ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ: ಶಿಕ್ಷೆಯ ಪ್ರಮಾಣ ಇಂದು ಘೋಷಣೆ

ಹೊಸದಿಲ್ಲಿ, ಜೂ.9: ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡದ 24 ಮಂದಿ ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣ ಘೋಷಣೆಯನ್ನು ವಿಶೇಷ ನ್ಯಾಯಾಲಯವೊಂದು ಜೂ.10ಕ್ಕೆ ಮುಂದೂಡಿದೆ.
2002ರ ಫೆ.28ರಂದು ನಡೆದಿದ್ದ ಮಾಜಿ ಸಂಸದ ಎಹ್ಸಾನ್ ಜಾಫ್ರಿ ಸಹಿತ 69 ಮಂದಿಯ ಬರ್ಬರ ಹತ್ಯೆ ಪ್ರಕರಣದಲ್ಲಿ 24 ಮಂದಿಯನ್ನು ದೋಷಿಗಳೆಂದು ಅದು ಘೋಷಿಸಿತ್ತು. 24 ಮಂದಿ ಅಪರಾಧಿಗಳಲ್ಲಿ 11 ಮಂದಿ ಕೊಲೆ ಹಾಗೂ ಉಳಿದ 13 ಮಂದಿ ಕಿಚ್ಚಿಡುವಿಕೆ, ದಂಗೆ ಹಾಗೂ ಕಾನೂನು ಬಾಹಿರವಾಗಿ ಒಟ್ಟು ಸೇರುವಿಕೆಯ ದೋಷಿಗಳೆಂದು ತೀರ್ಪು ನೀಡಿದ್ದ ನ್ಯಾಯಾಲಯ ಓರ್ವ ಮಾಜಿ ಪೊಲೀಸ್ ಅಧಿಕಾರಿ ಹಾಗೂ ಇನ್ನೊಬ್ಬ ಸ್ಥಳೀಯ ಬಿಜೆಪಿ ನಾಯಕನ ಸಹಿತ 36 ಮಂದಿಯನ್ನು ಸಾಕ್ಷದ ಕೊರತೆಯಿಂದಾಗಿ ಖುಲಾಸೆಗೊಳಿಸಿತ್ತು.
Next Story





