ಬಡ ದೇಶಗಳಿಗೆ 1 ಲಕ್ಷ ಕೋಳಿಗಳು: ಬಿಲ್ ಗೇಟ್ಸ್
ನ್ಯೂಯಾರ್ಕ್, ಜೂ. 9: ಕಿತ್ತು ತಿನ್ನುವ ಬಡತನವನ್ನು ನಿವಾರಿಸುವ ಪ್ರಯತ್ನವಾಗಿ ಬಡ ದೇಶಗಳಿಗೆ ಒಂದು ಲಕ್ಷ ಕೋಳಿಗಳನ್ನು ದಾನ ಮಾಡುವುದಾಗಿ ಮೈಕ್ರೋಸಾಫ್ಟ್ ಸ್ಥಾಪಕ ಹಾಗೂ ದಾನಿ ಬಿಲ್ ಗೇಟ್ಸ್ ಬುಧವಾರ ಘೋಷಿಸಿದ್ದಾರೆ.
ಬುರ್ಕಿನ ಫಾಸೊದಿಂದ ಹಿಡಿದು ಬೊಲಿವಿಯವರೆಗೆ ಸುಮಾರು ಎರಡು ಡಝನ್ ಅಭಿವೃದ್ಧಿಶೀಲ ದೇಶಗಳ ಗ್ರಾಮೀಣ ಪ್ರದೇಶಗಳಿಗೆ ಕೋಳಿಗಳನ್ನು ಸಾಕಲಿಕ್ಕಾಗಿ ಕಳುಹಿಸಲಾಗುವುದು ಎಂದರು.
ಕೋಳಿಗಳನ್ನು ಸಾಕಿ ಮಾರಿ ಬಂದ ಹಣದಿಂದ ಬಡತನವನ್ನು ನೀಗಿಸಬಹುದು ಎಂದು ಬಿಲ್ ಆ್ಯಂಡ್ ಮೆಲಿಂಡ ಫೌಂಡೇಶನ್ ಹೇಳಿದೆ.
Next Story





