ಜು.2ರೊಳಗೆ ಬಾಕಿ ಮೊತ್ತ ಪಾವತಿಗೆ ಸೂಚನೆ
ಹಜ್‌ಯಾತ್ರೆ-2016
ಬೆಂಗಳೂರು, ಜೂ.8: ಪ್ರಸಕ್ತ ಸಾಲಿನ ಪವಿತ್ರ ಹಜ್‌ಯಾತ್ರೆಗೆ ಆಯ್ಕೆಯಾಗಿ ತಲಾ 81 ಸಾವಿರ ರೂ. ಮುಂಗಡ ಪಾವತಿಸಿರುವ ಯಾತ್ರಿಗಳು ಉಳಿದ ಮೊತ್ತವನ್ನು ಜು.2ರೊಳಗೆ ಪಾವತಿಸು ವಂತೆ ಭಾರತೀಯ ಹಜ್ ಸಮಿತಿ ಸೂಚನೆ ನೀಡಿದೆ.
ಬಾಕಿ ಮೊತ್ತವನ್ನು ನಗದು ಅಥವಾ ಹಜ್ ಮಾರ್ಗಸೂಚಿಯೊಂದಿಗೆ ನೀಡಿರುವ ಹಸಿರು ಪೇ ಇನ್ ಸ್ಲಿಪ್ ಮೂಲಕ ಭಾರತೀಯ ಸ್ಟೇಟ್ ಬ್ಯಾಂಕ್(ಎಸ್‌ಬಿಐ)ನ ಯಾವುದೆ ಶಾಖೆಯಲ್ಲಿ ಭಾರತೀಯ ಹಜ್ ಸಮಿತಿಯ ಖಾತೆ ಸಂಖ್ಯೆ: 32175020010ಗೆ ‘ಊಛಿಛಿ ಛಿ 25’ ಅಥವಾ ಯುನಿಯನ್ ಬ್ಯಾಂಕ್ ಆಫ್ ಇಂಡಿಯಾದ ಭಾರತೀಯ ಹಜ್ ಸಮಿತಿಯ ಖಾತೆ ಸಂಖ್ಯೆ: 318702010406009 ಅಥವಾ ಆನ್‌ಲೈನ್ ಡಿಡಿಡಿ.ಚ್ಜ್ಚಟಞಞಜಿಠಿಠಿಛಿಛಿ.ಜಟ.ಜ್ಞಿ ಮೂಲಕ ಪಾವತಿಸಬಹುದು.
ಬೆಂಗಳೂರು ವಿಮಾನ ನಿಲ್ದಾಣದಿಂದ ಪ್ರಯಾಣ ಬೆಳೆಸುವ ಗ್ರೀನ್ ವಿಭಾಗದ ಯಾತ್ರಿಗಳು 1,38,900 ರೂ., ಅಝೀಝಿಯಾ ವಿಭಾಗದ ಯಾತ್ರಿಗಳು 1.05 ಲಕ್ಷ ರೂ., ಗೋವಾ ವಿಮಾನ ನಿಲ್ದಾಣದಿಂದ ಪ್ರಯಾಣ ಬೆಳೆಸುವ ಗ್ರೀನ್ ವಿಭಾಗದ ಯಾತ್ರಿಗಳು 1,37,700 ರೂ., ಅಝೀಝಿಯಾ ವಿಭಾಗದ ಯಾತ್ರಿಗಳು 1,03,800 ರೂ.ಬಾಕಿ ಪಾವತಿಸಬೇಕು.
ಹೈದರಾಬಾದ್ ವಿಮಾನ ನಿಲ್ದಾಣದಿಂದ ಪ್ರಯಾಣ ಬೆಳೆಸುವ ಗ್ರೀನ್ ವಿಭಾಗದ ಯಾತ್ರಿಗಳು 1,39,550 ರೂ., ಅಝೀಝಿಯಾ ವಿಭಾಗದ ಯಾತ್ರಿಗಳು 1,05,650 ರೂ., ಮಂಗಳೂರು ವಿಮಾನ ನಿಲ್ದಾಣದಿಂದ ಪ್ರಯಾಣ ಬೆಳೆಸುವ ಗ್ರೀನ್ ವಿಭಾಗದ ಯಾತ್ರಿಗಳು 1,38,450 ರೂ., ಅಝೀಝಿಯಾ ವಿಭಾಗದ ಯಾತ್ರಿಗಳು 1,04,550 ರೂ.ಗಳನ್ನು ಬಾಕಿ ಪಾವತಿಸಬೇಕು.
ಐಡಿಬಿಯ ಕುರ್ಬಾನಿ(ಅದಾಹಿ) ಕೂಪನ್‌ಗಳನ್ನು ಪಡೆಯಬಯಸುವ ಯಾತ್ರಿಗಳು ಹೆಚ್ಚುವರಿಯಾಗಿ 8,160 ರೂ.ಗಳನ್ನು ಪಾವತಿಸಬೇಕು ಎಂದು ಭಾರತೀಯ ಹಜ್ ಸಮಿತಿಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಅತಾವುರ್ರಹ್ಮಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







