ಮೊದಲ ಆದ್ಯತೆ ಮತ ಗುರುತಿಸದಿದ್ದರೆ ಮತದಾನ ಅಸಿಂಧು: ಜಿಲ್ಲಾಧಿಕಾರಿ ಘೋಷ್
ಇಂದು ಕರ್ನಾಟಕ ಪಶ್ಚಿಮ ಶಿಕ್ಷಕರ ಕ್ಷೇತ್ರ ಚುನಾವಣೆ

ಕಾರವಾರ, ಜೂ. 8: ಕರ್ನಾಟಕ ಪಶ್ಚಿಮ ಶಿಕ್ಷಕರ ಕ್ಷೇತ್ರ ಚುನಾವಣೆಯ ಮತದಾನ ಜೂನ್ 9 ರಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದ್ದು, ಮತದಾನ ಮಾಡುವಾಗ ಮತ ಪತ್ರದಲ್ಲಿ ಮೊದಲ ಆದ್ಯತೆ ಮತವನ್ನು ಗುರುತಿಸದಿದ್ದರೆ ಮತಪತ್ರವು ತಿರಸ್ಕೃತವಾಗುವುದು ಎಂದು ಜಿಲ್ಲಾಧಿಕಾರಿ ಉಜ್ವಲ್ ಕುಮಾರ್ ಘೋಷ್ ತಿಳಿಸಿದ್ದಾರೆ.
X v ಮೊದಲ ಆದ್ಯತೆ ನೀಡಿದ ಮೇಲೆ ಮುಂದಿನ ಗುರುತುಗಳನ್ನು ಮಾಡುವುದು ನಿಮ್ಮ ಇಚ್ಛೆಗೆ ಅನುಸಾರ ವಾಗಿರುತ್ತದೆ. ಆದರೆ ಮತದಾರನ ಆದ್ಯತಾನುಸಾರ ಮುಂದುವರಿದಿರಬೇಕು. ಕ್ರಮ ಸಂಖ್ಯೆ ತಪ್ಪಿಹೊದಲ್ಲಿ ಮುಂದಿನ ಆದ್ಯತಾ ಮತಗಳು ಅಸಿಂಧು ಆಗುವುದು. ಚುನಾವಣೆಯಲ್ಲಿ ಪ್ರತಿಯೊಬ್ಬ ಮತದಾರನೂ ಆದ್ಯತಾನುಸಾರ ಮತಚಲಾಯಿ ಸಬಹುದು ಎಂದು ಮಾಹಿತಿ ನೀಡಿದರು. ಅಂತಾರಾಷ್ಟ್ರೀಯ ರೂಪದಲ್ಲಿ ರುವ ಭಾರತೀಯ ಅಂಕಿಗಳಲ್ಲಿ ಅಂದರೆ ಇಂಗ್ಲಿಷ್/ರೋಮನ್ ಅಥವಾ ಯಾವುದೇ ಭಾರತೀಯ ಭಾಷೆಯಲ್ಲಿ ಉಪಯೋಗಿಸುತ್ತಿರುವ ಅಂಕಿಗಳಲ್ಲಿ ಮಾತ್ರವೇ ಗುರುತು ಮಾಡಬೇಕು. ಆದರೆ ಪದಗಳನ್ನಾಗಲಿ ಅಥವಾ ಅಥವಾ ಇತ್ಯಾದಿ ಗುರುತುಗಳನ್ನಾಗಲಿ ಉಪಯೋಗಿಸಕೂಡದು. ಗುರುತು ಗಳನ್ನು ಅಭ್ಯರ್ಥಿಗಳ (NOTA
ಸೇರಿದಂತೆ) ಹೆಸರುಗಳ ಎದುರಿಗಿರುವ ಅಂಕಣಗಳಲ್ಲಿಯೇ ಮಾಡಬೇಕು. ಅಂಕಣದ ಹೊರಗಡೆ ಅಥವಾ ಎರಡು ಅಂಕಣಗಳ ನಡುವೆ ಗುರುತು ಮಾಡಿದರೆ ಆ ಮತಪತ್ರವನ್ನು ಅಸಿಂಧು ಎಂದು ಪರಿಗಣಿಸಲಾಗುವುದು ಎಂದು ಅವರು ಹೇಳಿದರು. ಯಾವ ಅಭ್ಯರ್ಥಿಯ ಹೆಸರಿನ ಎದುರಿನಲ್ಲಿ ಒಂದಕ್ಕಿಂತ ಹೆಚ್ಚಿನ ಅಂಕೆಯನ್ನು ಗುರುತು ಮಾಡಬಾರದು. ಒಬ್ಬ ಅಭ್ಯರ್ಥಿಗಿಂತಲೂ ಹೆಚ್ಚಿನ ಹೆಸರುಗಳ ಎದುರುಗಡೆ ಅದೇ ಅಂಕೆಯನ್ನು ಗುರುತು ಮಾಡಬಾರದು. ಮತ ನೀಡುವ ಉದ್ದೇಶಕ್ಕಾಗಿ ಮತಗಟ್ಟೆ ಅಧಿಕಾರಿಯು ಕೊಟ್ಟ ನೇರಳೆ ಬಣ್ಣದ ಸ್ಕೆಚ್ ಪೆನ್ನಿನಿಂದ ಮಾತ್ರವೇ ಗುರುತು ಮಾಡಬೇಕು ಎಂದು ಅವರು ಹೇಳಿದ್ದಾರೆ.
*ಹಾಜರುಪಡಿಸಬೇಕಾದ ದಾಖಲೆ: ಮತಚಲಾ ಯಿಸುವುದಕ್ಕಾಗಿ ಮತಗಟ್ಟೆ ಅಧಿಕಾರಿಗೆ ಚುನಾವಣೆ ಮತದಾರರ ಭಾವಚಿತ್ರವಿರುವ ಗುರುತಿನ ಚೀಟಿಯನ್ನು ಹಾಜರು ಪಡಿಸಬೇಕಾಗಿದ್ದು, ಭಾವಚಿತ್ರವಿರುವ ಗುರುತಿನ ಚೀಟಿ ಹೊಂದಿರದ ಮತದಾರರು ಈ ಕೆಳ ಕಾಣಿಸಿದ 12 ದಾಖಲೆಗಳಲ್ಲಿ ಒಂದನ್ನು ಹಾಜರುಪಡಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಪಾಸ್‌ಫೋರ್ಟ್, ಡ್ರೈವಿಂಗ್ ಲೈಸೆನ್ಸ್, ಇಲಾಖೆಯು ಒದಗಿಸಿದ ಗುರುತಿನ ಚೀಟಿ, ಭಾವಚಿತ್ರವಿರುವ ಪಾಸ್‌ಬುಕ್, ಪಾನ್‌ಕಾರ್ಡ್, ಸ್ಮಾರ್ಟ್‌ಕಾರ್ಡ್, ಆರೋಗ್ಯ ವಿಮೆ ಕಾರ್ಡ್ , ಪೆನ್‌ಶನ್ ದಾಖಲೆ ಪತ್ರ, ಸ್ವಾತಂತ್ರ್ಯ ಹೋರಾಟಗಾರರ ಗುರುತಿನ ಚೀಟಿ, ಆರ್ಮ್ಸ್ ಲೈಸೆನ್ಸ್ , ಅಂಗವಿಕಲರ ಪ್ರಮಾಣ ಪತ್ರ, ಎಕ್ಸ್-ಸರ್ವಿಸ್‌ಮೆನ್ ಕ್ಯಾಂಟೀನ್ ಕಾರ್ಡ್ ಇವುಗಳಲ್ಲಿ ಯಾವುದಾದರೊಂದನ್ನು ಹಾಜರು ಪಡಿಸಿ ಮತದಾನ ಮಾಡಬಹುದು ಎಂದು ಅವರು ತಿಳಿಸಿದ್ದಾರೆ.
ಅಂತಿಮ ಮತದಾರರ ವಿವರ: ಕರ್ನಾಟಕ ಪಶ್ಚಿಮ ಶಿಕ್ಷಕರ ಕ್ಷೇತ್ರ ಚುನಾವಣೆಗೆ ಒಟ್ಟ್ಟು 3,866 ಮತದಾರರು ಇದ್ದಾರೆ. ಅವರಲ್ಲಿ 2,521 ಪುರುಷ ಹಾಗೂ 1,345 ಮಹಿಳಾ ಮತದಾರರು ಇದ್ದಾರೆ. ಮತದಾನ ಶಾಂತಿಯುತವಾಗಿ ಹಾಗೂ ವ್ಯವಸ್ಥಿತವಾಗಿ ನಡೆಸಲು ಎಲ್ಲಾ ವ್ಯವಸ್ಥೆ ಮಾಡಲಾಗಿದೆ.
ಒಟ್ಟು 15 ಮತಗಟ್ಟೆಗಳು ಇದ್ದು, ಇದರಲ್ಲಿ ಜೋಯಡಾದಲ್ಲಿ 2 ಮತಗಟ್ಟೆ, ಯಲ್ಲಾಪುರದಲ್ಲಿ 1, ಕಾರವಾರದಲ್ಲಿ 2, ಅಂಕೋಲಾದಲ್ಲಿ 1, ಕುಮಟಾದಲ್ಲಿ 2, ಹೊನ್ನಾವರದಲ್ಲಿ 1, ಭಟ್ಕಳದಲ್ಲಿ 1, ಸಿದ್ದಾಪುರದಲ್ಲಿ 1, ಶಿರಸಿಯಲ್ಲಿ 1, ಮುಂಡಗೋಡದಲ್ಲಿ 1, ಹಳಿಯಾಳದಲ್ಲಿ 2 ಮತಗಟ್ಟೆಗಳನ್ನು ಗುರುತಿಸಲಾಗಿದೆ.
ಚುನಾವಣೆಯಲ್ಲಿ ಪದವೀಧರರು ಹಾಗೂ ಶಿಕ್ಷಕರು ಮತದಾರರಾಗಿದ್ದು, ಅಂತಹ ಮತದಾರರು ತಮ್ಮ ಕಚೇರಿ ಶಾಲಾ-ಕಾಲೇಜು ಖಾಸಗಿ ಸಂಘ-ಸಂಸ್ಥೆಗಳಲ್ಲಿ, ಕೈಗಾರಿಕಾ ಉದ್ಯೋಗದಲ್ಲಿ ಸಹಕಾರಿ ಸಂಘಗಳಲ್ಲಿ ಹಾಗೂ ಇತರೆ ಯಾವುದೇ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಲ್ಲಿ ಅವರಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ಸಂಬಂಧಿತ ಕಚೇರಿ ಮುಖ್ಯಸ್ಥರು ಅಂತಹ ಮತದಾರರಿಗೆ ಸೂಕ್ತ ಸಮಯಾವಕಾಶ ಹಾಗೂ ಅನುಮತಿ ನೀಡಲಾಗಿದೆ ಎಂದು ಡಿಸಿ ತಿಳಿಸಿದರು.







