ ಉದ್ಘಾಟನೆ. ಮುತ್ತಪ್ಪದೇವಸ್ಥಾನದಿಂದ ಕಾನ್ವೆಂಟ್ ಜಂಕ್ಷನ್‌ವರೆಗೆ ರಸ್ತೆ ಮರು ಡಾಂಬರೀಕರಣವನ್ನು 14 ನೆ ಹಣಕಾಸು ಯೋಜನೆಯಡಿ ಭರಿಸಲಾಗಿದ್ದು, ಸುಮಾರು 17.98 ಲಕ್ಷ ರೂ. ಮರುಡಾಂಬರೀಕರಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರು ಚಾಲನೆ ನೀಡಿದರು. ನಗರದ ಹೊರವಲಯದ ಅಬ್ಬಿ ಜಲಪಾತದಲ್ಲಿ ಸಾಗುವ ಪ್ರದೇಶದಲ್ಲಿ ಪ್ಲಾಟ್ ಫಾರಂ, ರೈಲಿಂಗ್ಸ್, ಪಾತ್‌ವೇ, ಮೆಟ್ಟಿಲು ದುರಸ್ತಿ, ಚೈನ್ ಲಿಂಕ್ ಮೆಶ್ ಮತ್ತಿತರ ಪ್ರವಾಸಿ ಸೌಲಭ್ಯಗಳ ಸುಮಾರು 86 ಲಕ್ಷ ರೂ. ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹಾಗೂ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಚಾಲನೆ ನೀಡಿದರು. ಇದೆ ವೇಳೆ ಆರ್‌ಟಿಒ ಕಚೇರಿಗೆ ತೆರಳಿ ಕಚೇರಿ ಮುಂಭಾಗ ನಡೆದಿರುವ ಕಾಮಗಾರಿ ಹಾಗೂ ವೈದ್ಯಕೀಯ ಕಾಲೇಜು ಕಟ್ಟಡ ಕಾಮಗಾರಿಯನ್ನು ಪರಿಶೀಲಿಸಿದ ಸಚಿವರು, ನಗರದ ಕಾರ್ಯಪ್ಪಕಾಲೇಜು ಬಳಿಯ ಸ್ತ್ರೀಶಕ್ತಿ ಭವನದಲ್ಲಿ ವಿಕಲಚೇತನರಿಗೆ ಯಂತ್ರಚಾಲಿತ 10ತ್ರಿಚಕ್ರ ವಾಹನವನ್ನು ವಿತರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಪಿ.ರಾಜೇಂದ್ರ ಪ್ರಸಾದ್, ನಗರಸಭೆ ಅಧ್ಯಕ್ಷೆ ಬಂಗೇರಾ, ಉಪಾಧ್ಯಕ್ಷೆ ಲೀಲಾಶೇಷಮ್ಮ, ಪ್ರಮುಖರಾದ ಟಿ.ಪಿ. ರಮೇಶ್, ಬಿ.ಟಿ. ಪ್ರದೀಪ್, ಕೆ.ಎಂ. ಲೋಕೇಶ್, ನಗರಸಭಾ ಸದಸ್ಯರಾದ ಎಚ್.ಎಂ. ನಂದಕುಮಾರ್, ಕೆ.ಎಂ.ಬಿ.ಗಣೇಶ್, ಚುಮ್ಮಿ ದೇವಯ್ಯ, ಮೀನಾಕ್ಷಿ, ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಮನೋಹರ್, ನಗರಸಭೆ ಪೌರಾಯುಕ್ತೆ ಬಿ.ಬಿ.ಪುಷ್ಪಾವತಿ, ಎಇಇ ಕೆ.ಎಂ. ರವಿಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಜಯರಾಮ್, ವಿಕಲಚೇತನರ ಅಧಿಕಾರಿ ಜಗದೀಶ್ , ಗ್ರಾಪಂ ಅಧ್ಯಕ್ಷೆ ರೀಟಾ ಮತ್ತಣ್ಣ, ಗ್ರಾಪಂ ಸದಸ್ಯರಾದ ಡೀನ್ ಬೋಪಣ್ಣ, ಜಾನ್ಸನ್, ಭೂ ಸೇನಾ ನಿಗಮದ ಎಇಇ ಪಾಟೀಲ್, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಸಿ.ಜಗನ್ನಾಥ್, ಪಿಡಿಒ ವೀರಭದ್ರ ಶೆಟ್ಟಿ ಉಪಸ್ಥಿತರಿದ್ದರು. ಶಿಲಾನ್ಯಾಸಗೊಂಡ ಕಾಮಗಾರಿಗಳು ನಾಮಫಲಕ ಅಳವಡಿಸುವುದು. ಪ್ರವೇಶ ದ್ವಾರದಲ್ಲಿ ದೊಡ್ಡದಾದ ಆರ್ಚ್ ನಿರ್ಮಾಣ.
<ಪೊಲೀಸ್ ರಕ್ಷಣಾ ಕೊಠಡಿ ಬಳಿ ವಾಚ್ ಟವರ್ ನಿರ್ಮಾಣ.
<ಬೇಸ್‌ಮೆಂಟ್ ಮೇಲೆ ಚೈನ್‌ಲಿಂಕ್ ಬೇಲಿ ಅಳವಡಿಸುವುದು.
<
<ರೈಲಿಂಗ್ಸ್ ಅಳವಡಿಸುವುದು. ಮೆಟ್ಟಿಲುಗಳ ನಿರ್ಮಾಣ.







