ಒಮನ್ ಹಳ್ಳಿಯಲ್ಲಿ ದಿನಕ್ಕೆ 3 ಗಂಟೆ ಮಾತ್ರ ರಮಝಾನ್ ಉಪವಾಸ ?
ಮಸ್ಕತ್, ಜೂ 8 : ಒಮನ್ ದೇಶದ ವಿಕಾನ್ ಎಂಬ ಹಳ್ಳಿಯಲ್ಲಿ ಕೇವಲ ದಿನದ ೩ ಗಂಟೆ ರಮಝಾನ್ ಉಪವಾಸ ಆಚರಿಸುವ ಪರಿಸ್ಥಿತಿ ಇದೆಯೇ ? ಇಂತಹದೊಂದು ವದಂತಿ ವ್ಯಾಪಕವಾಗಿ ಮಾಧ್ಯಮಗಳಲ್ಲಿ ಹಾಗು ಸಾಮಾಜಿಕ ಜಾಲತಾಣಗಳಲ್ಲಿ ಹರಡಿತ್ತು. ಆದರೆ ಒಮನ್ ಪ್ರವಾಸೋದ್ಯಮ ಇಲಾಖೆ ವಿಕಾನ್ ನಲ್ಲಿ ಹಾಗೆ ಇಲ್ಲ ಎಂದು ಸ್ಪಷ್ಟಪಡಿಸಿದೆ.
" ಹಾಗೆ ಆಗಲು ಸಾದ್ಯವಿಲ್ಲ. ಕೆವಳು ಗುಡ್ಡಗಾಡು ಪ್ರದೇಶಗಳಲ್ಲಿ ಸೂರ್ಯೋದಯವನ್ನು ನೋಡುವುದು ಕಷ್ಟಸಾಧ್ಯವಾದರೂ ಅದರರ್ಥ ಸೂರ್ಯೋದಯ ಆಗಿಲ್ಲ ಎಂದಲ್ಲ " ಎಂದು ಒಮನ್ ಸರಕಾರದ ಧಾರ್ಮಿಕ ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಈ ಗ್ರಾಮದಲ್ಲಿ ಪೂರ್ವಾಹ್ನ 11 ಕ್ಕೆ ಸೂರ್ಯೋದಯವಾಗಿ ಅಪರಾಹ್ನ 2:30 ಕ್ಕೆ ಸೂರ್ಯಾಸ್ತವಾಗುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಇದರಿಂದಾಗಿ ಇಡೀ ವಿಶ್ವದಲ್ಲೇ ಅತ್ಯಂತ ಕಡಿಮೆ ಉಪವಾಸದ ಅವಧಿ ಈ ಗ್ರಾಮದಲ್ಲಿದೆ ಎಂದು ಹೇಳಲಾಗಿತ್ತು. ಸಾಮಾನ್ಯವಾಗಿ ಭೌಗೊಳಿಕ ಪರಿಸ್ಥಿತಿಗೆ ಅನುಗುಣವಾಗಿ ವಿಶ್ವದಾದ್ಯಂತ 10 ಗಂಟೆಯಿಂದ 19 ಗಂಟೆ ಉಪವಾಸದ ಅವಧಿಯಿದೆ.
ಒಮನ್ ರಾಜಧಾನಿ ಮಸ್ಕತ್ ನಿಂದ 150 ಕಿಮಿ ದೂರದಲ್ಲಿರುವ ವಿಕಾನ್ ಗ್ರಾಮವನ್ನು ತಲುಪಲು ಕತ್ತೆ , ಕುದುರೆ ಅಥವಾ ವಿಶೇಷ ಫೋರ್ ವೀಲ್ ವಾಹನಗಳಿಂದ ಮಾತ್ರ ಸಾಧ್ಯ.