ನಾಳೆಯ ಕಾರ್ಯಕ್ರಮ
ವಿ4 ನ್ಯೂಸ್ ಚಾನೆಲ್ ದಶಮಾನೋತ್ಸವ
ಮಂಗಳೂರು, ಜೂ.9: ವಿ4 ನ್ಯೂಸ್ ಚಾನೆಲ್‌ನ ದಶಮಾ ನೋತ್ಸವ ಕಾರ್ಯಕ್ರಮವನ್ನು ಜೂ.11ರಂದು ನಗರದ ಪುರಭವನದಲ್ಲಿ ಏರ್ಪಡಿಸಲಾಗಿದೆ.
ಶೈಕ್ಷಣಿಕ ಸಮ್ಮೇಳನ
ಮಂಗಳೂರು, ಜೂ.9: ನಗರದ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಹಾಗೂ ಪ.ಪೂ. ಕಾಲೇಜು ಪ್ರಾಂಶುಪಾಲರ ಸಂಘದ ಸಹಯೋಗ ದೊಂದಿಗೆ ಶೈಕ್ಷಣಿಕ ಸಮ್ಮೇಳನ, ಎಸ್ಸೆಸೆಲ್ಸಿ ಸಾಧಕರಿಗೆ ಹಾಗೂ ಶಾಲಾ ಮುಖ್ಯಸ್ಥರಿಗೆ ಗೌರವಾರ್ಪಣೆ , ನಿವೃತ್ತ ಅಧ್ಯಾಪಕರಿಗೆ ಸನ್ಮಾನ ಮತ್ತು ಸ್ಕಾಲರ್‌ಶಿಪ್ ವಿತರಣೆ ಜೂ.11ರಂದು ಮಿಲಾಗ್ರಿಸ್ ಕಾಲೇಜಿನಲ್ಲಿ ಏರ್ಪಡಿಸಲಾಗಿದೆ.
ಅಂದು ಬೆಳಗ್ಗೆ 10ಕ್ಕೆ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಉದ್ಘಾಟಿಸುವರು. ಮಂಗಳೂರು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ವಾಲ್ಟರ್ ಡಿಮೆಲ್ಲೊ ಅಧ್ಯಕ್ಷತೆ ವಹಿಸುವರು. ಶಿಕ್ಷಣ ತಜ್ಞ ಡಾ.ಸುಕುಮಾರ ಗೌಡ ದಿಕ್ಸೂಚಿ ಭಾಷಣ ಮಾಡುವರು ಎಂದು ಪ್ರಕಟನೆೆ ತಿಳಿಸಿದೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಾರ್ಯಕ್ರಮದ ಮುಖ್ಯಸ್ಥರಾದ ಮೈಮ್ ರಾಮದಾಸ್ ಅವರು, ಬೆಳಗ್ಗೆ 9ರಿಂದ ರಾತ್ರಿ 9ರ ತನಕ ವಿವಿಧ ಕಾರ್ಯಕ್ರಮಗಳು ಜರಗಲಿವೆ. ಉದ್ಘಾಟನೆ ಬಳಿಕ ಪೂರ್ವಾಹ್ನ 10ಕ್ಕೆ ‘ಬೇಕು ನಮಗೊಂದು ಜಲ ನೀತಿ’, 11 ಕ್ಕೆ ‘ಬಲ್ಲಿರೇನಯ್ಯ’ ತೆಂಕು ಬಡಗು ದ್ವಂದ್ವ ಭಾಗವತಿಕೆ, ಮಧ್ಯಾಹ್ನ 12:30ರಿಂದ ಜಾರು ಆಟ, ಅಪರಾಹ್ನ 2ರಿಂದ ಸುದ್ದಿಗೊಂದು ಗುದ್ದು, 3:30ರಿಂದ ಜನಮನ ಜರಗಲಿದೆ. ಸಂಜೆ 5ಕ್ಕೆ ಸಿನಿಮೋತ್ಸವ ಕಾರ್ಯಕ್ರಮ ಜರಗಲಿದೆ. ಈ ಸಂದರ್ಭ ನಟಿ ಜಯಮಾಲ ಹಾಗೂ ನಿರ್ದೇಶಕ ರಿಚರ್ಡ್ ಕ್ಯಾಸ್ತಲಿನೊರಿಗೆ ‘ಜೀವಮಾನ ಸಾಧನೆ ಪ್ರಶಸ್ತಿ’ ಮತ್ತು ಮೊದಲ ತುಳು ಚಿತ್ರ ನಿರ್ಮಾಪಕ ಟಿ.ಎ.ಶ್ರೀನಿವಾಸ್, ಹಿರಿಯ ರಂಗ ನಟ ವಿ.ಜಿ.ಪಾಲ್‌ರಿಗೆ ವಿಶೇಷ ಗೌರವ ಪ್ರಶಸ್ತಿ ಪ್ರದಾನಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ವಿ4 ನ್ಯೂಸ್ ನಿರ್ದೇಶಕ ಲಕ್ಷ್ಮಣ್ ಕುಂದರ್, ಗೌರವ ಸಲಹೆಗಾರ ಯತೀಶ್ ಬೈಕಂಪಾಡಿ, ಸುದ್ದಿ ಸಂಪಾದಕ ಎ.ಆರ್.ಲೋಹಾನಿ, ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಉಪಸ್ಥಿತರಿದ್ದರು.







