ಗೋದಾಮಿಗೆ ದಾಳಿ: ಅಕ್ರಮ ಸೀಮೆಎಣ್ಣೆ ವಶ
ಬ್ರಹ್ಮಾವರ, ಜೂ. 8: ಖಚಿತ ಮಾಹಿತಿಯಂತೆ ಬ್ರಹ್ಮಾವರ ವಿಶೇಷ ತಹಶೀಲ್ದಾರ್ ತಿಪ್ಪೇಸ್ವಾಮಿ ನೇತೃತ್ವದಲ್ಲಿ ಕಂದಾಯ ನಿರೀಕ್ಷಕರ ತಂಡ ಮಂಗಳ ವಾರ ಸಂಜೆ ಚಾಂತಾರು ಗ್ರಾಮದ ವೆಸ್ಟ್‌ಕೋಸ್ಟ್ ಕೆಮಿಕಲ್ ಫ್ಯಾಕ್ಟರಿಯ ಗೋದಾಮಿಗೆ ದಾಳಿ ನಡೆಸಿ ಅಲ್ಲಿ ಅಕ್ರಮವಾಗಿ ದಾಸ್ತಾನು ಇಟ್ಟಿದ್ದ ಸೀಮೆ ಎಣ್ಣೆಯನ್ನು ವಶಪಡಿಸಿಕೊಂಡಿದೆ.
ಯಾವುದೇ ಪರವಾನಿಗೆ ಪಡೆಯದೇ ಅಕ್ರಮವಾಗಿ ಸುಮಾರು 220ಲೀ.ನ 15 ದೊಡ್ಡ ಕಬ್ಬಿಣದ ಬ್ಯಾರೆಲ್‌ಗಳಲ್ಲಿ ಹಾಗೂ ಎರಡು ಸಣ್ಣ ಬ್ಯಾರಲ್‌ಗಳಲ್ಲಿ ಸುಮಾರು 60 ಲೀ.ನಷ್ಟು ಒಟ್ಟು 3,420 ಲೀ.ನಷ್ಟು ಸೀಮೆಎಣ್ಣೆ ದಾಸ್ತಾ ನಿಟ್ಟಿರುವುದು ಪತ್ತೆಯಾಗಿದೆ.
ಇದರೊಂದಿಗೆ ಸೀಮೆಎಣ್ಣೆಯನ್ನು ಎತ್ತಲು ಬಳಸುವ ಅರ್ಧ ಎಚ್.ಪಿ.ಯ ಮೋಟಾರ್, ಸುಮಾರು 15 ಅಡಿ ಉದ್ದದ ಪೈಪ್ ಹಾಗೂ ಸುಮಾರು ಐದು ಅಡಿ ಉದ್ದದ ಪೈಪ್ ಪತ್ತೆಯಾಗಿದ್ದು, ಇವುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Next Story





