ಮಣಿಪಾಲ: ಜಿಲ್ಲಾ ಬ್ಯಾಂಕ್‌ಗಳ ಪ್ರಗತಿ ಪರಿಶೀಲನಾ ಸಭೆ

ಮಣಿಪಾಲ, ಜೂ.8: ಜಿಲ್ಲೆಯ ಬ್ಯಾಂಕ್‌ಗಳು ಈ ವರ್ಷದ ಮಾರ್ಚ್ ಅಂತ್ಯಕ್ಕೆ 18,127.11 ಕೋಟಿ ರೂ. ಠೇವಣಿ ಹಾಗೂ 9,141.26 ಕೋಟಿ ರೂ. ಮುಂಗಡವನ್ನು ಹೊಂದಿದ್ದು, ವಾರ್ಷಿಕವಾಗಿ ಠೇವಣಿಯಲ್ಲಿ ಶೇ.14.19 ಹಾಗೂ ಮುಂಗಡದಲ್ಲಿ ಶೇ.11.37ರಷ್ಟು ಅಭಿವೃದ್ಧಿಯನ್ನು ಸಾಸಲಾಗಿದೆ ಎಂದು ಸಿಂಡಿಕೇಟ್ ಬ್ಯಾಂಕ್‌ನ ಉಡುಪಿ ವಿಭಾಗೀಯ ಕಚೇರಿಯ ಕ್ಷೇತ್ರೀಯ ಪ್ರಬಂಧಕ ಎಸ್.ಎಸ್.ಹೆಗ್ಡೆ ಹೇಳಿದ್ದಾರೆ.
ಮಣಿಪಾಲದಲ್ಲಿರುವ ಜಿಪಂ ಸಭಾಂಗಣದಲ್ಲಿ ಇಂದು ನಡೆದ ಉಡುಪಿ ಜಿಲ್ಲಾ ಮಟ್ಟದ ಬ್ಯಾಂಕ್‌ಗಳ ಪರಿಶೀಲನಾ ಸಮಿತಿಯ ನಾಲ್ಕನೆ ತ್ರೈಮಾಸಿಕ ಸಭೆಯಲ್ಲಿ ಅವರು ಜಿಲ್ಲೆಯ ಬ್ಯಾಂಕಿಂಗ್ ವ್ಯವಹಾರದಲ್ಲಿ ಮೂರು ತಿಂಗಳಲ್ಲಿ ನಡೆದ ಪ್ರಗತಿಯ ವರದಿಯನ್ನು ಮಂಡಿಸಿ ಮಾತನಾಡುತ್ತಿದ್ದರು.
ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಹಣಾಕಾರಿ ಪ್ರಿಯಾಂಕಾ ಮೇರಿ ್ರಾನ್ಸಿಸ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. 2016ರ ಮಾರ್ಚ್ ಅಂತ್ಯಕ್ಕೆ ಜಿಲ್ಲೆಯ ಸಾಲ-ಠೇವಣಿಯ ಅನುಪಾತ ಶೇ.50.43ಕ್ಕೇರಿದ್ದು, ಅಲ್ಪಹೆಚ್ಚಳವನ್ನು ದಾಖಲಿಸಿದೆ. ಆದರೆ ಮುಂದಿನ ದಿನಗಳಲ್ಲಿ ಈ ಅನುಪಾತವನ್ನು ಇನ್ನೂ ಹೆಚ್ಚಿಸಬೇಕಾದ ಅಗತ್ಯವಿದೆ ಎಂದವರು ಹೇಳಿದರು.
ಮಾರ್ಚ್ ಕೊನೆಯವರೆಗೆ ಜಿಲ್ಲೆಯ ಬ್ಯಾಂಕ್‌ಗಳು 6,311.93 ಕೋಟಿ ರೂ. ಸಾಲ ನೀಡಿ ಈ ಅವಯ ವಾರ್ಷಿಕ ಗುರಿಯಾದ 6,420 ಕೋಟಿ ರೂ.ಗಳಲ್ಲಿ ಶೇ.98.32ರಷ್ಟು ಪ್ರಗತಿಯನ್ನು ಸಾಸಿದೆ. ಇದರಲ್ಲಿ 1,748.22 ಕೋಟಿ ರೂ.ಗಳನ್ನು ಕೃಷಿ ಕ್ಷೇತ್ರಕ್ಕೂ, 1,895.07 ಕೋಟಿ ರೂ.ವನ್ನು ಕಿರು ಹಾಗೂ ಸಣ್ಣ ಉದ್ದಿಮೆಗಳಿಗೂ, 996.5 ಕೋಟಿ ರೂ.ಗಳನ್ನು ಇತರ ಆದ್ಯತಾ ರಂಗದ ಉದ್ದೇಶಗಳಿಗೂ ನೀಡಲಾಗಿದೆ.
ಒಟ್ಟು ಆದ್ಯತಾ ರಂಗಕ್ಕೆ ನಿಗದಿಪಡಿಸಲಾದ ಗುರಿ 5,158.72 ಕೋಟಿ ರೂ.ಗೆ ಪ್ರತಿಯಾಗಿ 4,639.79 (ಶೇ.89.94) ಕೋಟಿ ರೂ. ಸಾಲ ವಿತರಣೆ ಮಾಡಲಾಗಿದೆ. ಇದೇ ಅವಯಲ್ಲಿ ಆದ್ಯತೇತರ ರಂಗಕ್ಕೆ ವಾರ್ಷಿಕ ನಿಗಿಯಾದ ಗುರಿ 1,261.28 ಕೋಟಿ ರೂ.ಗಳಿಗೆ ಬದಲಾಗಿ 1,672.14 ಕೋಟಿ ರೂ. ಸಾಲ ವಿತರಿಸಲಾಗಿದೆ ಎಂದು ಹೆಗ್ಡೆ ವಿವರಿಸಿದರು.
ಕಳೆದ ಹಣಕಾಸು ವರ್ಷದ ನಾಲ್ಕನೆ ತ್ರೈಮಾಸಿಕದ ಕೊನೆಯವರೆಗೆ ಬ್ಯಾಂಕ್‌ಗಳು ಜಿಲ್ಲೆಯ ದುರ್ಬಲ ವರ್ಗದ 1,46,974 ಮಂದಿಗೆ ಒಟ್ಟು 1,547.38 ಕೋಟಿ ರೂ. ಸಾಲ ನೀಡಿದೆ. ಈ ಪೈಕಿ ಪರಿಶಿಷ್ಟ ಜಾತಿ, ಪಂಗಡದ 21,298 ಲಾನುಭವಿಗಳಿಗೆ 144.41 ಕೋಟಿ ರೂ.ಸಾಲ ನೀಡಿವೆ. ಅಲ್ಪಸಂಖ್ಯಾತ ವರ್ಗದ 52,162 ಮಂದಿಗೆ 1,057 ಕೋಟಿ ರೂ., 1,30,386 ಮಹಿಳೆಯರಿಗೆ 1,884.73 ಕೋಟಿ ರೂ. ಸಾಲವನ್ನು ಹಂಚಲಾಗಿದೆ ಎಂದು ಅವರು ತಿಳಿಸಿದರು.
ವಿದ್ಯಾಭ್ಯಾಸಕ್ಕಾಗಿ ಈವರೆಗೆ 15,586 ವಿದ್ಯಾರ್ಥಿಗಳಿಗೆ 331.78 ಕೋಟಿ ರೂ. ಸಾಲ ನೀಡಲಾಗಿದೆ. ಹಾಲಿ ವರ್ಷದಲ್ಲಿ 4,536 ವಿದ್ಯಾರ್ಥಿಗಳು 73.85 ಕೋಟಿ ರೂ. ಸಾಲ ಪಡೆದಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 34,948 ರೈತರು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ 316.78 ಕೋಟಿ ರೂ. ಸಾಲ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ. ಅದೇ ರೀತಿ 22,391 ಸ್ವಸಹಾಯ ಸಂಘಗಳು 433 ಕೋಟಿ ರೂ.ಸಾಲ ಪಡೆದಿವೆ.
ಜಿಲ್ಲೆಯ ಬ್ಯಾಂಕ್‌ಗಳು ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ 1,82,807 ಹಾಗೂ ಪ್ರಧಾನಮಂತ್ರಿ ಜೀವನಜ್ಯೋತಿ ವಿಮೆಯಡಿಯಲ್ಲಿ 90,526 ಹಾಗೂ ಅಟಲ್ ಪಿಂಚಣಿ ಯೋಜನೆಯಡಿ 6,013 ಮಂದಿಯ ನೋಂದಣಿ ಮಾಡಿಕೊಳ್ಳಲಾಗಿದೆ ಎಂದು ಎಸ್.ಎಸ್.ಹೆಗ್ಡೆ ನುಡಿದರು. ಸಭೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಪ್ರಬಂಧಕ ಜಯಪ್ರಕಾಶ್ ನಾರಾಯಣ್, ನಬಾರ್ಡ್‌ನ ಸಹಾಯಕ ಮಹಾಪ್ರಬಂಧಕ ಎಸ್.ರಮೇಶ್ ಅವರು ಉಪಸ್ಥಿತರಿದ್ದು, ಸಲಹೆ, ಸೂಚನೆ ನೀಡಿದರು. ಜಿಲ್ಲೆಯ ನೂತನ ಲೀಡ್ ಬ್ಯಾಂಕ್ ಮ್ಯಾನೇಜರ್ ್ರಾನ್ಸಿಸ್ ಬೋರ್ಜಿಯಾ ಸ್ವಾಗತಿಸಿ, ವಂದಿಸಿದರು.







