ನಿರ್ಮಾಣಹಂತದ ಫ್ಲಾಟ್‌ಗಳ ಖರೀದಿಗೆ ಸೇವಾತೆರಿಗೆ ವಿಧಿಸುವಂತಿಲ್ಲ:ಹೈಕೋರ್ಟ್
ಹೊಸದಿಲ್ಲಿ, ಜೂ.9: ವಸತಿ ಯೋಜನೆಯಲ್ಲಿ ನಿರ್ಮಾಣ ಹಂತದಲ್ಲಿರುವ ಫ್ಲಾಟ್‌ಗಳ ಖರೀದಿಗಾಗಿ ಖರೀದಿದಾರರು ಮತ್ತು ಬಿಲ್ಡರ್‌ಗಳ ನಡುವಿನ ಒಪ್ಪಂದಗಳಿಗೆ ಸಂಬಂಧಿಸಿದಂತೆ ಸೇವಾ ತೆರಿಗೆಯನ್ನು ವಿಧಿಸುವಂತಿಲ್ಲ ಎಂದು ದಿಲ್ಲಿ ಉಚ್ಚ ನ್ಯಾಯಾಲಯವು ತೀರ್ಪು ನೀಡಿದೆ.ಆದರೆ ಫ್ಲಾಟ್‌ನ ಆದ್ಯತಾ ತಾಣಕ್ಕಾಗಿ ಬಿಲ್ಡರ್‌ಗಳು ವಿಧಿಸುವ ಮೊತ್ತದ ಮೇಲೆ ಸೇವಾತೆರಿಗೆಯನ್ನು ಹೇರಬಹುದಾಗಿದೆ. ಇದು ಗ್ರಾಹಕರ ಆದ್ಯತೆಗಳನ್ನು ಆಧರಿಸಿದ್ದು, ವೌಲ್ಯ ವರ್ಧನೆಗೆ ಸಮನಾಗಿದೆ ಎಂದು ನ್ಯಾಯಮೂರ್ತಿಗಳಾದ ಎಸ್.ಮುರಳೀಧರ ಮತ್ತು ವಿಭು ಬಾಖ್ರು ಅವರ ಪೀಠವು ಹೇಳಿತು.
ಉತ್ತರ ಪ್ರದೇಶದ ನೋಯ್ಡದಲ್ಲಿ ನಿರ್ಮಾಣಗೊಳ್ಳುತ್ತಿರುವ ಬಹುಮಹಡಿಗಳ ವಸತಿ ಸಮುಚ್ಚಯದಲ್ಲಿ ಫ್ಲಾಟ್‌ಗಳ ಖರೀದಿಗಾಗಿ ಮೆ.ಸೇಥಿ ಬಿಲ್ಡ್‌ವೆಲ್ ಪ್ರೈ.ಲಿ. ಜೊತೆ ಪ್ರತ್ಯೇಕ ಒಪ್ಪಂದಗಳನ್ನು ಮಾಡಿಕೊಂಡಿರುವ ಹಲವಾರು ವ್ಯಕ್ತಿಗಳು ಸಲ್ಲಿಸಿದ್ದ ಅರ್ಜಿಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದ ಈ ತೀರ್ಪು ಹೊರಬಿದ್ದಿದೆ.
Next Story





