ಅಲ್ ಮದೀನ ಮಹಿಳಾ ಕಾಲೇಜಿನ ಪದವಿ ಪ್ರದಾನ ಸಮಾರಂಭ

ಮಂಜನಾಡಿ, ಜೂ.8: ಅಲ್ ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ಮಂಜನಾಡಿ ಇದರ ಅಂಗಸಂಸ್ಥೆಯಾದ ಅಲ್ ಮದೀನ ಇಸ್ಲಾಮಿಕ್ ಸೈನ್ಸ್ ಕಾಲೇಜ್ ಫೋರ್ ವಿಮೆನ್ ಇದರ ವಾರ್ಷಿಕ ಮತ್ತು ಪ್ರಥಮ ಪದವಿ ಪ್ರದಾನ ಸಮಾರಂಭ ಇತ್ತೀಚೆಗೆ ನಡೆಯಿತು.
ಯೆನೆಪೊಯ ಅಬ್ದುಲ್ಲಾ ಕುಂಞಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಹಾಜಿ ಇಬ್ರಾಹೀಂ ಕೋಡಿಜಾಲ್ ಉದ್ಘಾಟಿಸಿದರು. ಆರೋಗ್ಯ ಸಚಿವ ಯು.ಟಿ. ಖಾದರ್ ಎಕ್ಸಲೆನ್ಸಿ ಅವಾರ್ಡ್ ನೀಡಿದರು. ಸಂಸ್ಥೆಯ ಅಧ್ಯಕ್ಷ ಶೈಖುನಾ ಅಬ್ಬಾಸ್ ಉಸ್ತಾದ್ ಪ್ರಮಾಣಪತ್ರ ವಿತರಿಸಿದರು. ಐಸಿಸಿ ಕಾರ್ಯದರ್ಶಿ ಮುಮ್ತಾಝ್ ಅಲಿ ಕೃಷ್ಣಾಪುರ ಮತ್ತು ಹೈದರ್ ಪರ್ತಿಪ್ಪಾಡಿ ಮಾತನಾಡಿದರು.
ಅಬ್ದುರ್ರಹ್ಮಾನ್ ಸಖಾಫಿ ಚಿಯೂರ್, ಮಲಾಝ್ ಕಮಿಟಿ ಅಧ್ಯಕ್ಷ ಫಾರೂಕ್ ಅಬ್ಬಾಸ್ ಉಳ್ಳಾಲ, ಯೂಸುಫ್ ಹಾಜಿ ಕೊಣಾಜೆ, ರಝಾಕ್ ಹಾಜಿ ಮಂಗಳೂರು, ವಕ್ಫ್ ಅಧಿಕಾರಿ ಹಾಜಿ ಅಬೂಬಕರ್, ಜೈಲಾನಿ ಅಬೂಬಕರ್ ಹಾಜಿ, ಎನ್.ಎಸ್. ಕರೀಂ, ಮಂಜನಾಡಿ ಗ್ರಾಪಂ ಅಧ್ಯಕ್ಷ ಮುಹಮ್ಮದ್ ಅಕ್ಕರೆ ವಳಚ್ಚಿಲ್, ಕೆ.ಎಂ.ಕೆ. ಮಂಜನಾಡಿ, ಮಹ್ಮೂದ್ ಹಾಜಿ ಕಂಡಿಕ, ಅನ್ಸಾರ್ ಉಳ್ಳಾಲ, ಮೊಯ್ದಿನ್ ಹಾಜಿ ಮಲಾಝ್, ಎನ್.ಎಸ್. ಹಮೀದ್ ಹಾಜಿ, ಖುಬ್ರಾ ಮುನೀರ್ ಸಖಾಫಿ ಉಪಸ್ಥಿತರಿದ್ದರು.
ಪ್ರಾಂಶುಪಾಲ ಮುನೀರ್ ಸಖಾಫಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಮ್ಯಾನೇಜರ್ ಅಬ್ದುಲ್ ಖಾದಿರ್ ಸಖಾಫಿ ಸ್ವಾಗತಿಸಿದರು. ಪ್ರೊ.ಝೈನುಲ್ ಆಬಿದ್ ಸಖಾಫಿ ಮಾಗುಂಡಿ ಕಾರ್ಯಕ್ರಮ ನಿರೂಪಿಸಿದರು. ಮುಹಮ್ಮದ್ ಕುಂಞಿ ಅಮ್ಜದಿ ವಂದಿಸಿದರು.







