ಬಿಹಾರದ ಟಾಪರ್ ಗಳ ಅರೆಸ್ಟ್
![ಬಿಹಾರದ ಟಾಪರ್ ಗಳ ಅರೆಸ್ಟ್ ಬಿಹಾರದ ಟಾಪರ್ ಗಳ ಅರೆಸ್ಟ್](https://www.varthabharati.in/sites/default/files/images/articles/2016/06/8/prison-305_060816114341.jpg)
ಪಾಟ್ನಾ , ಜೂ.8: ಬಿಹಾರ ಹನ್ನೆರಡನೆ ತರಗತಿಯ ಪರೀಕ್ಷೆಯಲ್ಲಿ ಅಕ್ರಮ ಎಸಗುವ ಮೂಲಕ ಅಗ್ರ ಸ್ಥಾನಗಳಿಸಿದ್ದ ವೈಶಾಲಿಯ ವಿ.ಆರ್. ಕಾಲೇಜಿನ ಟಾಪರ್ಗಳಾದ ಸೌರವ್ ಶ್ರೇಷ್ಟ, ರಾಹುಲ್ ರಾಜ್, ರೂಬಿ ರೈ ಮತ್ತು ಶಾಲಿನಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಐದು ಮಂದಿ ಆರೋಪಿಗಳ ವಿರುದ್ಧ ಕೊಟ್ವಾಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪರೀಕ್ಷಾ ಅಕ್ರಮದ ಕುರಿತು ಮುಖ್ಯಮಂತ್ರಿ ನಿತೀಶ್ ಕುಮಾರ್, ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ ಪ್ರಕರಣವನ್ನು , ವಿಶೇಷ ತನಿಖಾ ತಂಡದ ಮೂಲಕ ತನಿಖೆ ನಡೆಸುವಂತೆ ಸೂಚಿಸಿದ್ದರು.
Next Story