ವಿವಿಧೆಡೆ ಕಾರ್ಯಾಚರಿಸುತ್ತಿದ್ದ ಮಸಾಜ್ ಪಾರ್ಲರ್‌ಗಳಿಗೆ ದಾಳಿ
ಮಂಗಳೂರು,ಜೂ 9:ನಗರದ ವಿವಿಧೆಡೆ ಕಾರ್ಯಚರಿಸುತ್ತಿರುವ ಮಸಾಜ್ ಪಾರ್ಲರ್‌ಗಳಿಗೆ ಸಿಸಿಬಿ ಪೊಲೀಸರ ತಂಡ ದಾಳಿ ಮಾಡಿ, ಐವರನ್ನು ಬಂಧಿಸಿದೆ.
ಸಿಸಿಬಿ ಪೊಲೀಸರು ನಗರದ ಬಿಜೈ ಸಮೀಪದ ಮಸಾಜ್ ಸೆಂಟರ್ ಹಾಗೂ ಸಿಟಿಸೆಂಟರ್ ಸಮೀಪದ ಮಸಾಜ್ ಸೆಂಟರ್‌ಗೆ ದಾಳಿ ನಡೆಸಿದ್ದಾರೆ.
ಮಸಾಜ್ ಸೆಂಟರ್‌ಗಳಿಂದ ಉಡುಪಿ ತಾಲೂಕು ಬೈಲೂರಿನ ಇಬ್ರಾಹೀಂ (50) , ಉರ್ವಸ್ಟೋರ್‌ನ ಪ್ರಕಾಶ್ (30), ಕಣ್ಣೂರು ನಿವಾಸಿ ರವೂಫ್ (32), ವಿಟ್ಲ ಕಸಬಾದ ದಿನೇಶ್ (32) ಹಾಗೂ ಬಂಟ್ವಾಳದ ಮನೋಜ್ (40) ಎಂಬವರನ್ನು ಸಿಸಿಬಿ ತಂಡ ಬಂಧಿಸಿದೆ.
Next Story





