Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಭಾರತದ ಜನಸಂಖ್ಯಾ ಬೆಳವಣಿಗೆ ಕುಂಠಿತವಾಗಲು...

ಭಾರತದ ಜನಸಂಖ್ಯಾ ಬೆಳವಣಿಗೆ ಕುಂಠಿತವಾಗಲು ಹೆಚ್ಚು ಶಿಶುಗಳು ಬದುಕುಳಿಯಬೇಕು

ಪ್ರಾಚಿ ಸಾಳ್ವೆಪ್ರಾಚಿ ಸಾಳ್ವೆ10 Jun 2016 8:54 PM IST
share
ಭಾರತದ ಜನಸಂಖ್ಯಾ ಬೆಳವಣಿಗೆ ಕುಂಠಿತವಾಗಲು ಹೆಚ್ಚು ಶಿಶುಗಳು ಬದುಕುಳಿಯಬೇಕು

2011ರಲ್ಲಿ 1.2 ಬಿಲಿಯನ್ ಇದ್ದ ಭಾರತದ ಜನಸಂಖ್ಯೆಯು 2050ರ ವೇಳೆಗೆ 1.6 ಬಿಲಿಯನ್ ತಲುಪುವ ಮೂಲಕ ಭಾರತವು ಜಗತ್ತಿನ ಅತ್ಯಂತ ಹೆಚ್ಚು ಜನಸಂಖ್ಯೆಯುಳ್ಳ ದೇಶವಾಗಲಿದೆ. ಭಾರತವು ತನ್ನ ಜನಸಂಖ್ಯಾ ಸೊಓಂೀಟವನ್ನು ತಡೆಯಬೇಕಾದರೆ ಹೆಚ್ಚು ಮಕ್ಕಳು ಬದುಕುಳಿಯಬೇಕಾದುದು ಅತೀಮುಖ್ಯ ಎಂದು ಇಂಡಿಯಾಸ್ಪೆಂಡ್ ನಡೆಸಿರುವ ಸರಕಾರಿ ಅಂಕಿಅಂಶಗಳ ವಿಶ್ಲೇಷಣೆಯು ಸೂಚಿಸುತ್ತದೆ. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ ಹೆಚ್ಚು ಮಕ್ಕಳು ಬದುಕುಳಿದಾಗ ಮಹಿಳೆಯರು ಕಡಿಮೆ ಮಕ್ಕಳನ್ನು ಹೆರುತ್ತಾರೆ, ಆಗ ಹುಟ್ಟಿರುವ ಮಕ್ಕಳು ಬದುಕುಳಿಯುವ ಸಾಧ್ಯತೆ ಹೆಚ್ಚಾಗುತ್ತದೆ. ಆದರೆ, ಈ ಪರಸ್ಪರದ ಸಂಬಂಧ ಅನ್ವಯಿಸದ ಕೆಲವು ರಾಜ್ಯಗಳಲ್ಲಿ ಮಹಿಳೆಯರ ಸಾಕ್ಷರತಾ ಮಟ್ಟ ಮತ್ತು ಕಡಿಮೆ ಮಕ್ಕಳನ್ನು ಹೆರುವ ಮತ್ತು ಹೆಚ್ಚು ಮಕ್ಕಳು ಬದುಕುಳಿಯುವ ಮಧ್ಯೆ ಸಂಬಂಧ ಇರುವುದು ಕಂಡುಬರುತ್ತದೆ.

1971ರಿಂದ 2013ರ ತನಕದ 42 ವರ್ಷಗಳಲ್ಲಿ ಭಾರತದ ಗರ್ಭಧಾರಣೆಯ ದರವು ಶೇಕಡಾ 55ರಷ್ಟು ಕಡಿಮೆಯಾಗಿದೆ-ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಕುಟುಂಬ ಮತ್ತು ಆರೋಗ್ಯ ಅಂಕಿಅಂಶ 2015ರ ಪ್ರಕಾರ, ಒಂದು ಮಹಿಳೆಯು ತನ್ನ ಮಕ್ಕಳನ್ನು ಹೆರುವ ವಯಸ್ಸಿನಲ್ಲಿ ಹೆರುವ ಮಕ್ಕಳ ಸರಾಸರಿ ಸಂಖ್ಯೆಯು 1971ರಲ್ಲಿ 5.2 ಆಗಿದ್ದರೆ 2013ರ ಹೊತ್ತಿಗೆ ಅದು 2.3ಕ್ಕೆ ಕುಸಿದಿತ್ತು. ಈ ಕುಸಿತಕ್ಕೆ ಭಾರತದ ಕಡಿಮೆಯಾಗುತ್ತಿರುವ ಶಿಶು ಮರಣ ಪ್ರಮಾಣವೂ ಕಾರಣವಾಗಿದೆ. ಒಂದು ಸಾವಿರ ಜನನದಲ್ಲಿ ಮೊದಲ ಹುಟ್ಟುಹಬ್ಬಕ್ಕೂ ಮುನ್ನ ಸಾವನ್ನಪ್ಪುವ ಮಕ್ಕಳ ಸಂಖ್ಯೆ, 1971ರಲ್ಲಿ 129 ಇದ್ದದ್ದು 2013ರಲ್ಲಿ 40ಕ್ಕೆ ತಲುಪಿದೆ. 2000 ಇಸವಿಯ ರಾಷ್ಟ್ರೀಯ ಜನಸಂಖ್ಯಾ ನೀತಿಯು 2010ರ ವೇಳೆಗೆ ಗರ್ಭಧಾರಣೆ ದರವನ್ನು 2.1ಕ್ಕೆ ಇಳಿಸುವ ಗುರಿಯನ್ನು ಹೊಂದಿದೆ. ಈ ಗುರಿಯನ್ನು ಸಾಸಲು ಸಾಧ್ಯವಾಗದಿದ್ದರೂ ಕುಸಿಯುತ್ತಿರುವ ಶಿಶು ಮರಣ ಪ್ರಮಾಣ ಭಾರತದಲ್ಲಿ ಗರ್ಭಧಾರಣೆ ದರ ಕುಸಿಯಲು ಕಾರಣವಾಗಿದೆ. ಕಡಿಮೆ ಗರ್ಭಧಾರಣೆ ದರ, ಕುಟುಂಬಗಳು ಪ್ರತೀ ಮಗುವಿನ ಮೇಲೂ ಹೆಚ್ಚಿನ ಕಾಳಜಿವಹಿಸಲು ಅವಕಾಶ ನೀಡುವುದರಿಂದ ಮರಣ ಪ್ರಮಾಣವು ಮತ್ತಷ್ಟು ಕಡಿಮೆಯಾಗಲು ಕಾರಣವಾಗುತ್ತದೆ ಎಂದು 2011ರ ಹಾರ್ವರ್ಡ್ ವಿಶ್ವವಿದ್ಯಾನಿಲಯ ನಡೆಸಿದ ಅಧ್ಯಯನ ತಿಳಿಸುತ್ತದೆ. ಸರಕಾರಿ ಅಂಕಿಅಶಂಗಳ ವಿಶ್ಲೇಷಣೆ ನಡೆಸಿದಾಗ ಹೆಚ್ಚಿನ ಗರ್ಭಧಾರಣಾ ದರವನ್ನು ಹೊಂದಿರುವ ರಾಜ್ಯಗಳಲ್ಲಿ ಮಕ್ಕಳ ಮರಣ ಪ್ರಮಾಣವೂ ಅಕವಾಗಿರುವುದು ಕಂಡುಬರುತ್ತದೆ.

ಭಾರತದ ರಾಷ್ಟ್ರೀಯ ಸರಾಸರಿ ಗರ್ಭಧಾರಣಾ ದರ 2.3ನ್ನು ದಾಟಿದೆ ಬಿಹಾರವು 3.4 ಗರ್ಭಧಾರಣಾ ದರವನ್ನು ಹೊಂದಿ ದೇಶದಲ್ಲೇ ಅಗ್ರಸ್ಥಾನಿಯಾಗಿದೆ. ಭಾರತದ ಅತ್ಯಂತ ಕಡಿಮೆ ತಲಾವಾರು ಆದಾಯ ಹೊಂದಿರುವ ರಾಜ್ಯದಲ್ಲಿ ಶಿಶು ಮರಣ ಪ್ರಮಾಣವು 42 ಆಗಿದ್ದು ಇದು ರಾಷ್ಟ್ರೀಯ ಪ್ರಮಾಣ 40ಕ್ಕಿಂತಲೂ ಹೆಚ್ಚು. ಮಹಿಳಾ ಸಾಕ್ಷರತಾ ಮಟ್ಟ ಕಡಿಮೆಯಿರುವಂತಹ ರಾಜಸ್ಥಾನ ಮತ್ತು ಬಿಹಾರಗಳಲ್ಲಿ 3.4 ಗರ್ಭಧಾರಣಾ ದರವಿದ್ದು ದೇಶದಲ್ಲೇ ಅತ್ಯಕವಾಗಿದೆ. ಇಲ್ಲಿನ ಮಹಿಳಾ ಸಾಕ್ಷರತಾ ದರವು 50.7% ಆಗಿದೆ, ಇದು ದೇಶದಲ್ಲೇ ಅತ್ಯಂತ ಕಡಿಮೆ. ತಮಿಳುನಾಡಿನಲ್ಲಿ ಮಕ್ಕಳ ಮರಣ ಪ್ರಮಾಣವು 21 ಆಗಿದ್ದು, ಗರ್ಭಧಾರಣಾ ದರವು 1.7 ಆಗಿದೆ. ಇದು ಜನಸಂಖ್ಯೆಯನ್ನು ಸರಿದೂಗಿಸಲು ಅಗತ್ಯವಿರುವ 2.1ಕ್ಕಿಂತಲೂ ಕಡಿಮೆಯಾಗಿದೆ. ದೇಶದ ಹತ್ತು ರಾಜ್ಯಗಳ ಗಭರ್ಧಾರಣಾ ದರವು ಅಗತ್ಯವಿರುವ 2.1 ದರಕ್ಕಿಂತಲೂ ಕಡಿಮೆಯಾಗಿದೆ. ಆದರೆ ಕಡಿಮೆ ಗರ್ಭಧಾರಣಾ ದರ ಹೊಂದಿರುವ ರಾಜ್ಯಗಳಲ್ಲಿ ಶಿಶು ಮರಣ ಪ್ರಮಾಣಕ್ಕೂ ಸಂಬಂಧವಿದೆ ಎಂಬುದು ಸಂಪೂರ್ಣವಾಗಿ ಸ್ಪಷ್ಟವಾಗಿಲ್ಲ. ಗರ್ಭಧಾರಣಾ ದರವು ಕಡಿಮೆಯಿರುವ ಪಶ್ಚಿಮ ಬಂಗಾಳ, ಹಿಮಾಚಲ ಪ್ರದೇಶ ಮತ್ತು ಪಂಜಾಬ್ ಕಡಿಮೆ ಶಿಶು ಮರಣ ಪ್ರಮಾಣ ಹೊಂದಿರುವ ಅಗ್ರ ಐದು ರಾಜ್ಯಗಳ ಪೈಕಿ ಸ್ಥಾನ ಪಡೆದಿಲ್ಲ.

ಗರ್ಭಧಾರಣೆಯ ಮೇಲೆ ಪರಿಣಾಮ ಬೀರುವ ಅಂಶಗಳಲ್ಲಿ ಶಿಶು ಮರಣ ಪ್ರಮಾಣವೂ ಒಂದು ಎಂಬುದನ್ನು ಇದು ಸೂಚಿಸುತ್ತದೆ. ಗರ್ಭಧಾರಣಾ ದರದ ಮೇಲೆ ಪರಿಣಾಮ ಬೀರುವ ಇತರ ಅಂಶಗಳೆಂದರೆ ಶಿಕ್ಷಣ, ಆರೋಗ್ಯ ಸೇವೆಗಳ ಒದಗುವಿಕೆ ಮತ್ತು ಜನನ ನಿಯಂತ್ರಣದ ಬಗ್ಗೆ ಜಾಗೃತಿ. ಇಂಡಿಯಾಸ್ಪೆಂಡ್ ಗರ್ಭಧಾರಣೆ ಮತ್ತು ಶಿಶು ಮರಣ ಪ್ರಮಾಣವನ್ನು ಮಹಿಳೆಯರ ಶಿಕ್ಷಣ ಮಟ್ಟದ ಜೊತೆ ಹೋಲಿಸಿದಾಗ ಪರಸ್ಪರ ಸಂಬಂಧ ಕಂಡುಬಂತು. ಕಡಿಮೆ ಗರ್ಭಧಾರಣಾ ದರವಿರುವ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಮಹಿಳಾ ಸಾಕ್ಷರತಾ ಪ್ರಮಾಣವು ಹೆಚ್ಚಾಗಿದೆ. ಉದಾಹರಣೆಗೆ ತಮಿಳುನಾಡು ಶೇ. 89.8ನೊಂದಿಗೆ ದೇಶದ ಎರಡನೆ ಅತೀ ಹೆಚ್ಚು ಸುಶಿಕ್ಷಿತ ಮಹಿಳೆಯರನ್ನು ಹೊಂದಿರುವ ರಾಜ್ಯವಾಗಿದೆ ಮತ್ತು 1.7ರಂತೆ ದೇಶದ ಎರಡನೆ ಅತೀ ಕಡಿಮೆ ಗರ್ಭಧಾರಣಾ ದರವನ್ನು ಹೊಂದಿರುವ ರಾಜ್ಯ ಕೂಡಾ. ಮಹಿಳೆಯರಲ್ಲಿ ಸಾಕ್ಷರತೆಯು ತಡವಾದ ಮದುವೆ ಮತ್ತು ಗರ್ಭನಿರೋಧಕಗಳ ಉತ್ತಮ ಒದಗುವಿಕೆಯೊಂದಿಗೆ ಸಂಬಂಧ ಹೊಂದಿದೆ, ಹಾಗಾಗಿ ಜನಸಂಖ್ಯೆಯು ಸ್ಥಿರವಾಗುತ್ತದೆ. ಸುಶಿಕ್ಷಿತ ಮಹಿಳೆಯರು ಸಮಾಜದಲ್ಲಿ ಉತ್ತಮ ನಿಲುವನ್ನು ಹೊಂದಿರುತ್ತಾರೆ ಮತ್ತು ಮಗುವಿಗೆ ಉತ್ತಮ ಪೌಷ್ಠಿಕತೆ ಮತ್ತು ಲಸಿಕೆಯನ್ನು ನೀಡುವ ಮೂಲಕ ಆರೋಗ್ಯವನ್ನು ವೃದ್ಧಿಸಿ ಬದುಕುಳಿಯುವ ಸಾಧ್ಯತೆಯನ್ನು ಉತ್ತಮಗೊಳಿಸುತ್ತಾರೆ ಎಂದು ಲಂಡನ್ ಸ್ಕೂಲ್ ಆ್ ಇಕನಾಮಿಕ್ಸ್‌ನ ಜೀನ್ ಡ್ರೆಜ್, 2000ದಲ್ಲಿ ನಡೆಸಿದ ಅಧ್ಯಯನದಲ್ಲಿ ತಿಳಿದುಬಂದಿದೆ.

ಕೃಪೆ: ಇಂಡಿಯಾಸ್ಪೆಂಡ್

share
ಪ್ರಾಚಿ ಸಾಳ್ವೆ
ಪ್ರಾಚಿ ಸಾಳ್ವೆ
Next Story
X