ಸುಳ್ಯ: ಕಂಪೌಂಡ್ ಕುಸಿದು ಕಾರು ಜಖಂ

ಸುಳ್ಯ, ಜೂ.9: ತಾಲೂಕಿನಲ್ಲಿ ಮುಂಗಾರು ಮಳೆಯ ಆರ್ಭಟ ಪ್ರಾರಂಭವಾಗುತ್ತಿದ್ದಂತೆ ಕಂಪೌಂಡು ಕುಸಿದು 2 ಕಾರುಗಳಿಗೆ ತೀವ್ರ ಹಾನಿಯಾದ ಘಟನೆ ಸುಳ್ಯ ಪೇಟೆಯಲ್ಲಿ ಗುರುವಾರ ಸಂಭವಿಸಿದೆ.
ಸುಳ್ಯದ ಟಿ.ಎ.ಪಿ.ಸಿ.ಎಂ.ಎಸ್.ನ ಹಿಂಭಾಗದಲ್ಲಿದ್ದ ಹಳೆಯ ಮುರ ಕಲ್ಲಿನ ಕಂಪೌಂಡ್ ಗುರುವಾರ ಬೆಳಗ್ಗೆ ಇದ್ದಕ್ಕಿದ್ದಂತೆ ಕುಸಿದು ಪಕ್ಕದಲ್ಲಿ ನಿಲ್ಲಿಸಿದ್ದ ಮಾರುತಿ 800 ಹಾಗೂ ಓಮ್ನಿ ಕಾರಿನ ಮೇಲೆ ಬಿದ್ದಿದೆ.
ಘಟನೆಯಲ್ಲಿ ಕಾರುಗಳಿಗೆ ತೀವ್ರ ಹಾನಿಯುಂಟಾಗಿದೆ. ಅಲ್ಲದೆ ಗಾಳಿ ಮಳೆಗೆ ಕುಕ್ಕುಜಡ್ಕ, ಆಲೆಟ್ಟಿ ಹೀಗೆ ಇತರ ಗ್ರಾಮಗಳಲ್ಲಿ ವಿದ್ಯುತ್ ಕಂಬಗಳು ಉರುಳಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.
Next Story





