ಪಾಕ್‌ನಲ್ಲಿ 57,000 ಕೋ. ರೂ. ಹೂಡಲಿರುವ ಚೀನಾ
ಇಸ್ಲಾಮಾಬಾದ್, ಜೂ. 9: ಪಾಕಿಸ್ತಾನದ ರೈಲು ಜಾಲವನ್ನು ಮೇಲ್ದರ್ಜೆಗೇರಿಸಲು ಹಾಗೂ ಇರಾನ್‌ನೊಂದಿಗೆ ಮಹತ್ವದ ಅನಿಲ ಪೈಪ್‌ಲೈನ್ ನಿರ್ಮಿಸಲು ಆ ದೇಶದಲ್ಲಿ ಚೀನಾವು 8.5 ಬಿಲಿಯ ಡಾಲರ್ (ಸುಮಾರು 57,000 ಕೋಟಿ ರೂಪಾಯಿ) ಹೂಡಲಿದೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.
ಬೃಹತ್ ಯೋಜನೆಗಳಿಗೆ ಅನುಮೋದನೆ ನೀಡುವ ಪಾಕಿಸ್ತಾನದ ಸಂಸ್ಥೆ ‘ಸೆಂಟ್ರಲ್ ಡೆವಲಪ್‌ಮೆಂಟ್ ವರ್ಕಿಂಗ್ ಪಾರ್ಟಿ’ (ಸಿಡಿಡಬ್ಲುಪಿ) ಎರಡು ಯೋಜನೆಗಳಲ್ಲಿ 10 ಬಿಲಿಯ ಡಾಲರ್ (ಸುಮಾರು 67,000 ಕೋಟಿ ರೂಪಾಯಿ) ಹೂಡುವುದಕ್ಕೆ ನಿನ್ನೆ ಅನುಮೋದನೆ ನೀಡಿದೆ.
ಯೋಜನೆಯ ವೆಚ್ಚದ 85 ಶೇಕಡದಷ್ಟಕ್ಕೆ ಸಮವಾದ ಮೊತ್ತವನ್ನು ಚೀನಾ ಸಾಲದ ರೂಪದಲ್ಲಿ ನೀಡಲಿದೆ ಎಂದು ‘ದ ಎಕ್ಸ್‌ಪ್ರೆಸ್ ಟ್ರಿಬ್ಯೂನ್’ ವರದಿ ಮಾಡಿದೆ.
Next Story





