5 ಸಾವಿರಕ್ಕೂ ಅಧಿಕ ಮರಗಳು ಧ್ವಂಸ
ಮಥುರಾ ಘರ್ಷಣೆ
ಮಥುರಾ, ಜೂ.8: ಇಲ್ಲಿನ ಜವಾಹರ್ ಬಾಗ್ ಪ್ರದೇಶದಲ್ಲಿ ಕಳೆದ ವಾರ ಸಂಭವಿಸಿದ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವಿನ ಭೀಕರ ಘರ್ಷಣೆಯಲ್ಲಿ ಸಾವಿರಾರು ಮರಗಳು ಧ್ವಂಸಗೊಂಡಿದ್ದು ,ಇನ್ನು ಅನೇಕ ಮರಗಳು ಸುಟ್ಟುಕರಕಲಾಗಿದೆ .
ಹಣ್ಣಿನ ಮರಗಳು ಸೇರಿದಂತೆ 5,000ಕ್ಕೂ ಅಧಿಕ ಮರಗಳು ಸಹಿತ ಸುಟ್ಟು ಕರಕಲಾಗಿದೆ ಎಂದು ಉತ್ತರ ಪ್ರದೇಶದ ತೋಟಗಾರಿಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಅಪಾರ ಪ್ರಮಾಣದ ಮರಗಳ ನಾಶಕ್ಕೆ ಕಾರಣರಾದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರಗಿಸಬೇಕೆಂದು ಮಥುರಾದ ಪರಿಸರವಾದಿಗಳು ಆಗ್ರಹಿಸಿದ್ದಾರೆ.
Next Story





