ಪ್ರೆಸ್ಟೀಜ್ ಸ್ಕೂಲ್‌ನಲ್ಲಿ ವನಮಹೋತ್ಸವ

ಮಂಗಳೂರು, ಜೂ.8: ಪ್ರೆಸ್ಟೀಜ್ ಶಾಲೆಯ ಉದ್ಯಾನವನದಲ್ಲಿ ವನಮಹೋತ್ಸವ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಹಸಿರು ಪರಿಸರ ಪ್ರಶಸ್ತಿ ವಿಜೇತೆ ಲಲಿತಾ ಜಿ.ಮಲ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಚಿಪ್ಕೋ ಚಳವಳಿ ಮತ್ತು ಮರಗಳನ್ನು ರಕ್ಷಿಸುವ ವಿಧಾನಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಶಾಲೆಯ ವ್ಯವಸ್ಥಾಪಕ ನಿರ್ದೇಶಕ ರೇಶ್ಮಾ ಹೈದರ್ ಮತ್ತು ಪ್ರಾಂಶುಪಾಲ ಫಿರೋಝಾ ಫಯಾಝ್ ಉಪಸ್ಥಿತರಿದ್ದರು.
Next Story





