ಜೂ.11ರಿಂದ 19ರವರೆಗೆ ಅಡ್ಯಾರ್ ಕಣ್ಣೂರಿನಲ್ಲಿ ಧಾರ್ಮಿಕ ಪ್ರವಚನ
ಮಂಗಳೂರು, ಜೂ. 9: ಟಿ.ಟಿ.ಎಸ್.ಎಸ್ ಅಡ್ಯಾರ್ ಕಣ್ಣೂರು ಇದರ ವತಿಯಿಂದ ರಮಳಾನ್ ತಿಂಗಳ ಪ್ರಯುಕ್ತ ಎಂಟು ದಿನಗಳ ಧಾರ್ಮಿಕ ಮತ ಪ್ರವಚನ ಹಾಗೂ ಮಜ್ಲಿಸುನ್ನೂರ್ ಆತ್ಮೀಯ ಸಂಗಮವು ಜೂ. 11 ರಿಂದ 19 ರವರೆಗೆ ಬೆಳಗ್ಗೆ 9:30 ರಿಂದ 12 ಗಂಟೆಯವರೆಗೆ ಉಸ್ಮಾನುಬಿನ್ ಅಫ್ವಾನ್ ಮಸೀದಿ ಬೋರುಗುಡ್ಡೆ ಕಣ್ಣೂರಿನಲ್ಲಿ ಸೈಯದ್ ತ್ವಾಹ ಜಿಪ್ತಿ ತಂಙಳ್ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಜೂ. 11 ರಂದು ಸೈಯದ್ ಇಬ್ರಾಹೀಂ ಬಾತಿಷ್ ತಂಙಳ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಎಸ್.ಬಿ. ಮುಹಮ್ಮದ್ ಶರೀಫ್ ಅರ್ಷದಿ 'ರಮಳಾನಿನ ಮಹತ್ವ', ಜೂ. 12ರಂದು ವಿ.ಕೆ.ಸ್ವಾದಕತುಲ್ಲಾ ಫೈಝಿ 'ಏಳು ಮಹಾ ಪಾಪಗಳು', ಜೂ. 13 ರಂದು ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ಅವರು 'ಕುರ್ ಆನ್ ಅದ್ಭುತ ಗ್ರಂಥ', ಜೂ.14ರಂದು ಖಾಸಿಂ ದಾರಿಮಿ ಕಿನ್ಯ 'ವ್ಯಾಪಾರ ಮತ್ತು ಝಕಾತ್', ಜೂ.15 ರಂದು ಅಶ್ಪಾಕ್ ಫೈಝಿ 'ಇಸ್ಲಾಮಿನಲ್ಲಿ ಅಶುದ್ಧಿ ಮತ್ತು ಶುದ್ಧಿ', ಜೂ. 16 ರಂದು ರಿಯಾಝ್ ರಹ್ಮಾನಿ 'ನಮಾಝ್ ಮತ್ತು ಮಕ್ಕಳ ಪರಿಪಾಲನೆ', ಜೂ. 18ರಂದು ಅಬ್ದುಲ್ ಅಝೀಝ್ ದಾರಿಮಿ ಪವ್ವಲ್ 'ಸತ್ಯವಿಶ್ವಾಸಿ ಮತ್ತು ಪರೀಕ್ಷಣಗಳು' ಎಂಬ ವಿಷಯಗಳ ಕುರಿತು ಉಪನ್ಯಾಸ ನೀಡಲಿದ್ದಾರೆ.
ಜೂ. 19 ರಂದು ಮಜ್ಲಿಸುನ್ನೂರ್ ಆತ್ಮೀಯ ಸಂಗಮವು ಸೈಯದ್ ಝೈನುಲ್ ಆಬೀದೀನ್ ಜಿಫ್ರಿ ತಂಙಳ್ ನೇತೃತ್ವದಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.





