ಅಮೆರಿಕದಿಂದ ಎರಡನೆ ವಾರ್ಷಿಕ ವಿದ್ಯಾರ್ಥಿ ವೀಸಾ ದಿನಾಚರಣೆ
ಹೊಸದಿಲ್ಲಿ,ಜೂ.9: ಭಾರತ ಮತ್ತು ಅಮೆರಿಕಗಳ ನಡುವೆ ಉನ್ನತ ಶಿಕ್ಷಣ ಸಂಬಂಧವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಅಮೆರಿಕವು ಭಾರತದ ಪ್ರಮುಖ ನಗರಗಳಲ್ಲಿ ಎರಡನೆ ವಾರ್ಷಿಕ ವಿದ್ಯಾರ್ಥಿ ವೀಸಾ ದಿನಾಚರಣೆಯನ್ನು ಏರ್ಪಡಿಸಿತ್ತು. ದಿಲ್ಲಿಯಲ್ಲಿ ಅಮೆರಿಕದ ರಾಯಭಾರಿ ಕಚೇರಿಯಲ್ಲಿ ಮತ್ತು ಚೆನ್ನೈ, ಹೈದರಾಬಾದ್, ಕೋಲ್ಕತಾ ಮತ್ತು ಮುಂಬೈಗಳಲ್ಲಿ ಕಾನ್ಸುಲೇಟ್ ಜನರಲ್‌ಗಳ ಕಚೇರಿಗಳಲ್ಲಿ ಈ ಕಾರ್ಯಕ್ರಮಗಳು ನಡೆದವು. ಈ ನಗರಗಳಲ್ಲಿಯ 4,000ಕ್ಕೂ ಅಧಿಕ ವೀಸಾ ಆಕಾಂಕ್ಷಿ ವಿದ್ಯಾರ್ಥಿಗಳು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.
ಪ್ರಸ್ತುತ 1,32,000 ಭಾರತೀಯ ವಿದ್ಯಾರ್ಥಿಗಳು ಅಮೆರಿಕದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆದಿದ್ದು, ಇದು ಚೀನಾದ ಬಳಿಕ ಎರಡನೆ ಅತಿ ದೊಡ್ಡ ವಿದೇಶಿ ವಿದ್ಯಾರ್ಥಿಗಳ ಗುಂಪಾಗಿದೆ. ಅಂಕಿಅಂಶಗಳು ಹೇಳುವಂತೆ ಈ ವರ್ಷ ಅಮೆರಿಕದ ವಿದ್ಯಾರ್ಥಿ ವೀಸಾ ಅರ್ಜಿಗಳ ಸಂಖ್ಯೆ ಕಳೆದ ವರ್ಷಕ್ಕಿಂತ ಶೇ.29ರಷ್ಟು ಏರಿಕೆಯಾಗಿದೆ.
Next Story





