ಪೆರುವಾಯಿ ಚರ್ಚ್‌ನ ನೂತನ ಧರ್ಮಗುರುಗಳಿಂದ ಅಧಿಕಾರ ಸ್ವೀಕಾರ
.jpg)
ಮಂಗಳೂರು, ಜೂ 10: ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮದ ಫಾತಿಮಾ ಮಾತೆಯ ಚರ್ಚ್‌ನ ನೂತನ ಧರ್ಮಗುರುಗಳಾಗಿ ವಂ. ಫಾ.ವಿನೋದ್ ಲೋಬೊ ಅಧಿಕಾರ ಸ್ವೀಕರಿಸಿದ್ದಾರೆ.
ನೂತನ ಧರ್ಮಗುರುಗಳಾದ ಫಾ.ವಿನೋದ್ ಲೋಬೊರನ್ನು ಚರ್ಚ್‌ಗೆ ಊರ ಭಕ್ತರು ಮತ್ತು ಚರ್ಚ್ ಆಡಳಿತದ ಪರವಾಗಿ ಗೌರವಪೂರ್ವಕವಾಗಿ ಸ್ವಾಗತಿಸಲಾಯಿತು. ಈ ವೇಳೆ ಭಕ್ತರು ಧರ್ಮಗುರುಗಳಿಗೆ ಹೂವಿನ ಹಾರ ಹಾಕಿ ಬರಮಾಡಿಕೊಂಡರು. ಈ ಬಳಿಕ ಪ್ರಾರ್ಥನಾ ವಿಧಿ ನೆರವೇರಿಸಿ ಅಧಿಕೃತವಾಗಿ ಅಧಿಕಾರವನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಫಾ.ವಿನೋದ್ ಲೋಬೋ, ಫಾತಿಮಾ ಮಾತೆಯ ನೂತನ ಧರ್ಮಗುರುವಾಗಿ ಅಧಿಕಾರ ಸ್ವೀಕರಿಸಿದ್ದು ಅತೀವ ಸಂತೋಷ ತಂದಿದೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು. ಮುಂದೆ ಈ ದೇವಾಲಯದಲ್ಲಿ ಕಾರ್ಯನಿರ್ವಹಿಸಲು ದೇವರ ಅನುಗ್ರಹ ಬೇಡುತ್ತೇನೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಚರ್ಚ್‌ನ ಧರ್ಮಗುರುಗಳು, ಸಾವಿರಾರು ಭಕ್ತರು, ಇತರೆ ಚರ್ಚ್‌ಗಳ ಅನುಯಾಯಿಗಳು ಪಾಲ್ಗೊಂಡಿದ್ದರು. ಫಾ.ಅಂಡ್ರೋ ಡಿಕೋಸ್ತಾ, ಫಾ.ಆಲ್ಫ್ರೆಡ್ ಪಿಂಟೋ, ಮಾರ್ಕ್ ಕ್ಯಾಸ್ಟಲಿನೋ, ಚರ್ಚಿನ ಉಪಾಧ್ಯಕ್ಷ ವಿಕ್ಟರ್, ಕಾರ್ಯದರ್ಶಿ ಪ್ರವೀಣ್ ಕುಟಿನ್ಹೋ ಉಪಸ್ಥಿತರಿದ್ದರು.





