ಸೈನಾ, ಶ್ರೀಕಾಂತ್ ಕ್ವಾರ್ಟರ್‌ಫೈನಲ್‌ಗೆ

ಆಸ್ಟ್ರೇಲಿಯನ್ ಬ್ಯಾಡ್ಮಿಂಟನ್ ಓಪನ್ ಸೂಪರ್ ಸರಣಿ
ಸಿಡ್ನಿ, ಜೂ.9: ಆಸ್ಟ್ರೇಲಿಯನ್ ಬ್ಯಾಡ್ಮಿಂಟನ್ ಓಪನ್ ಸೂಪರ್ ಸರಣಿಯಲ್ಲಿ ಕ್ರಮವಾಗಿ ಮಹಿಳೆಯರ ಹಾಗೂ ಪುರುಷರ ವಿಭಾಗದಲ್ಲಿ ನೇರ ಸೆಟ್‌ಗಳಿಂದ ಜಯ ಸಾಧಿಸಿರುವ ಭಾರತದ ಸ್ಟಾರ್ ಶಟ್ಲರ್ ಸೈನಾ ನೆಹ್ವಾಲ್ ಹಾಗೂ ಕಿಡಂಬಿ ಶ್ರೀಕಾಂತ್ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ.
ಇಲ್ಲಿನ ಸಿಡ್ನಿ ಒಲಿಂಪಿಕ್ಸ್ ಪಾರ್ಕ್‌ನಲ್ಲಿ ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ 7ನೆ ಶ್ರೇಯಾಂಕದ ಸೈನಾ ಮಲೇಷ್ಯಾದ ಜಿನ್ ವೀ ಗೋ ಅವರನ್ನು 21-12, 21-14 ಗೇಮ್‌ಗಳ ಅಂತರದಿಂದಲೂ, ವಿಶ್ವದ ನಂ.13ನೆ ಆಟಗಾರ ಶ್ರೀಕಾಂತ್ ಇಂಡೋನೇಷ್ಯಾದ ಸೋನಿ ಡ್ವಿ ಕಾಂಕೊರೊ ಅವರನ್ನು 21-19, 21-12 ಗೇಮ್‌ಗಳ ಅಂತರದಿಂದ ಸೋಲಿಸಿದ್ದಾರೆ.
ಸೈನಾ ಕ್ವಾರ್ಟರ್‌ಫೈನಲ್ ಸುತ್ತಿನಲ್ಲಿ ವಿಶ್ವದ ನಂ.2ನೆ ಆಟಗಾರ್ತಿ ರಾಟ್ಚಾನೊಕ್ ಇಂತನಾನ್‌ರನ್ನು ಎದುರಿಸಲಿದ್ದಾರೆ. ಇಂತನಾನ್ ಎರಡನೆ ಸುತ್ತಿನ ಪಂದ್ಯದಲ್ಲಿ ಹಾಂಕಾಂಗ್‌ನ ಯಿಪ್ ಪೂ ಯಿನ್‌ರನ್ನು ಎದುರಿಸಲಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾಗಿರುವ ವಿಶ್ವ ಬ್ಯಾಡ್ಮಿಂಟನ್ ಫೆಡರೇಶನ್ ರ್ಯಾಂಕಿಂಗ್‌ನಲ್ಲಿ ಹಿನ್ನಡೆ ಕಂಡಿದ್ದ ಶ್ರೀಕಾಂತ್ ಮೊದಲ ಗೇಮ್‌ನಲ್ಲಿ ಕಠಿಣ ಸವಾಲು ಎದುರಿಸಿದರೂ ತಿರುಗೇಟು ನೀಡಲು ಸಫಲರಾದರು.
ಗುಂಟೂರಿನ ಪ್ರತಿಭೆ ಶ್ರೀಕಾಂತ್ ಎರಡನೆ ಗೇಮ್‌ನಲ್ಲಿ ಆರಂಭದಲ್ಲೆ ಪ್ರಾಬಲ್ಯ ಸಾಧಿಸಿ ಕೇವಲ 34 ನಿಮಿಷದಲ್ಲಿ ಜಯ ಸಾಧಿಸಿದರು.
ಶ್ರೀಕಾಂತ್ ಕ್ವಾರ್ಟರ್‌ಫೈನಲ್ ಸುತ್ತಿನಲ್ಲಿ ದಕ್ಷಿಣ ಕೊರಿಯಾದ ಕ್ವಾಂಗ್ ಹೀ ಹಿಯೊರನ್ನು ಎದುರಿಸಲಿದ್ದಾರೆ.







