ಉಪ್ಪಳ ಮತ್ತು ಮಂಜೇಶ್ವರ ಒಳಗೊಂಡಂತೆ ಕೇರಳದ ಆರು ಹೊಳೆಗಳು ವಿಷಮುಕ್ತ

ಕಾಸರಗೋಡು, ಜೂ.8: ಉಪ್ಪಳ ಮತ್ತು ಮಂಜೇಶ್ವರ ಸೇರಿದಂತೆ ಕೇರಳದ ಆರು ಹೊಳೆಗಳು ವಿಷಮುಕ್ತ ಎಂದು ಅಧ್ಯಯನ ವರದಿ ತಿಳಿಸಿದೆ. ಕೇರಳ ವಿಜ್ಞಾನ ತಂತ್ರಜ್ಞಾನ ಪರಿಸರ ಸಮಿತಿ (ಕೆಎಸ್‌ಸಿಎಸ್‌ಟಿ)ಯು ನದಿತೀರ ಅಧ್ಯಯನ ವರದಿಯಲ್ಲಿ ಉಲ್ಲೇಖಿಸಿದೆ.
ರಾಜ್ಯದ 44 ನದಿಗಳ ಪೈಕಿ 39 ನದಿಗಳನ್ನು ಸಮಿತಿಯು ಅಧ್ಯಯನ ನಡೆಸಿತ್ತು. ಇದರಲ್ಲಿ ಕಾಸರಗೋಡು ಜಿಲ್ಲೆಯ ಉಪ್ಪಳ, ಮಂಜೇಶ್ವರ, ಕುಂಬಳೆ ಶಿರಿಯ, ಚಿತ್ತಾರಿ, ಮೊಗ್ರಾಲ್ ಹೊಳೆಗಳು ಸೇರಿದ್ದವು.
ಈ ಪೈಕಿ ಜಿಲ್ಲೆಯ ಉಪ್ಪಳ ಮತ್ತು ಮಂಜೇಶ್ವರ ಹೊಳೆಯು ವಿಷಮುಕ್ತವಾಗಿದೆ. ಉಳಿದ ನದಿಗಳನ್ನು ಪರಿಶೀಲಿಸಿದಾಗ ತ್ಯಾಜ್ಯವಸ್ತುಗಳು ಹೊಳೆ ಸೇರುತ್ತಿರುವುದು ಪತ್ತೆಯಾಗಿದೆ ಎಂದು ಅಧ್ಯಯನ ವರದಿ ಉಲ್ಲೇಖಿಸಿದೆ.
Next Story





