ಚೋಟಾ ರಾಜನ್ ವಿರುದ್ಧ ದೋಷಾರೋಪ
ನಕಲಿ ಪಾಸ್‌ಪೋರ್ಟ್
ಮುಂಬೈ, ಜೂ.8: ನಕಲಿ ಪಾಸ್‌ಪೋರ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ಯಾಂಗ್ ಸ್ಟಾರ್ ಚೋಟಾ ರಾಜನ್ ಸೇರಿದಂತೆ ಇತರ ಮೂವರ ವಿರುದ್ಧ ವಂಚನೆ,ಫೋರ್ಜರಿ ಮತ್ತು ಒಳಸಂಚಿನ ಕಾನೂನುಬಾಹಿರ ಕೃತ್ಯಗಳಿಗೆ ಸಂಬಂಧಿಸಿ ಬುಧವಾರ ಸಿಬಿಐ ವಿಶೇಷ ನ್ಯಾಯಾಲಯವು ದೋಷಾರೋಪ ಹೊರಿಸಿದೆ.
ವೀಡಿಯೋ ಕಾನ್ಫರೆನ್ಸ್ ಮೂಲಕ ರಾಜನ್‌ರವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿನೋದ್ ಕುಮಾರ್ ಈ ಆದೇಶ ಹೊರಡಿಸಿದ್ದಾರೆ.
ಸರಕಾರಿ ಅಧಿಕಾರಿಗಳ ಸಹಾಯದೊಂದಿಗೆ ಮೋಹನ್ ಕುಮಾರ್ ಎಂಬ ಹೆಸರಿನಲ್ಲಿ ನಕಲಿ ಪಾಸ್‌ಪೋರ್ಟ್ ಪಡೆದಿರುವುದರಿಂದ ರಾಜನ್ ವಿರುದ್ಧ ನ್ಯಾಯಾಲಯವು ಆರೋಪ ಹೊರಿಸಿದೆ ಅಲ್ಲದೇ ಈ ಪ್ರಕರಣದಲ್ಲಿ ಅವರು ಆರೋಪಿ ಕೂಡ ಆಗಿದ್ದಾರೆ.ದೀರ್ಘಕಾಲದ ನ್ಯಾಯಾಂಗ ಬಂಧನದಲ್ಲಿಯಿರುವ ರಾಜನ್ ವಿರುದ್ಧ ತ್ವರಿತ ನ್ಯಾಯಾಲಯವು ಜುಲೈ 11 ರಿಂದ ದಿನಂಪ್ರತಿ ವಿಚಾರಣೆ ನಡೆಸುವಂತೆ ಆದೇಶಿಸಿದೆ.
Next Story





