ಡೆನ್ಮಾರ್ಕ್ ನಾಯಕ ಡೇನಿಯಲ್ ಅಗೆರ್ ನಿವೃತ್ತಿ

ಕೋಪನ್‌ಹೇಗನ್, ಜೂ.9: ಡೆನ್ಮಾರ್ಕ್ ನಾಯಕ ಹಾಗೂ ಲಿವರ್‌ಪೂಲ್‌ನ ಮಾಜಿ ಡಿಫೆಂಡರ್ ಡೇನಿಯಲ್ ಅಗೆರ್ ಫುಟ್ಬಾಲ್‌ನಿಂದ ನಿವೃತ್ತಿಯಾಗುವುದಾಗಿ ಘೋಷಿಸಿದ್ದಾರೆ.
31ರ ಹರೆಯದ ಅಗೆರ್ ಗುರುವಾರ ಇಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ನಿವೃತ್ತಿಯ ವಿಷಯ ಪ್ರಕಟಿಸಿದರು.
ಇದೊಂದು ಅತ್ಯಂತ ಕಠಿಣ ನಿರ್ಧಾರ. ನನ್ನ ವೃತ್ತಿಜೀವನದ ಬಗ್ಗೆ ನನಗೆ ಹೆವ್ಮೆುಯಿದೆ ಎಂದು ಅಗೆರ್ ಟ್ವೀಟ್ ಮಾಡಿದ್ದಾರೆ.
ಡೆನ್ಮಾರ್ಕ್ ಪರ 11 ವರ್ಷಗಳ ಕಾಲ ಆಡಿರುವ ಅಗರ್ 75 ಪಂದ್ಯಗಳನ್ನು ಆಡಿದ್ದಾರೆ. 12 ಗೋಲುಗಳನ್ನು ಬಾರಿಸಿದ್ದಾರೆ. ಡೆನ್ಮಾರ್ಕ್ ಶುಕ್ರವಾರ ಆರಂಭವಾಗಲಿರುವ ಯುರೋ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದಿಲ್ಲ.
ಅಗರ್ 2010ರ ವಿಶ್ವಕಪ್ ಹಾಗೂ 2012ರ ಯುರೋಪಿಯನ್ ಚಾಂಪಿಯನ್‌ಶಿಪ್‌ನಲ್ಲಿ ಆಡಿದ್ದಾರೆ.ಅಗೆರ್ ವೃತ್ತಿಜೀವನದಲ್ಲಿ ಗಾಯದ ಸಮಸ್ಯೆ ಎದುರಿಸುತ್ತಾ ಬಂದಿದ್ದಾರೆ.
Next Story





