ಶಂಕರಾಚಾರ್ಯರ 1.5 ಕೋಟಿ ರೂ. ಬಸ್‌ಗೆ ತೆರಿಗೆ ಮನ್ನಾ ಮಾಡಿದ ಮಧ್ಯಪ್ರದೇಶ ಸರಕಾರ
ಭೋಪಾಲ, ಜೂನ್ 9: ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿಯವರು ಮತ್ತೊಮ್ಮೆ ಮಾಧ್ಯಮಗಳಲ್ಲಿ ಚರ್ಚೆಯ ವಿಷಯವಾಗಿದ್ದಾರೆ. ಈ ಬಾರಿ ಅವರು ಚರ್ಚೆಯಾಗಿರುವುದು ತನ್ನ ವಿವಾದಿತ ಹೇಳಿಕೆಗಳ ಕಾರಣದಿಂದಲ್ಲ, ಬದಲಾಗಿ ಅವರು ಹೊಂದಿರುವ ಲಕ್ಸುರಿ ಬಸ್ ಚರ್ಚೆಯ ವಿಷಯವಾಗಿದೆ. ಮಧ್ಯಪ್ರದೇಶ ಸರಕಾರ ಅವರ 1.5 ಕೋಟಿ ರೂಪಾಯಿ ಬೆಲೆಬಾಳುವ ಲಕ್ಸುರಿ ಬಸ್‌ನ ಸುಮಾರು ಎಂಟು ಲಕ್ಷ ರೂಪಾಯಿ ರಸ್ತೆ ತೆರಿಗೆಯನ್ನು ಮನ್ನಾ ಮಾಡಿದೆ. ಶಂಕರಾಚಾರ್ಯರ ಬಸ್ ತೆರಿಗೆ ಮನ್ನಾ ವಿಚಾರವನ್ನು ನಿನ್ನೆ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿತ್ತು.ಮಧ್ಯಪ್ರದೇಶದ ನರಸಿಂಹಪುರ ಜಿಲ್ಲೆಯಲ್ಲಿ ಅವರ ಆಶ್ರಮ ಇದೆ.
ಶಂಕರಾಚಾರ್ಯರ ತೆರಿಗೆ ಮನ್ನಾ ಮಾಡಬೇಕೆಂದು ಸಚಿವ ಬಾಬುಲಾಲ್‌ಗೌರ್‌ರು ಸಾರಿಗೆ ಇಲಾಖೆಗೆ ಪತ್ರವನ್ನು ಬರೆದಿದ್ದರು. ಆದರೆ ಸಾರಿಗೆ ಇಲಾಖೆ ತೆರಿಗೆ ಮನ್ನಾ ಮಾಡಲು ನಿರಾಕರಿಸಿತ್ತು. ಆದ್ದರಿಂದ ಸಂಪುಟ ಸಭೆಯಲ್ಲಿ ಶಂಕರಾಚಾರ್ಯರ ಬಸ್ ಗೆ ತೆರಿಗೆ ಮನ್ನಾ ಮಾಡಲು ನಿರ್ಧರಿಸಲಾಗಿದೆ.
ಶಂಕರಾಚಾರ್ಯರು ಈ ಬಸ್‌ನ್ನು ಹದಿನೈದು ಲಕ್ಷರೂಪಾಯಿಗೆ ಖರೀದಿಸಿದ್ದರು. ನಂತರ ಇದಕ್ಕೆ ಎಲ್ಲ ಸೌಕರ್ಯಗಳನ್ನು ಅಳವಡಿಸಿಕೊಳ್ಳಲಾಗಿತ್ತು. ಹಾಗಾಗಿ ಅದರ ಒಟ್ಟು ಮೊತ್ತ 1.5ಕೋಟಿ ರೂಪಾಯಿಯಾಗಿತ್ತು.