ನಿವೃತ್ತ ಉಪನ್ಯಾಸಕ ವಾಸುದೇವರಿಗೆ ಸನ್ಮಾನ

ಮಂಗಳೂರು ಜೂ 9: ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದಲ್ಲಿ 12 ವರ್ಷಗಳ ಕಾಲ ಉಪನ್ಯಾಸಕರಾಗಿ ಸೇವೆಯನ್ನು ಸಲ್ಲಿಸಿ ನಿವೃತ್ತರಾದ ವಾಸುದೇವ ಎ. ಇವರನ್ನು ಇತ್ತೀಚೆಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ನಾಗೇಂದ್ರ ಎಸ್. ಮಧ್ಯಸ್ಥ, ಉತ್ತಮ ಶಿಕ್ಷಕ ಸಮಾಜದ ಆಸ್ತಿ. ಅಂತಹ ಶಿಕ್ಷಕರನ್ನು ರೂಪಿಸುವ ಶಿಕ್ಷಕರ ಶಿಕ್ಷಣದ ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠ ವೃತ್ತಿ. ಈ ವೃತ್ತಿಯಲ್ಲಿ ಬದ್ಧತೆಯಿಂದ ದುಡಿದ ವಾಸುದೇವರ ಸೇವೆ ಸದಾ ಸ್ಮರಣೀಯ ಎಂದು ಹೇಳಿದರು.
ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕರಾದ ಮೋಸೆಸ್ ಜಯಶೇಖರ್, ಶಿವರಾಮಯ್ಯ ಹಾಗೂ ಬಸವರಾಜು ಅತಿಥಿಗಳಾಗಿದ್ದರು.
ಉಪನ್ಯಾಸಕರಾದ ಸತೀಶ್ ಪಿ., ಚಂದ್ರಶೇಖರ್, ರವೀಂದ್ರ ಶೆಟ್ಟಿ ಹಾಗೂ ಪ್ರಶಿಕ್ಷಣಾರ್ಥಿಗಳು ವಾಸುದೇವ ಅವರ ಸೇವಾ ಮನೋಭಾವವನ್ನು ಶ್ಲಾಘಿಸಿದರು.
Next Story





