ಹಾಕಿ ಚಾಂಪಿಯನ್ ಟ್ರೋಫಿ ಶುಕ್ರವಾರ ಆರಂಭ:
ಭಾರತಕ್ಕೆ ಜರ್ಮನಿ ಮೊದಲ ಎದುರಾಳಿ
ಲಂಡನ್,ಜೂ.9: ಒಲಿಂಪಿಕ್ಸ್ ಗೇಮ್ಸ್ ಆರಂಭಕ್ಕೆ ಮೊದಲು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ಬಯಸಿರುವ ಭಾರತದ ಹಾಕಿ ತಂಡ ಶುಕ್ರವಾರ ಇಲ್ಲಿ ಆರಂಭವಾಗಲಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ವಿಜೇತ ಜರ್ಮನಿ ತಂಡವನ್ನು ಎದುರಿಸಲಿದೆ.
ಭಾರತ 1982ರಲ್ಲಿ ಕೊನೆಯ ಬಾರಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಂಚಿನ ಪದಕವನ್ನು ಜಯಿಸಿತ್ತು. ಆ ನಂತರ ಭಾರತ 7 ಟೂರ್ನಿಗಳಲ್ಲಿ ಭಾಗವಹಿಸಿತ್ತು. 2012 ಹಾಗೂ 2014ರಲ್ಲಿ ನಡೆದ ಕಳೆದೆರಡು ಟೂರ್ನಿಗಳಲ್ಲಿಕ್ರಮವಾಗಿ 7 ಹಾಗೂ 4ನೆ ಸ್ಥಾನಕ್ಕೆ ತೃಪ್ತಿಪಟ್ಟಿತ್ತು.
Next Story





