ಪುತ್ತೂರು: ಡೆಂಗ್ ಜ್ವರಕ್ಕೆ ಬಾಲಕ ಬಲಿ

ಪುತ್ತೂರು, ಜೂ.9: ಡೆಂಗ್ ಜ್ವರದಿಂದ ಬಳಲುತ್ತಿದ್ದ ಶಾಲಾ ಬಾಲಕನೊಬ್ಬ ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ಬೆಳಂದೂರು ಎಂಬಲ್ಲಿ ಗುರುವಾರ ಸಂಭವಿಸಿದೆ.
ಬೆಳಂದೂರು ನಿವಾಸಿ ಅಬ್ದುರ್ರಹ್ಮಾನ್ ಮತ್ತು ಬೀಪಾತುಮ್ಮ ದಂಪತಿಯ ಪುತ್ರ, ಇಲ್ಲಿನ ಸರ್ಕಾರಿ ಶಾಲೆಯಲ್ಲಿ 1ನೆ ತರಗತಿಯಲ್ಲಿ ಕಲಿಯುತ್ತಿದ್ದ ಮುಹಮ್ಮದ್ ಅರಝ್ವಿನ್(6) ಮೃತ ಪಟ್ಟ ಬಾಲಕ.
ಮುಹಮ್ಮದ್ ಅರಝ್ವಿನ್ ಈ ಶೈಕ್ಷಣಿಕ ವರ್ಷದಲ್ಲಿ ಶಾಲೆಗೆ ಸೇರ್ಪಡೆಗೊಂಡಿದ್ದು, 2 ದಿನಗಳಷ್ಟೇ ಶಾಲೆಗೆ ಹೋಗಿದ್ದ. ಬಳಿಕ ಆತನಿಗೆ ಜ್ವರ ಕಾಣಿಸಿಕೊಂಡಿದ್ದ ಕಾರಣ ಶಾಲೆಗೆ ತೆರಳಿರಲಿಲ್ಲ. ಜ್ವರ ಬಾಧೆಗೆ ಒಳಗಾದ ಮುಹಮ್ಮದ್ ಅರಝ್ವಿನ್‌ಗೆ ಸ್ಥಳೀಯವಾಗಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಜ್ವರ ಕಡಿಮೆಯಾಗದೆ ಉಲ್ಭಣಿಸಿದ ಕಾರಣ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
Next Story





