ರಿಕೋ ಓಪನ್: ಬೋಪಣ್ಣ ಜೋಡಿ ಕ್ವಾರ್ಟರ್‌ಫೈನಲ್‌ಗೆ

ಹಾಲೆಂಡ್, ಜೂ.8: ಭಾರತದ ರೋಹನ್ ಬೋಪಣ್ಣ ತನ್ನ ಹೊಸ ಜೊತೆಗಾರ ನಿಕೊಲಸ್ ಮಹೂಟ್ ಅವರೊಂದಿಗೆ ರಿಕೋ ಓಪನ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ.
ಬುಧವಾರ ಇಲ್ಲಿ ನಡೆದ ಪುರುಷರ ಡಬಲ್ಸ್‌ನ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಇಂಡೋ-ಫ್ರೆಂಚ್ ಜೋಡಿ ಬೋಪಣ್ಣ-ಮಹೂಟ್ ಕೇವಲ 50 ನಿಮಿಷಗಳಲ್ಲಿ ಶ್ರೇಯಾಂಕರಹಿತ ಎದುರಾಳಿ ರಾಬಿನ್ ಹಾಸ್ಸೆ ಹಾಗೂ ಗುಲೆರ್ಮೊ ಗಾರ್ಸಿಯಾ ಲೊಪೆಝ್‌ರನ್ನು 6-1, 6-4 ನೇರ ಸೆಟ್‌ಗಳಿಂದ ಸೋಲಿಸಿದ್ದಾರೆ.
ವಿಶ್ವ ಟೆನಿಸ್ ರ್ಯಾಂಕಿಂಗ್‌ನಲ್ಲಿ ಅಗ್ರ-10ರಲ್ಲಿ ಸ್ಥಾನ ಗಿಟ್ಟಿಸಿದ ಹಿನ್ನೆಲೆಯಲ್ಲಿ ಮುಂಬರುವ ರಿಯೋ ಗೇಮ್ಸ್‌ಗೆ ನೇರ ಪ್ರವೇಶ ಪಡೆದುಕೊಂಡಿರುವ ಬೋಪಣ್ಣ ಹೊಸ ಜೊತೆಗಾರ ಮಹೂಟ್‌ರೊಂದಿಗೆ ಮೊದಲ ಪಂದ್ಯ ಆಡುವುದರೊಂದಿಗೆ ಶುಭಾರಂಭ ಮಾಡಿದ್ದಾರೆ.
ರೊಮಾನಿಯದ ಜೊತೆಗಾರ ಫ್ಲಾರಿನ್ ಮೆರ್ಗಿಯಾ ಅವರು ಹೊರಿಯಾ ಟೆಕಾವು ಅವರೊಂದಿಗೆ ಒಲಿಂಪಿಕ್ ತಯಾರಿಯಲ್ಲಿ ತೊಡಗಿರುವ ಕಾರಣ ಬೋಪಣ್ಣ ಹೊಸ ಜೊತೆಗಾರ ಮಹೂಟ್‌ರೊಂದಿಗೆ ಆಡಿದ್ದಾರೆ.
ಬೋಪಣ್ಣ ರಿಯೋ ಗೇಮ್ಸ್‌ನ ಪುರುಷರ ಡಬಲ್ಸ್ ವಿಭಾಗದಲ್ಲಿ ತನ್ನ ಜೊತೆಗಾರರನ್ನು ಇನ್ನೂ ಆಯ್ಕೆ ಮಾಡಿಲ್ಲ. ಲಿಯಾಂಡರ್ ಪೇಸ್ ಅಥವಾ ಸಾಕೇತ್ ಮೈನೇನಿ ಅವರನ್ನು ಡಬಲ್ಸ್ ಜೊತೆಗಾರನಾಗಿ ಆಯ್ಕೆ ಮಾಡಬಹುದು.
ರಿಕೋ ಟೂರ್ನಿಯ ಮುಂದಿನ ಸುತ್ತಿನಲ್ಲಿ ಬೋಪಣ್ಣ-ಮಹೂಟ್ ಜೋಡಿ ಗಿಲೆಸ್ ಮುಲ್ಲರ್ ಹಾಗೂ ಫ್ರೆಡೆರಿಕ್ ನೀಲ್ಸನ್‌ರನ್ನು ಎದುರಿಸಲಿದ್ದಾರೆ.







