ಮಣಿಪಾಲ, ಜೂ. 8: ಮಣಿಪಾಲ ಠಾಣೆಯಲ್ಲಿ 2010ರಲ್ಲಿ ದಾಖಲಾದ ಐಪಿಸಿ ಪ್ರಕರಣಕ್ಕೆ ಸಂಬಂಧಿಸಿ ಹೆರ್ಗಾ ಗ್ರಾಮದ ಸಣ್ಣಕ್ಕಿಬೆಟ್ಟಿನ ಜಗದೀಶ್ ನಾಯ್ಕಿ (29) ಎಂಬ ಆರೋಪಿಯನ್ನು ಮಣಿಪಾಲ ಪೊಲೀಸರು ನಿನ್ನೆ ಸಣ್ಣಕ್ಕಿಬೆಟ್ಟಿನಲ್ಲಿ ವಶಕ್ಕೆ ಪಡೆದುಕೊಂಡು ಬುಧವಾರ ನ್ಯಾಯಾಲಯದಲ್ಲಿ ಹಾಜರು ಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗೆ ನ್ಯಾಯಂಗ ಬಂಧನ ವಿಧಿಸಿದೆ.