ಚುಟುಕು ಸುದ್ದಿಗಳು
ಸೋಲಾರ್ ಪ್ಯಾನೆಲ್ ಕಳವು
ಅಮಾಸೆಬೈಲು, ಜೂ.9: ಆಗುಂಬೆ ವನ್ಯ ಜೀವಿವಲಯ ಅಮಾಸೆಬೈಲು ವ್ಯಾಪ್ತಿಯ ಮಡಾಮಕ್ಕಿ ಗ್ರಾಮದ ಸೋಮೇಶ್ವರ ಅಭಯಾರಣ್ಯದ ಬಳ್ಳಿಮನೆ ಮೀಸಲು ಅರಣ್ಯದ ಹಂಜ ಹುಣ್ಸ್ಯಾಡಿಯಲ್ಲಿ ಕಳ್ಳ ಬೇಟೆ ನಿಯಂತ್ರಣ ಶಿಬಿರಕ್ಕೆ ಅಳವಡಿಸಿದ 8ಸಾವಿರ ರೂ. ವೌಲ್ಯದ ಸೋಲಾರ್ ಪ್ಯಾನಲ್ ಕಳವು ಮಾಡಲಾಗಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೂಲಿಕಾರ್ಮಿಕ ಮೃತ್ಯು
ಕಾರ್ಕಳ, ಜೂ. 9: ಕೂಲಿ ಕೆಲಸ ಮಾಡಿ ಬಸ್ ನಿಲ್ದಾಣದಲ್ಲಿ ಮಲಗುತ್ತಿದ್ದ ಕೃಷ್ಣ ಯಾನೆ ಬೀರಪ್ಪ(60) ಎಂಬವರು ಅನಾರೋಗ್ಯದಿಂದ ಜೂ. 8ರಂದು ಪಳ್ಳಿ ಗ್ರಾಪಂ ವಾಣಿಜ್ಯ ಕಟ್ಟಡದ ಎದುರು ರಸ್ತೆ ಬದಿಯಲ್ಲಿ ಮೃತಪಟ್ಟಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವತಿ ನಾಪತ್ತೆ
ಕೋಟ, ಜೂ.9: ಆವರ್ಸೆ ಗ್ರಾಮದ ಕಿರಾಡಿ ದೊಡ್ಡಾಡಿಯ ಸುಬ್ರಾಯ ನಾಯ್ಕಾ ರ ಮಗಳು ವಿಮಲಾ(22) ಜೂ. 8ರಂದು ಸ್ತ್ರೀ ಶಕ್ತಿ ಸಂಘದಲ್ಲಿ ಸಾಲ ಪಡೆಯಲು ಮಂದಾರ್ತಿಗೆ ಹೋಗುವುದಾಗಿ ಹೇಳಿ ಮನೆಯಿಂದ ಹೋದವರು ಈವರೆಗೆ ವಾಪಸು ಬಾರದೆ ನಾಪತ್ತೆಯಾಗಿದ್ದಾರೆ.
ನದಿಗೆ ಬಿದ್ದು ಮೀನುಗಾರ ಮೃತ್ಯು
ಗಂಗೊಳ್ಳಿ, ಜೂ.9: ಪಂಚಗಂಗಾವಳಿ ನದಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಮೀನುಗಾರರೊಬ್ಬರು ದೋಣಿಯಿಂದ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿ ರುವ ಬಗ್ಗೆ ವರದಿಯಾಗಿದೆ.
ಮೃತರನ್ನು ಗಂಗೊಳ್ಳಿ ಗುಡ್ಡೆಕೇರಿಯ ರಾಜೇಶ್ ಖಾರ್ವಿ ಎಂದು ಗುರುತಿಸ ಲಾಗಿದೆ. ಜೂ.7ರಂದು ರಾಜೇಶ್ ಖಾರ್ವಿ ನದಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ದೋಣಿಯಿಂದ ಆಕಸ್ಮಿಕವಾಗಿ ನೀರಿಗೆ ಬಿದ್ದು ನಾಪತ್ತೆ ಯಾಗಿದ್ದರು. ಜೂ.8ರಂದು ಬೆಳಗ್ಗೆ 10:30ಕ್ಕೆ ಇವರ ಮೃತದೇಹ ಬಚ್ಚು ಫೀರ್ ದರ್ಗಾದ ಬಳಿ ಪಂಚ ಗಂಗಾವಳಿ ನದಿಯಲ್ಲಿ ಪತ್ತೆಯಾಗಿದೆ.
ವೇಶ್ಯಾವಾಟಿಕೆನಿರತ ನಾಲ್ವರ ಸೆರೆ
ಮಂಗಳೂರು, ಜೂ 9: ನಗರದ ಪಾಂಡೇಶ್ವರ ಲಾಡ್ಜ್‌ವೊಂದರಲ್ಲಿ ನಡೆ ಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಗೆ ಪಾಂಡೇ ಶ್ವರ ಪೊಲೀಸರು ದಾಳಿ ನಡೆಸಿದ್ದಾರೆ.
ವೇಶ್ಯಾವಾಟಿಕೆಯಲ್ಲಿ ನಿರತನಾಗಿದ್ದ ಕೇರಳದ ಕ್ಯಾಲಿಕಟ್ ನಿವಾಸಿ ಶಿವಾನಂದ (45) ಮತ್ತು ಪುತ್ತೂರಿನ ಮಾಧವ (31) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳೂರು: ನಗರದ ಮೈದಾನ ರಸ್ತೆಯಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಗೆ ಪೊಲೀಸರು ದಾಳಿ ನಡೆಸಿದ್ದಾರೆ.
ಹೋಟೆಲ್‌ನಲ್ಲಿ ಯುವತಿಯೊಂದಿಗಿದ್ದ ಕುಂದಾಪುರ ತ್ರಾಸಿಯ ನಾಗಪ್ಪಯ್ಯ(40) ಮತ್ತು ವೇಶ್ಯಾ ವಾಟಿ ಕೆಗೆ ಸಹಕರಿಸಿದ ಲಕ್ಷ್ಮೀಕಾಂತ್ ಎಂಬಿಬ್ಬ ರನ್ನು ಬಂಧಿಸಲಾಗಿದೆ.
ಮರಳು ಸಾಗಾಟ: ಲಾರಿ ವಶ
ಮಂಗಳೂರು, ಜೂ. 9: ಗುರುಪುರ ದಿಂದ ಕೈಕಂಬದ ಕಡೆಗೆ ಹೋಗುತ್ತಿದ್ದ ನಕಲಿ ಪರ್ಮಿಟ್ ಹೊಂದಿದ್ದ ಮರಳು ಸಾಗಾಟದ ಲಾರಿಯನ್ನು ಭೂ ವಿಜ್ಞಾನ ಇಲಾಖಾಧಿಕಾರಿ ಗಿರೀಶ್ ಮೋಹನ್ ಸೋಮವಾರ ರಾತ್ರಿ ಕೈಕಂಬದಲ್ಲಿ ವಶಪಡಿಸಿಕೊಂಡಿದ್ದಾರೆ.







