ಮನನೊಂದು ಯುವಕ ಆತ್ಮಹತ್ಯೆ

ಕಾಸರಗೋಡು, ಜೂ. 9: ಗಲ್ಫ್ನಲ್ಲಿ ಉದ್ಯೋಗ ಕಳೆದುಕೊಂಡ ಯುವಕನೋರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಸರಗೋಡು ರೈಲ್ವೆ ನಿಲ್ದಾಣ ಸಮೀಪದ ವಸತಿ ಗೃಹದಲ್ಲಿ ನಡೆದಿದೆ.
ಮೃತಪಟ್ಟವರನ್ನು ಪೆರ್ಲ ಶಿವಗಿರಿ ಬದಿಯಾರ್‌ನ ಕೃಷ್ಣ (35) ಎಂದು ಗುರುತಿಸಲಾಗಿದೆ. ಮಸ್ಕತ್‌ನ ಖಾಸಗಿ ಇಂಜಿನಿಯರಿಂಗ್ ಕಂಪೆನಿಯಲ್ಲಿ ಮೆಕಾನಿಕಲ್ ಇಂಜಿನಿ ಯರಿಂಗ್‌ಆಗಿ ಕೆಲಸ ಮಾಡುತ್ತಿದ್ದ ಇವರು ಕೆಲಸ ಮಾಡುತ್ತಿದ್ದಾಗ ಯಂತ್ರಕ್ಕೆ ಸಿಲುಕಿ ಬಲಕೈ ಬೆರಳುಗಳು ತುಂಡರಿಸಲ್ಪಟ್ಟಿದ್ದವು. ಕೆಲ ತಿಂಗಳ ಕಾಲ ಮಸ್ಕತ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೃಷ್ಣ ಆರು ತಿಂಗಳ ಹಿಂದೆ ಊರಿಗೆ ಬಂದಿದ್ದರು. ಕಂಪೆನಿಯ ಭಾರತದ ಬ್ರಾಂಚ್‌ನಲ್ಲಿ ಕೆಲಸ ನೀಡುವುದಾಗಿ ಕಂಪೆನಿ ಅಧಿಕಾರಿಗಳು ಭರವಸೆ ನೀಡಿದ್ದರು.
ಹಲವು ಬಾರಿ ಬೆಂಗಳೂರಿನ ಬ್ರಾಂಚ್‌ಗೆ ಅರ್ಜಿ ಸಲ್ಲಿಸಿದರೂ ಪ್ರಯೋಜನ ವಾಗಲಿಲ್ಲ. ಉದ್ಯೋಗ ಲಭಿಸದ ಬಗ್ಗೆ ಕೃಷ್ಣ ಹಲವರಲ್ಲಿ ಬೇಸರ ವ್ಯಕ್ತಪಡಿಸಿದ್ದರೆನ್ನಲಾಗಿದೆ. ಮಂಗಳವಾರ ಮಂಗಳೂರಿನಲ್ಲಿರುವ ಕಚೇರಿಗೆ ಅರ್ಜಿ ಸಲ್ಲಿಸಲು ತೆರಳಿದ್ದಅವರು ರೈಲಿನಲ್ಲಿ ಕಾಸರಗೋಡು ತಲುಪಿದ್ದು, ರೈಲ್ವೆ ನಿಲ್ದಾಣ ಸಮೀಪದ ವಸತಿ ಗೃಹದಲ್ಲಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆೆ.
ಉದ್ಯೋಗ ಲಭಿಸದೆ ಮನನೊಂದು ಈ ಕೃತ್ಯ ನಡೆಸಿರುವುದಾಗಿ ಶಂಕಿಸಲಾಗಿದೆ. ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.





