ಜೂ.11ರಂದು ಎಸ್‌ಸಿಡಿಸಿಸಿ ಬ್ಯಾಂಕ್ ಉಜಿರೆ ಶಾಖೆಯ ಸ್ಥಳಾಂತರ
ಮಂಗಳೂರು, ಜೂ.8: ಗ್ರಾಹಕರ ಹೆಚ್ಚಿನ ಅನುಕೂಲಕ್ಕಾಗಿ ಬೆಳ್ತಂಗಡಿ ತಾಲೂಕಿನಲ್ಲಿರುವ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್‌ಸಿಡಿಸಿಸಿ ಬ್ಯಾಂಕ್)ನ ಉಜಿರೆ ಶಾಖೆಯು ಈಗ ಇರುವ ಕಟ್ಟಡದಿಂದ ಮುಖ್ಯರಸ್ತೆಯಲ್ಲಿರುವ ಮಾವಂತೂರು ರೆಸಿಡೆನ್ಸಿಯ 1ನೆ ಮಹಡಿಗೆ ಸ್ಥಳಾಂತರಗೊಳ್ಳಲಿದೆ.
ಸ್ಥಳಾಂತರಗೊಳ್ಳಲಿರುವ ಈ ಶಾಖೆಯನ್ನು ಬೆಳಗ್ಗೆ 10:30ಕ್ಕೆ ಬ್ಯಾಂಕ್‌ನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಉದ್ಘಾ ಟಿಸಲಿರುವರು. ಈ ಶಾಖೆಯು ಸಂಪೂರ್ಣ ಗಣಕೀಕೃತಗೊಂಡು ಏಕಗವಾಕ್ಷಿ, ಕೋರ್ ಬ್ಯಾಂಕಿಂಗ್ ಮತ್ತು ಆರ್‌ಟಿಜಿಎಸ್ ಮತ್ತು ನ್‌ಟೆ ಸೌಲಭ್ಯಗಳೊಂದಿಗೆ ಕಾರ್ಯಾರಂಭಗೊಳ್ಳಲಿದೆ ಎಂದು ಬ್ಯಾಂಕ್‌ನ ಪ್ರಕಟನೆ ತಿಳಿಸಿದೆ.
Next Story





