ವಿಂಬಲ್ಡನ್ ಟೂರ್ನಿ: ನಡಾಲ್ ಅಲಭ್ಯ?
ಲಂಡನ್, ಜೂ.9: ಮಣಿಗಂಟಿನ ನೋವಿನಿಂದ ಬಳಲುತ್ತಿರುವ ಸ್ಪೇನ್‌ನ ಹಿರಿಯ ಆಟಗಾರ ರಫೆಲ್ ನಡಾಲ್ ಮುಂಬರುವ ವಿಂಬಲ್ಡನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಭಾಗವಹಿಸುವುದು ಅನುಮಾನವಾಗಿದೆ.
ನಡಾಲ್ ಮಣಿಗಂಟಿನ ನೋವಿನಿಂದ ಯಾವಾಗ ಚೇತರಿಸಿಕೊಳ್ಳುತಾರೆಂದು ಸ್ಪಷ್ಟವಾಗಿಲ್ಲ ಎಂದು ನಡಾಲ್‌ರ ಚಿಕ್ಕಪ್ಪ ಹಾಗೂ ಕೋಚ್ ಟೋನಿ ನಡಾಲ್ ಹೇಳಿದ್ದಾರೆ.
ವಿಶ್ವದ ಮಾಜಿ ನಂ.1 ಆಟಗಾರ ಹಾಗೂ 14 ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ನಡಾಲ್ ಫ್ರೆಂಚ್ ಓಪನ್ ಟೂರ್ನಿಯ ಎರಡನೆ ಸುತ್ತಿಗೆ ತಲುಪಿದ ಬಳಿಕ ಕಾಣಿಸಿಕೊಂಡ ಗಾಯದ ಸಮಸ್ಯೆಯ ಹಿನ್ನೆಲೆಯಲ್ಲಿ ಟೂರ್ನಿಯಿಂದ ಹಿಂದೆ ಸರಿದಿದ್ದರು.
‘‘ನಡಾಲ್ ಚೇತರಿಕೆಯ ಹಾದಿಯಲ್ಲಿದ್ದಾರೆ. ಅವರು ಯಾವಾಗ ಸಕ್ರಿಯ ಟೆನಿಸ್ ಮರಳುತ್ತಾರೆಂದು ದಿನ ನಿಗದಿ ಮಾಡಿಲ್ಲ. ಏಕೆಂದರೆ ಅವರು ಸಂಪೂರ್ಣ ಫಿಟ್‌ನೆಸ್ ಪಡೆದು ವಾಪಸಾಗುವುದು ಅತ್ಯಂತ ಮುಖ್ಯ. ವೈದ್ಯರು ಮನವರಿಕೆ ಮಾಡಿದ ಬಳಿಕವಷ್ಟೇ ನಡಾಲ್ ಟೆನಿಸ್‌ಗೆ ವಾಪಸಾಗುತ್ತಾರೆ. ನಡಾಲ್ ಶೇ.100ರಷ್ಟು ದೈಹಿಕ ಕ್ಷಮತೆ ಪಡೆಯದೆ ಟೆನಿಸ್ ಆಡುವುದಿಲ್ಲ’’ಎಂದು ಟೋನಿ ನಡಾಲ್ ತಿಳಿಸಿದ್ದಾರೆ.
Next Story





