ಬಸ್ ಹರಿದು ವ್ಯಕ್ತಿ ಮೃತ್ಯು
ಮಂಗಳೂರು, ಜೂ. 8: ಪಣಂಬೂರಿನಿಂದ ಸುರತ್ಕಲ್ ಕಡೆಗೆ ತೆರಳುತ್ತಿದ್ದ ಬಸ್ಸೊಂದು ಹರಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಬೈಕಂಪಾಡಿಯಲ್ಲಿ ನಡೆದಿದೆ.
ಮೃತರನ್ನು ಬೈಕಂಪಾಡಿ ಬಳಿಯ ನಿವಾಸಿ ಅಬ್ದುರ್ರಝಾಕ್ ಎಂದು ಗುರುತಿಸಲಾಗಿದೆ.
ರಝಾಕ್ ಮಂಗಳವಾರ ಬೈಕಂಪಾಡಿ ಬಸ್ಸು ನಿಲ್ದಾಣ ಎದುರು ನಿಂತಿದ್ದಾಗ ರಾಧಾಕೃಷ್ಣ ರೈ ಎಂಬವರು ಚಲಾಯಿಸಿಕೊಂಡು ಬಂದ ಬಸ್ಸು ಢಿಕ್ಕಿ ಹೊಡೆದಿದೆ. ಪರಿಣಾಮವಾಗಿ ರಝಾಕ್ ರಸ್ತೆಗಪ್ಪಳಿಸಲ್ಪಟ್ಟಿದ್ದು,ಬಳಿಕ ಬಸ್ಸು ಅವರ ಹೊಟ್ಟೆಯ ಮೇಲಿನಿಂದ ಹರಿದು ಮೃತಪಟ್ಟಿದ್ದಾರೆ. ಬಸ್ಸು ಚಾಲಕನ ಅಜಾಗರೂಕತೆಯ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದೆ.
ಈ ಬಗ್ಗೆ ಅಕ್ಬರ್ ಅಲಿ ಎಂಬವರು ನೀಡಿರುವ ದೂರಿನನ್ವಯ ಸುರತ್ಕಲ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





