ತಡೆಗೋಡೆಗೆ ಕಾರು ಢಿಕ್ಕಿ: ಸವಾರ ಮೃತ್ಯು
ಸುಳ್ಯ, ಜೂ. 8: ಮಂಗಳೂರಿನಿಂದ ಸೋಮವಾರಪೇಟೆಯ ಖಡಂಗಕ್ಕೆ ತೆರಳುತ್ತಿದ್ದ ಕಾರು ರಸ್ತೆಯ ತಡೆಗೋಡೆಗೆ ಢಿಕ್ಕಿಹೊಡೆದ ಪರಿಣಾಮ ಓರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟು ಇನ್ನೋರ್ವ ಗಾಯಗೊಂಡ ಘಟನೆ ಸಂಪಾಜೆ ಗೇಟಿನ ಬಳಿ ಮಂಗಳವಾರ ರಾತ್ರಿ ಸಂಭವಿಸಿದೆ. ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಸೋಮವಾರಪೇಟೆ ನಿವಾಸಿ ಸುಬ್ರಮಣಿ ಮೃತಪಟ್ಟ ದುರ್ದೈವಿ. ಶವವನ್ನು ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಸಂಪಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





