ಎಫ್-16 ವಿಮಾನಗಳ ಢಿಕ್ಕಿ: ಪೈಲಟ್‌ಗಳು ಪಾರು
ಕೊಲಂಬಿಯ, ಜೂ. 8: ಪೂರ್ವ ಜಾರ್ಜಿಯದಲ್ಲಿ ಮಂಗಳವಾರ ರಾತ್ರಿ ಸೌತ್ ಕ್ಯಾರಲೈನದ ಏರ್ ನ್ಯಾಶನಲ್ ಗಾರ್ಡ್‌ನ ಎರಡು ಎಫ್-16 ವಿಮಾನಗಳು ಆಕಾಶದಲ್ಲಿ ಪರಸ್ಪರ ಢಿಕ್ಕಿಯಾದವು ಹಾಗೂ ಪೈಲಟ್‌ಗಳು ಸುರಕ್ಷಿತವಾಗಿ ಹೊರ ಹಾರಿದ್ದಾರೆ ಎಂದು ಏರ್ ನ್ಯಾಶನಲ್ ಗಾರ್ಡ್ ತಿಳಿಸಿದೆ.
ಜಾರ್ಜಿಯದ ಜೆಫರ್‌ಸನ್ ಕೌಂಟಿಯಲ್ಲಿರುವ ಸೇನಾ ಕಾರ್ಯಾಚರಣೆ ಪ್ರದೇಶದಲ್ಲಿ ದೈನಂದಿನ ರಾತ್ರಿ ಹಾರಾಟ ಕಸರತ್ತಿನಲ್ಲಿದ್ದ ವೇಳೆ ಎರಡು ವಿಮಾನಗಳು ರಾತ್ರಿ ಸುಮಾರು 9:15ರ ವೇಳೆಗೆ ಢಿಕ್ಕಿ ಹೊಡೆದವು ಎಂದು ಅದು ಪತ್ರಿಕಾ ಹೇಳಿಕೆಯೊಂದರಲ್ಲಿ ಹೇಳಿದೆ.
ಪೈಲಟ್‌ಗಳು ಜಾರ್ಜಿಯ ವಾಯು ಪ್ರದೇಶದಲ್ಲಿ ತರಬೇತಿ ಹಾರಾಟವನ್ನು ನಡೆಸುತ್ತಿದ್ದರು.
Next Story





