Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ‘ಸುಲ್ತಾನ್: ದ ಗೇಮ್’ ಮೊಬೈಲ್ ಗೇಮ್...

‘ಸುಲ್ತಾನ್: ದ ಗೇಮ್’ ಮೊಬೈಲ್ ಗೇಮ್ ಬಿಡುಗಡೆ

ವಾರ್ತಾಭಾರತಿವಾರ್ತಾಭಾರತಿ10 Jun 2016 8:01 PM IST
share
‘ಸುಲ್ತಾನ್: ದ ಗೇಮ್’ ಮೊಬೈಲ್ ಗೇಮ್ ಬಿಡುಗಡೆ

ಉಡುಪಿ, ಜೂ.10: ಮೊಬೈಲ್ ಗೇಮ್ಸ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದಿರುವ ಉಡುಪಿಯ ರೋಬೋಸಾಫ್ಟ್ ಟೆಕ್ನಾಲಜೀಸ್ ಪ್ರೈವೇಟ್ ಲಿ.ನ ಸಹಸಂಸ್ಥೆಯಾಗಿರುವ 99 ಗೇಮ್ಸ್ ಆನ್‌ಲೈನ್ ಪ್ರೈವೇಟ್ ಲಿ. ಶುಕ್ರವಾರ ಇನ್ನೊಂದು ಹೊಸ ಮೊಬೈಲ್ ಗೇಮ್‌ನ್ನು ಮಾರುಕಟ್ಟೆ ಬಿಡುಗಡೆಗೊಳಿಸಿದೆ.

ಈಗಾಗಲೇ ಅಮೀರ್‌ಖಾನ್ ನಾಯಕನಾಗಿ ನಟಿಸಿದ ‘ಧೂಮ್ 3’ ಹಾಗೂ ಶಾರುಕ್‌ಖಾನ್ ನಾಯಕನಾಗಿ ನಟಿಸಿರುವ ‘ಫ್ಯಾನ್’ಗಳ ಮೊಬೈಲ್ ಗೇಮ್‌ಗಳನ್ನು ಬಿಡುಗಡೆಗೊಳಿಸಿ ಜನಪ್ರಿಯತೆ ಪಡೆದಿರುವ 99 ಗೇಮ್ಸ್ ತಂಡ ಇಂದು ಮತ್ತೊಬ್ಬ ಸೂಪರ್‌ಸ್ಟಾರ್ ಸಲ್ಮಾನ್‌ಖಾನ್ ನಾಯಕನಾಗಿ ನಟಿಸಿ, ಮುಂದಿನ ತಿಂಗಳು ಈದ್ ದಿನದಂದು ಬಿಡುಗಡೆಗೊಳ್ಳಲಿರುವ ‘ಸುಲ್ತಾನ್’ ಚಿತ್ರವನ್ನಾಧರಿಸಿ ‘ಸುಲ್ತಾನ್:ದ ಗೇಮ್’ ಎಂಬ ಹೊಸ ಮೊಬೈಲ್ ಗೇಮ್ಸ್‌ನ್ನು ಬಿಡುಗಡೆಗೊಳಿಸಿದೆ.

ಸಲ್ಮಾನ್‌ಖಾನ್ ಮತ್ತು ಅನುಷ್ಕಾ ಶರ್ಮ ನಾಯಕ-ನಾಯಕಿಯರಾಗಿ ನಟಿಸಿರುವ ಚಿತ್ರದಲ್ಲಿ ಕುಸ್ತಿಪಟು ಹಾಗೂ ಬಾಕ್ಸರ್ ಆಗಿ ಕಾಣಿಸಿಕೊಂಡಿರುವ ಸಲ್ಮಾನ್ ಖಾನ್ ಅವರು ಹೀರೊ ಆಗಿ ಈ ಗೇಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ನಿರ್ಮಾಪಕರಾದ ಯಶ್‌ರಾಜ್ ಪಿಲ್ಮ್‌ನ ಸಹಭಾಗಿತ್ವದೊಂದಿಗೆ ಅವರ ಸುಲ್ತಾನ್ ಚಿತ್ರದ ವಸ್ತುವನ್ನು ಮೂಲವಾಗಿರಿಸಿಕೊಂಡು ‘ಸುಲ್ತಾನ್: ದಿ ಗೇಮ್’ನ್ನು ರೂಪಿಸಲಾಗಿದೆ ಎಂದು 99 ಗೇಮ್ಸ್‌ನ ಸಿಇಓ ಹಾಗೂ ರೋಬೋಸಾಪ್ಟ್‌ನ ಆಡಳಿತ ನಿರ್ದೇಶಕರಾಗಿರುವ ರೋಹಿತ್ ಭಟ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

‘ಸುಲ್ತಾನ್: ದಿ ಗೇಮ್’ ಇಂದಿನಿಂದ ಗೂಗಲ್ ಫ್ಲೇ ಸ್ಟೋರ್‌ನಲ್ಲಿ ಉಚಿತ ಡೌನ್‌ಲೋಡ್‌ಗೆ ಲಭ್ಯವಿದೆ. ಕೆಲವೇ ದಿನಗಳಲ್ಲಿ ಈ ಗೇಮ್ ಆ್ಯಪಲ್ ಆ್ಯಪ್‌ಸ್ಟೋರ್, 9 ಆ್ಯಪ್‌ಸ್ಟೋರ್ ಮತ್ತು ಏರ್‌ಟೆಲ್ ಹಾಗೂ ಮೊಡಾಪೋನ್ ಮೊದಲಾದ ಟೆಲಿಕಾಂ ಸೇವಾದಾರರ ಮೂಲಕವೂ ಉಚಿತವಾಗಿ ಲಭ್ಯವಾಗಲಿದೆ ಎಂದವರು ತಿಳಿಸಿದರು.

ಇಂದು ಬಿಡುಗಡೆಗೊಂಡಿರುವ ಗೇಮ್ ಶ್ರೇಷ್ಠ ಮಟ್ಟದ ತಂತ್ರಜ್ಞಾನವನ್ನು ಹೊಂದಿದ್ದು, ಮೊಬೈಲ್ ಆಟದ ಎಲ್ಲಾ ರೋಚಕತೆಯನ್ನು ನೀಡಲಿದೆ. 60 ಹಂತದಲ್ಲಿ (ಲೆವೆಲ್) ಈ ಆಟ ಸಾಗಲಿದೆ. ಸಲ್ಮಾನ್ ಬಾಕ್ಸರ್ ಆಗಿ 7ಮಂದಿ ವಿದೇಶಿಯರು ಸೇರಿದಂತೆ ಅನೇಕ ಬಾಕ್ಸರ್‌ಗಳೊಂದಿಗೆ ಸೆಣಸಿ ಮುಂದಿನ ಹಂತಕ್ಕೆ ಹೋಗುತ್ತಾರೆ. ಪ್ರತಿ ಹಂತದಲ್ಲೂ ವೈವಿಧ್ಯತೆ ಇದ್ದು, ಜಾಣ್ಮೆ, ಯುಕ್ತಿಯನ್ನು ಅದು ಪರೀಕ್ಷಿಸುತ್ತದೆ ಎಂದು ತಂಡದ ಗುಣಮಟ್ಟದ ನಿಯಂತ್ರಣಾಧಿಕಾರಿ ಮಧುರ್ ನಾಯಕ್ ತಿಳಿಸಿದರು.

99 ಗೇಮ್ಸ್ 50 ಮಂದಿ ತಂತ್ರಜ್ಞರು, ಗ್ರಾಫಿಕ್‌ತಜ್ಞರನ್ನು ಒಳಗೊಂಡಿದ್ದು, ಇವರಲ್ಲಿ ಎಂಟು ಮಂದಿಯ ತಂಡ ಸುಮಾರು ಆರು ತಿಂಗಳುಗಳ ಕಾಲ ಶ್ರಮಿಸಿ ‘ಸುಲ್ತಾನ್: ದಿ ಗೇಮ್’ನ್ನು ಅಭಿವೃದ್ಧಿ ಪಡಿಸಿದೆ. ಇದರ ತಯಾರಿಗೆ ಒಟ್ಟು ಸುಮಾರು 75 ಲಕ್ಷ ರೂ. ವೆಚ್ಚವಾಗಿದೆ ಎಂದವರು ಹೇಳಿದರು.

ಇಂದು ಮೊಬೈಲ್ ಗೇಮ್ಸ್‌ಗಳು ಅತ್ಯಂತ ಜನಪ್ರಿಯವಾಗಿದ್ದು, ಈಗ ಲಭ್ಯವಿರುವ ಹೆಚ್ಚಿನ ಗೇಮ್‌ಗಳು ವಿದೇಶಿ ಮೂಲದಿಂದ ಬಂದಿರುವವು. 99 ಗೇಮ್ಸ್ ಭಾರತೀಯ ಮೂಲದ ಕತೆಗಳನ್ನು ಮೊಬೈಲ್ ಗೇಮ್ ಮೂಲಕ ಜನರಿಗೆ ಪರಿಚಯಿಸುವ ಉದ್ದೇಶದಿಂದ ಕೆಲಸ ಮಾಡುತ್ತಿದೆ. ನಾವು 2013ರಲ್ಲಿ ಅಭಿವೃದ್ಧಿ ಪಡಿಸಿ ಬಿಡುಗಡೆಗೊಳಿಸಿದ ಅಮೀರ್‌ಖಾನ್‌ನ ‘ಧೂಮ್ 3’ ಗೇಮ್‌ನ್ನು ವಿಶ್ವದಾದ್ಯಂತ ಎರಡು ಕೋಟಿಗೂ ಅಧಿಕ ಮಂದಿ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಇದು ದೇಶದಲ್ಲೇ ಅತ್ಯಧಿಕ ಡೌನ್‌ಲೋಡ್ ಆದ ಗೇಮ್ ಎನಿಸಿಕೊಂಡಿದೆ ಎಂದು ರೋಹಿತ್ ಭಟ್ ತಿಳಿಸಿದರು.

ನಮ್ಮ ಇನ್ನೊಂದು ಅತ್ಯಂತ ಜನಪ್ರಿಯ ಗೇಮ್ ‘ಸ್ಟಾರ್ ಚೆಫ್’. 2013ರಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಂಡ ಇದನ್ನು ಈವರೆಗೆ 11 ಮಿಲಿಯ ಮಂದಿ (1.1ಕೋಟಿ) ತಮ್ಮ ಮೊಬೈಲ್‌ನಲ್ಲಿ ಆಡಿದ್ದಾರೆ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲೂ ಜನಪ್ರಿಯಗೊಂಡಿದೆ ಎಂದರು.

2009ರಲ್ಲಿ ಪ್ರಾರಂಭಗೊಂಡ 99 ಗೇಮ್ಸ್ ಈವರೆಗೆ 17 ಮೊಬೈಲ್ ಗೇಮ್ ಟೈಟಲ್‌ಗಳನ್ನು ಬಿಡುಗಡೆಗೊಳಿಸಿದ್ದು, ಪ್ರಪಂಚದಾದ್ಯಂತ 3.1ಕೋಟಿ ಡೌನ್‌ಲೋಡ್‌ಗಳಾಗಿವೆ. ಈ ಮೂಲಕ ಉಡುಪಿ ಮೂಲದ 99 ಗೇಮ್ಸ್ ಜಾಗತಿಕ ಮಾರುಕಟ್ಟೆಯಲ್ಲಿ ಮೊಬೈಲ್ ಗೇಮ್ಸ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ ಎಂದು ರೋಹಿತ್ ಭಟ್ ಹೇಳಿದರು.

2008ರಲ್ಲಿ 99 ಗೇಮ್ಸ್ ‘ಚೆಸ್ ಗೇಮ್’ ಮೂಲಕ ತನ್ನ ಮೊದಲ ಗೇಮ್‌ನ್ನು ಸಿದ್ಧಪಡಿಸಿತು. ಅನಂತರ ಅದನ್ನು ಮಲ್ಟಿಪ್ಲೇಯರ್ ಗೇಮ್ ಆಗಿ ಮಾರ್ಪಾಡು ಮಾಡಲಾಯಿತು. ತಂಡ ಸಿದ್ಧಪಡಿಸಿದ ನಂತರದ ಗೇಮ್ ವರ್ಡ್ಸ್‌ವರ್ತ್ ಗೇಮ್ ಇದು ಸಹ ಅತ್ಯಂತ ಪ್ರಸಿದ್ಧಿ ಪಡೆಯಿತು ಎಂದರು. ಚಲನಚಿತ್ರವನ್ನು ಹೊರತು ಪಡಿಸಿ ನಾವು ಭಾರತೀಯ ಮೂಲದ ಕತೆಯ ಆಧಾರದಲ್ಲಿ ಇತರ ಗೇಮ್‌ನ್ನು ರೂಪಿಸುವ ಉದ್ದೇಶವಿದೆ. ಶೀಘ್ರವೇ ಇನ್ನಷ್ಟು ಹೊಸ ಗೇಮ್‌ಗಳನ್ನು ಬಿಡುಗಡೆಗೊಳಿಸುತ್ತೇವೆ ಎಂದು ರೋಹಿತ್ ಭಟ್ ತಿಳಿಸಿದರು.

99 ಗೇಮ್ಸ್‌ನ ಅನಿತಾ ಅಂದ್ರಾದೆ, ಮೋಹನದಾಸ್ ಕಾಮತ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಯಶ್‌ರಾಜ್‌ಫಿಲ್ಮ್ ಜತೆ ಒಪ್ಪಂದ

ಬಾಲಿವುಡ್‌ನಲ್ಲಿ ಕಳೆದ 40 ವರ್ಷಗಳಿಂದ ವೌಲ್ಯಯುತ ಚಿತ್ರವನ್ನು ನಿರ್ಮಿಸುತ್ತಿರುವ ಯಶ್‌ರಾಜ್ ಫಿಲ್ಮ್‌ನೊಂದಿಗೆ 99 ಗೇಮ್ಸ್ ಈ ವರ್ಷ ಒಪ್ಪಂದ ಮಾಡಿಕೊಂಡಿದ್ದು, ಇದರಂತೆ ಈ ಸಂಸ್ಥೆ ನಿರ್ಮಾಣದ ಚಿತ್ರಗಳಿಗೆ ಗೇಮ್‌ಗಳನ್ನು ನಮ್ಮ ಸಂಸ್ಥೆ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆಗೊಳಿಸುತ್ತದೆ. ಈಗಾಗಲೇ ‘ಫ್ಯಾನ್’ ಗೇಮ್ ಕೆಲ ತಿಂಗಳ ಹಿಂದೆ ಬಿಡುಗಡೆಗೊಂಡಿದ್ದು 4 ಮಿಲಿಯ ಡೌನ್‌ಲೋಡ್‌ಗಳಾಗಿವೆ.ಇಂದು ಬಿಡುಗಡೆಗೊಂಡಿರುವ ಸುಲ್ತಾನ್ 10 ಮಿಲಿಯ ಮೊಬೈಲ್‌ಗಳಲ್ಲಿ ಡೌನ್‌ಲೋಡ್‌ನ ನಿರೀಕ್ಷೆ ಇದೆ.

ಯಶ್‌ರಾಜ್ ಜೊತೆ ಸೇರಿ 2013ರಲ್ಲಿ ತಯಾರಿಸಿದ ‘ಧೂಮ್ 3’ ಗೇಮ್ ಪ್ರಸಿದ್ಧಿ ಪಡೆದಿರುವುದೇ ನಮಗೆ ಸ್ಪೂರ್ತಿಯಾಗಿದೆ. ಸುಲ್ತಾನ್‌ನ್ನು 15ರಿಂದ 25 ವರ್ಷದೊಳಗಿನ ವಯೋಮಾನದವರನ್ನು ಗುರಿ ಇರಿಸಿ ತಯಾರಿಸಿದ್ದೇವೆ ಎಂದು ರೋಹಿತ್ ಭಟ್ ನುಡಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X