Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಕಲಿ ದೇವಮಾನವರ ಅಪಾಯಕಾರಿ ಚಟುವಟಿಕೆ

ನಕಲಿ ದೇವಮಾನವರ ಅಪಾಯಕಾರಿ ಚಟುವಟಿಕೆ

ವಾರ್ತಾಭಾರತಿವಾರ್ತಾಭಾರತಿ8 Jun 2016 10:55 PM IST
share
ನಕಲಿ ದೇವಮಾನವರ ಅಪಾಯಕಾರಿ ಚಟುವಟಿಕೆ

ಜನರನ್ನು ವಂಚಿಸುವ ನಕಲಿ ದೇವಮಾನವರು ವಿದೇಶಗಳಲ್ಲಿ ಹಿಂದೆಯೂ ಇದ್ದರು ಈಗಲೂ ಇದ್ದಾರೆ. ಆದರೆ, ಈಗಿನಷ್ಟು ಪ್ರಬಲವಾಗಿರಲಿಲ್ಲ. 90ರ ದಶಕದ ನಂತರ ಕೋಮುವಾದಿ ರಾಜಕಾರಣ ಪ್ರಾಬಲ್ಯಕ್ಕೆ ಬಂದ ನಂತರ ಧರ್ಮದ ಹೆಸರಿನಲ್ಲಿ ವಂಚನೆ ಮಾಡುವ ದೇವಮಾನವರು ಈ ದೇಶದ ಸಂವಿಧಾನಕ್ಕೆ ಸವಾಲು ಹಾಕುವ ರೀತಿಯಲ್ಲಿ ಬೆಳೆದು ನಿಂತಿದ್ದಾರೆ. ದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಇಂತಹವರಿಂದ ಗಂಭೀರ ಸ್ವರೂಪದ ಗಂಡಾಂತರ ಉಂಟಾಗಿದೆ. ಇತ್ತೀಚೆಗೆ ಇಪ್ಪತ್ತೊಂಬತ್ತು ಜನರ ಸಾವಿಗೆ ಕಾರಣ ವಾದ ಮಥುರಾದ ಹಿಂಸಾತ್ಮಕ ಘಟನೆಗಳಲ್ಲಿ ಉತ್ತರಪ್ರದೇಶ ರಾಜ್ಯಸರಕಾರದ ನಿರ್ಲಕ್ಷ ಎದ್ದು ಕಾಣುತ್ತದೆ. ಮಥುರಾ ನಗರದಲ್ಲಿ ಧಾರ್ಮಿಕ ಸಂಘಟನೆಯೊಂದರ ವಶದಲ್ಲಿದ್ದ ನೂರಾರು ಎಕರೆ ಒತ್ತುವರಿ ಭೂಮಿಯನ್ನು ತೆರವುಗೊಳಿಸಲು ಪೊಲೀಸರು ತೆರಳಿದಾಗ ನಡೆದ ಹಿಂಸಾಚಾರ ಈ ಧಾರ್ಮಿಕ ವಿಕ್ಷಿಪ್ತಲೋಕದ ಭಯಾನಕ ಸ್ವರೂಪವನ್ನು ಬಹಿರಂಗಪಡಿಸಿದೆ.

ಹಿಂದೂಗಳ ಪುಣ್ಯ ಕ್ಷೇತ್ರವೆಂದು ಹೆಸರಾಗಿರುವ ಮಥುರಾದಲ್ಲಿ ಆಝಾದ್ ಭಾರತ್ ವೈದಿಕ ವೈಚಾರಿಕ ಕ್ರಾಂತಿ ಎಂಬ ಧಾರ್ಮಿಕ ಸಂಘಟನೆ 200 ಎಕರೆಗೂ ಅಧಿಕ ಜಾಗವನ್ನು ಆಕ್ರಮಿಸಿಕೊಂಡು ಅದರಲ್ಲಿ ಈ ದೇಶದ ಸಂವಿಧಾನಕ್ಕೆ ಮತ್ತು ಪ್ರಭುತ್ವಕ್ಕೆ ಸವಾಲು ಹಾಕುವ ರೀತಿಯಲ್ಲಿ ಪ್ರತ್ಯೇಕ ಆಡಳಿತ ವ್ಯವಸ್ಥೆಯನ್ನು ರೂಪಿಸಿಕೊಂಡಿತ್ತು. ಅಲ್ಲಿ ಯುವಕರಿಗೆ ಶಸ್ತ್ರಾಸ್ತ್ರ ತರಬೇತಿಯನ್ನು ನೀಡುತ್ತಿತ್ತು. ಸುಭಾಶ್ಚಂದ್ರ ಬೋಸ್ ಅವರ ಹೆಸರನ್ನು ಹೇಳುವ ಈ ಸಂಘಟನೆ ಆಝಾದ್ ಶಬ್ದಕ್ಕೆ ವೈದಿಕ ಶಬ್ದವನ್ನು ಜೋಡಿಸಿ ವೈಚಾರಿಕ ಕ್ರಾಂತಿ ಎಂದು ತನ್ನನ್ನು ತಾನು ಕರೆದುಕೊಂಡು ರಾಷ್ಟ್ರವಿರೋಧಿ ಚಟುವಟಿಕೆಯಲ್ಲಿ ತೊಡಗಿತ್ತು. ಆತಂಕದ ಸಂಗತಿಯೆಂದರೆ ಸುಭಾಶ್ಚಂದ್ರ ಬೋಸ್ ಅವರ ಆಝಾದ್ ಶಬ್ದಕ್ಕೂ ಇವರ ವೈದಿಕ ಶಬ್ದಕ್ಕೂ ಏನು ಸಂಬಂಧ ಎಂದು ಅರ್ಥವಾಗುತ್ತಿಲ್ಲ. ಸ್ವಾಮಿ ವಿವೇಕಾನಂದ ಮತ್ತು ಹುತಾತ್ಮ ಭಗತ್ ಸಿಂಗ್ ಅವರನ್ನು ಹೈಜಾಕ್ ಮಾಡಿದಂತೆ ಸುಭಾಶ್ಚಂದ್ರ ಬೋಸ್ ಅವರ ಹೆಸರನ್ನೂ ಬಳಸಿಕೊಂಡು ತಮ್ಮ ಮನುವಾದಿ ಅಜೆಂಡಾವನ್ನು ಜಾರಿಗೆ ತರಲು ಫ್ಯಾಶಿಸ್ಟ್ ಶಕ್ತಿಗಳು ಯತ್ನಿಸುತ್ತಿರುವುದು ಇದರಿಂದ ಸ್ಪಷ್ಟವಾಗುತ್ತದೆ. 

ವೈದಿಕಶಾಹಿಯನ್ನು ಪುನರುಜ್ಜೀವನಗೊಳಿಸಲು ಹೊರಟಿರುವ ಈ ಶಕ್ತಿಗಳು ದೇಶದ ಆಡಳಿತ ವ್ಯವಸ್ಥೆಗೆ ಸವಾಲು ಹಾಕುವ ರೀತಿಯಲ್ಲಿ ಬೆಳೆದು ನಿಂತಿವೆ. ಮಥುರಾದ ಈ ಸಂಘಟನೆಗೆ ಮೂರು ಸಾವಿರಕ್ಕೂ ಹೆಚ್ಚು ಅನುಯಾಯಿಗಳು ಇದ್ದಾರೆ ಎಂಬುದು ಕಳವಳದ ಸಂಗತಿಯಾಗಿದೆ. ಮಥುರಾ ಮಾತ್ರವಲ್ಲ, ದೇಶದ ಇತರ ಕಡೆಯೂ ಧರ್ಮದ ಹೆಸರಿನಲ್ಲಿ ಇಂತಹ ಭಯೋತ್ಪಾದಕ ಚಟುವಟಿಕೆಗಳು ವರದಿಯಾಗುತ್ತಲೇ ಇವೆೆ. ಹರ್ಯಾಣ ರಾಜ್ಯದಲ್ಲಿ ತನ್ನನ್ನು ದೇವಮಾನವ ಎಂದು ಕರೆದುಕೊಂಡ ರಾಮ್‌ಪಾಲ್‌ನನ್ನು ಬಂಧಿಸಲು ಪೊಲೀಸರು ಆತನ ಆಶ್ರಮಕ್ಕೆ ಹೋದಾಗ ಗುಂಡಿನ ಕಾಳಗವೇ ನಡೆದಿತ್ತು. ಇದರಿಂದ ಒಂದು ಮಾತು ಸ್ಪಷ್ಟವಾಗುತ್ತದೆ. ದೇವಮಾನವರು ಬರೀ ಆಧ್ಯಾತ್ಮಿಕ ಬೋಧನೆಗೆ ತಮ್ಮನ್ನು ಸೀಮಿತಗೊಳಿಸಿಕೊಂಡಿಲ್ಲ. ಸದಾ ವಂಚಕ ದಂಧೆಯಲ್ಲಿ ತೊಡಗಿರುವ ಇವರು ತಮ್ಮದೇ ಸ್ವಂತ ಸೇನಾದಳಗಳನ್ನು ಇಟ್ಟುಕೊಂಡಿದ್ದಾರೆ. ಆ ಮೂಲಕ ತಮ್ಮದೇ ಸಾಮ್ರಾಜ್ಯವನ್ನು ಸ್ಥಾಪಿಸಿಕೊಂಡಿದ್ದಾರೆ. 

ಕೆಲ ವರ್ಷಗಳ ಹಿಂದೆ ಅತ್ಯಾಚಾರದ ಆರೋಪದಲ್ಲಿ ಸ್ವಯಂಘೋಷಿತ ದೇವಮಾನವ ಆಸಾರಾಂ ಬಾಪುನನ್ನು ಬಂಧಿಸಲು ರಾಜಸ್ಥಾನದ ಪೊಲೀಸರು ಆತನ ವಿವಿಧ ಆಶ್ರಮಗಳಿಗೆ ತೆರಳಿದಾಗ ಅಲ್ಲಿದ್ದ ಆತನ ಭಕ್ತರು ದೊಡ್ಡ ಪ್ರಮಾಣದ ಹಿಂಸಾಚಾರ ನಡೆಸಿದರು. ನಂತರ ಪೊಲೀಸರು ಬಲವಂತವಾಗಿ ಒಳಗೆ ಪ್ರವೇಶಿಸಿದಾಗ ಆತ ಕಟ್ಟಿಕೊಂಡಿದ್ದ ಭಯಾನಕವಾದ ಕಪಟ ಧಾರ್ಮಿಕ ಸಾಮ್ರಾಜ್ಯವೊಂದು ಬೆಳಕಿಗೆ ಬಂದಿತ್ತು. ಈತನಿಗೆ ಕೋಮುವಾದಿ ಸಂಘಟನೆಗಳು ಬಹಿರಂಗವಾಗಿ ಬೆಂಬಲ ನೀಡುತ್ತಾ ಬಂದಿವೆ. ಈಗಿನ ಕೇಂದ್ರ ಸರಕಾರವೂ ಇಂತಹವರ ಬಗ್ಗೆ ಮೃದುಧೋರಣೆ ಹೊಂದಿರುವುದರಿಂದ ಇವರ ಜಾಲ ಇನ್ನಷ್ಟು ವ್ಯಾಪಕವಾಗಿ ಹರಡಿದೆ. ಧರ್ಮದ ಹೆಸರಿನಲ್ಲಿ ನೂರಾರು ಎಕರೆ ಭೂಮಿಯನ್ನು ವಶಪಡಿಸಿಕೊಂಡು ತಮ್ಮದೇ ಸಾಮ್ರಾಜ್ಯವನ್ನು ಸ್ಥಾಪಿಸುವ ಈ ನಕಲಿ ದೇವಮಾನವರು ಅಕ್ರಮ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿ ಅಮಾಯಕ ಯುವಕರಿಗೆ ತರಬೇತಿ ನೀಡಿ ಅವರನ್ನು ಹಿಂಸೆಗೆ ಬಳಸಿಕೊಳ್ಳುತ್ತಾರೆ.

ಸರಕಾರ ಇಂತಹ ಪ್ರಕರಣಗಳಲ್ಲಿ ಮೊದಲು ನಿರ್ಲಕ್ಷ ಧೋರಣೆ ತಾಳಿ ನಂತರ ಪರಿಸ್ಥಿತಿ ಕೈಮೀರಿದಾಗ ಕಾರ್ಯಾಚರಣೆಗೆ ಮುಂದಾಗುತ್ತದೆ. ಉತ್ತರಪ್ರದೇಶ ಸರಕಾರವೂ ಇಂತಹದೇ ಲೋಪವನ್ನು ಎಸಗಿದೆ. ಇಂತಹ ನಕಲಿ ದೇವಮಾನವರು, ಕಪಟ ಸನ್ಯಾಸಿಗಳು ಕರ್ನಾಟಕದಲ್ಲೂ ಇದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ದಲಿತರಿಗೆ ಸೇರಿದ ನೂರಾರು ಎಕರೆ ಜಮೀನನ್ನು ಲಪಟಾಯಿಸಿದ ಜೀವನ ಕಲೆ ಕಲಿಸುವ ಗುರುವೊಬ್ಬ ತನ್ನದೇ ಸಾಮ್ರಾಜ್ಯ ಕಟ್ಟಿಕೊಂಡಿದ್ದಾನೆ. ರಾಜ್ಯದ ಹಿಂದಿನ ಬಿಜೆಪಿ ಸರಕಾರ ಈತನ ಭೂಒತ್ತುವರಿಗೆ ಸಂಪೂರ್ಣ ಬೆಂಬಲ ನೀಡಿತ್ತು. ಕರ್ನಾಟಕದಲ್ಲಿ ಈಗ ಸಿದ್ದರಾಮಯ್ಯನವರ ಸರಕಾರವಿದೆ. ಇಂತಹ ನಕಲಿ ದೇವಮಾನವರನ್ನು ನಿಯಂತ್ರಿಸಲು ಈ ಸರಕಾರ ಮುಂದಾಗಬೇಕು. ಈ ನಿಟ್ಟಿನಲ್ಲಿ ಮೂಢನಂಬಿಕೆ ನಿಷೇಧ ಕಾನೂನನ್ನು ಜಾರಿಗೆ ತರಲು ತಕ್ಷಣ ಕ್ರಮಕೈಗೊಳ್ಳಬೇಕು. ಯಾವುದೇ ಒತ್ತಡಕ್ಕೆ ಮಣಿಯದೆ ಈ ಕಾನೂನನ್ನು ಜಾರಿಗೆ ತಂದರೆ ಇಂತಹವರ ಹಾವಳಿಯನ್ನು ತಡೆಗಟ್ಟಬಹುದು. ಈ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಸವಾಲಾಗಿ ನಿಂತಿರುವ ತಮ್ಮದೇ ಸಾಮ್ರಾಜ್ಯವನ್ನು ಕಟ್ಟಿಕೊಂಡಿರುವ ಇಂತಹ ನಕಲಿ ದೇವಮಾನವರನ್ನು, ಕಪಟ ಸನ್ಯಾಸಿಗಳನ್ನು ಸದೆಬಡಿಯಲು ಸರಕಾರ ಮುಂದಾಗಬೇಕಾಗಿದೆ. ಸರಕಾರ ಮಾತ್ರವಲ್ಲ, ಸಮಾಜದ ಪ್ರಜ್ಞಾವಂತರು ಈ ನಿಟ್ಟಿನಲ್ಲಿ ಜನಜಾಗೃತಿಯನ್ನು ಉಂಟುಮಾಡಬೇಕು. ಇಂತಹ ವಂಚಕರಿಗೆ ಸಾಮಾಜಿಕ ಬಹಿಷ್ಕಾರವನ್ನು ಹಾಕಲು ಜನ ಮುಂದಾಗಬೇಕು. ಆವಾಗ ಮಾತ್ರ ಇವರ ಹಾವಳಿಯನ್ನು ತಡೆಯಲು ಸಾಧ್ಯವಾಗುತ್ತದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X