ಮುಸ್ಲಿಮ್ ಸಂಪ್ರದಾಯದಂತೆ ಅಲಿ ಅಂತ್ಯಸಂಸ್ಕಾರ ಕ್ರಿಯೆ ಆರಂಭ

ಲೂಯಿಸ್‌ವಿಲ್, ಜೂ.9: ಬಾಕ್ಸಿಂಗ್ ದಂತಕತೆ ಮುಹಮ್ಮದ್ ಅಲಿ ಅವರ ಅಂತ್ಯಸಂಸ್ಕಾರ ಮುಸ್ಲಿಮ್ ಸಂಪ್ರದಾಯದಂತೆ ನಡೆಯಲಿದ್ದು, ಎರಡು ದಿನಗಳ ಕಾಲ ನಡೆಯುವ ಅಂತ್ಯ ಸಂಸ್ಕಾರದ ವಿಧಿ ವಿಧಾನ ಗುರುವಾರ ಅವರ ಹುಟ್ಟೂರು ಲೂಯಿಸ್‌ವಿಲ್‌ನಲ್ಲಿ ಆರಂಭವಾಗಿದೆ.
ಕಳೆದ ವಾರ ತನ್ನ 74ರ ಹರೆಯದಲ್ಲಿ ನಿಧನರಾಗಿದ್ದ ಅಲಿ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿ ಫ್ರೀಡಂ ಹಾಲ್‌ನಲ್ಲಿ ಗುರುವಾರ ಎಲ್ಲ ವಯೋಮಿತಿಯ 16,000 ದಷ್ಟಿದ್ದ ಜನರು ಪ್ರಾರ್ಥನೆ ಸಲ್ಲಿಸಿದರು. ಅಲಿ ಅವರ ಅಂತ್ಯಸಂಸ್ಕಾರ ಕಾರ್ಯಕ್ರಮ ಶುಕ್ರವಾರವೂ ಮುಂದುವರಿಯಲಿದ್ದು, 20ನೆ ಶತಮಾನದ ಅತ್ಯುತ್ತಮ ಬಾಕ್ಸಿಂಗ್ ಪಟುವಿಗೆ ಅಭಿಮಾನಿಗಳು ಅಂತಿಮ ನಮನ ಸಲ್ಲಿಸಬಹುದು.
Next Story





